Monday, September 21, 2020
Home ರಾಜ್ಯ ಇಂದಿನಿಂದ ರಾಜ್ಯದಲ್ಲಿ ಪ್ರಥಮ ಪಿಯುಸಿಗೆ ಅಡ್ಮಿಷನ್ ಶುರು

ಇದೀಗ ಬಂದ ಸುದ್ದಿ

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಪುನರಾರಂಭ

 ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಜ್ಯ ಸಾರಿಗೆ ಸಂಚಾರವನ್ನು ಇದೀಗ ಲಾಕ್‍ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಗನುಗುಣವಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ...

ಕೋವಿಡ್ ಮುಂಜಾಗ್ರತೆಗಳೊಂದಿಗೆ ತಾಜ್ ಮಹಲ್ ಪ್ರವಾಸಿಗರಿಗೆ ಮುಕ್ತ

ಪ್ರೇಮಸೌಧವೆಂದೇ ಖ್ಯಾತಿಗಳಿಸಿರುವ ತಾಜ್ ಮಹಲ್ ಸತತ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಮುಕ್ತವಾಗಿದೆ. ಕೊರೋನಾ ವೈರಸ್ ಲಾಕ್ ಡೌನ್...

ಪ್ರಥಮ ಬಾರಿಗೆ ಅನ್ ಲೈನ್ ನಲ್ಲಿ ಜೈನ...

ಮಂಗಳೂರು :- ಕರ್ನಾಟಕದಲ್ಲಿ ಜೈನ ಧರ್ಮ ಫೇಸ್ ಬುಕ್ಕಿನ ಪ್ರಾಯೋಜಿತ ವಿಶಿಷ್ಟ ಕಾರ್ಯಕ್ರಮ ಜೈನ ಮಾಧ್ಯಮ ಗೋಷ್ಠಿ 19 - 09 - 2020 ಶನಿವಾರದಂದು ರಾತ್ರಿ ಎಂಟು ಗಂಟೆಗೆ...

ತುಂಗಭದ್ರಾ ನದಿಯಲ್ಲಿ ಕೊಚ್ಚಿಹೊದ ಇಬ್ಬರು ಯುವಕರು

ತುಂಗಭದ್ರಾ ನದಿಯಲ್ಲಿ ಇಬ್ಬರು ಯುವಕರು ಹಾಗೂ ಚಕ್ಕಡಿ ಸಮೇತ ಎರಡು ಎತ್ತುಗಳು ಕೊಚ್ಚಿ ಹೋದ ಘಟನೆ ಸೋಮವಾರ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ. ಪ್ರಾಥಮಿಕ ವರದಿಯ...

ಭಾರತದಲ್ಲಿ ಮಾತ್ರ ಚಿನ್ನದ ದರ ಇಳಿಕೆ

ಭಾರತದಲ್ಲಂತೂ ಕೊರೊನಾ ಆತಂಕ ಮುಂದುವರಿದಿದ್ದರೂ ಚಿನ್ನದ ಫಿಸಿಕಲ್ ಬೇಡಿಕೆ ಕಡಿಮೆ ಆಗಿದೆ. ಮುಂಬರುವ ನವರಾತ್ರಿ ಹೊತ್ತಿಗೆ ಮತ್ತೆ ಚಿನ್ನಕ್ಕೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಆಭರಣ ವರ್ತಕರಿದ್ದಾರೆ. ಗ್ರಾಹಕರನ್ನು ಸೆಳೆಯಬೇಕು...

ಇಂದಿನಿಂದ ರಾಜ್ಯದಲ್ಲಿ ಪ್ರಥಮ ಪಿಯುಸಿಗೆ ಅಡ್ಮಿಷನ್ ಶುರು

ಬೆಂಗಳೂರು (. 13): ಕರ್ನಾಟಕದಲ್ಲಿ ಈಗಾಗಲೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ಅಡ್ಮಿಷನ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳ ಪಿಯುಸಿ ಅಡ್ಮಿಷನ್ ಇಂದಿನಿಂದ ಆರಂಭವಾಗಲಿದೆ.

ಯಾವ ಕಾಲೇಜುಗಳಲ್ಲಿ ಆನ್​ಲೈನ್ ಸೌಕರ್ಯ ಇರುತ್ತದೋ ಆ ಎಲ್ಲ ಕಡೆ ಆನ್​ಐನ್ ಮೂಲಕವೇ ಪ್ರವೇಶಾತಿ ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿದೆ. ಆನ್​ಲೈನ್ ಅಡ್ಮಿಷನ್​ನ ಆಯ್ಕೆ ಇಲ್ಲದಿರುವ ಕಾಲೇಜುಗಳಲ್ಲಿ ಎಂದಿನಂತೆ ನೇರ ನೇಮಕಾತಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಆದೇಶಿಸಲಾಗಿದೆ.

ಹಾಗೇ, ಪ್ರಥಮ ಪಿಯುಸಿಗೆ ಅಡ್ಮಿಷನ್ ವೇಳೆ ಕೊರೋನಾ ನೆಪದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಒಂದುವೇಳೆ ಪದವಿಪೂರ್ವ ಕಾಲೇಜುಗಳು ಇಚ್ಛಿಸಿದರೆ ಕಡಿಮೆ ಶುಲ್ಕ ಪಡೆಯಬಹುದು. ತರಗತಿಗಳ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಶಿಕ್ಷಕರ ವಿವರಗಳನ್ನೂ ಪೋಷಕರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಈ ವರ್ಷ ಸುಮಾರು 8.40 ಲಕ್ಷ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಕಳೆದ ತಿಂಗಳು ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಜೂನ್ 25ರಿಂದ ಜುಲೈ 3ರವರೆಗೆ ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗಿತ್ತು. ಆಗಸ್ಟ್​ 10ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿತ್ತು. ಈ ವರ್ಷ ಶೇ. 71.80ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ಆರು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫಲಿತಾಂಶ ಕಡಿಮೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ.73.70ರಷ್ಟು ಫಲಿತಾಂಶ ಬಂದಿತ್ತು. ಆದರೆ, ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿರಲಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಪರಿಣಾಮ ಈ ವರ್ಷದ ಫಲಿತಾಂಶ ಶೇ.71.80ರಷ್ಟು ಬಂದಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 5,82,316 ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

TRENDING