Wednesday, September 23, 2020
Home ಅಂತರ್ ರಾಜ್ಯ ಹೈದರಾಬಾದ್ ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ತನ್ನ ಮಗುವನ್ನೇ ಮಾರಿದ ಮಹಾತಾಯಿ!

ಇದೀಗ ಬಂದ ಸುದ್ದಿ

ಮಹಾಮಾರಿ ʼಕೊರೊನಾʼ ಕುರಿತು ಬಹಿರಂಗವಾಯ್ತು ಮತ್ತೊಂದು ಆತಂಕಕಾರಿ...

ಕೊರೊನಾ ಮಹಾಮಾರಿಯ ಕರಿ ಛಾಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೊನಾದಿಂದ ಸಾಯುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಈ ಕೊರೊನಾ ಯಾವಾಗ ಕೊನೆಯಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ....

ಸುಶಾಂತ್ ಸಾವಿನ ಪ್ರಕರಣ: ನಟಿ ರಿಯಾಗೆ ಅಕ್ಟೋಬರ್...

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಅವಧಿಯನ್ನು ಅಕ್ಟೋಬರ್ 6 ರವರೆಗೆ ವಿಸ್ತರಿಸಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು...

ಬೈಂದೂರಿನ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ಉಪಕರಣ...

 ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣವನ್ನು...

ಹಿರಿಯ ನಟಿ ಆಶಾಲತಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ. ಐಎಎನ್ ಎಸ್...

ಭಾರತದಲ್ಲಿ 55 ಲಕ್ಷದ ಗಡಿ ದಾಟಿದ ಕೊರೊನಾ...

 ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದ್ದು, ಇದೀಗ ಸೋಂಕಿತರ ಸಂಖ್ಯೆ 55 ಲಕ್ಷದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ...

ಮುಂಬೈ ಕನಸು ನನಸಾಗಿಸಲು 45 ಸಾವಿರ ರೂ.ಗೆ ತನ್ನ ಮಗುವನ್ನೇ ಮಾರಿದ ಮಹಾತಾಯಿ!

ಹೈದರಾಬಾದ್: ಕನಸಿನ ನಗರಿ ಮುಂಬೈಗೆ ಹೋಗಬೇಕು, ಅಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಬಹಳಷ್ಟು ಮಂದಿಯ ಕನಸು. ಇದಕ್ಕಾಗಿ ಜನರು ಹಲವು ರೀತಿಯ ಕಷ್ಟ ಅನುಭವಿಸುತ್ತಾರೆ, ಅನೇಕ ರೀತಿಯ ತ್ಯಾಗಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬರು ಮಹಾತಾಯಿ ಮುಂಬೈ ಕನಸನ್ನು ನನಸು ಮಾಡುವ ಸಲುವಾಗಿ ತನ್ನ ಮಗುವನ್ನೇ ಮಾರಾಟ ಮಾಡಿದ್ದಾಳೆ.

ಹೈದರಾಬಾದ್ ನ ಹಬೀಬ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮಹಿಳೆ ತನ್ನ ಎರಡು ವರ್ಷದ ಗಂಡು ಮಗುವನ್ನು 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ.

ಪ್ರಕರಣ ದಾಖಲಿಸಿರುವ ಪೊಲೀಸರು 24 ಗಂಟೆಯಲ್ಲಿ ಮಗುವನ್ನು ರಕ್ಷಿಸಿದ್ದು, ಮತ್ತು ತಾಯಿಯನ್ನು ಬಂಧಿಸಿದ್ದಾರೆ.

22 ವರ್ಷದ ಶೇಖ್ ಜೋಯಾ ಖಾನ್ ಎಂಬ ಮಹಿಳೆ ಗಂಡನೊಂದಿಗೆ ಜಗಳ ಮಾಡಿಕೊಂಡು ಒಬ್ಬಂಟಿಯಾಗಿ ಬದುಕುತ್ತಿದ್ದಳು. ಮುಂಬೈಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದ ಆಕೆಗೆ ಮಗುವನ್ನು ಸಾಕುವುದು ಕಷ್ಟವಾಗಿತ್ತು. ಹೀಗಾಗಿ ಮಗುವನ್ನು ಮಾರಾಟ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಮಾರಾಟ ಮಾಡಿರುವ ವಿಷಯ ತಿಳಿದ ಮಗುವಿನ ತಂದೆ ಅಬ್ದುಲ್ ಮುಜಾಹಿದ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತಾಯಿಯನ್ನು ಮತ್ತು ಮಕ್ಕಳ ಮಾರಾಟ ಮಾಡುತ್ತಿದ್ದ  ಮಧ್ಯವರ್ತಿ ಸೇರಿ ಐವರನ್ನು ಬಂಧಿಸಿದ್ದಾರೆ.

TRENDING