Thursday, September 24, 2020
Home ಸುದ್ದಿ ಜಾಲ ಉಸಿರು, ಕೆಮ್ಮು, ಧ್ವನಿಯಿಂದಲೇ ಕೊರೊನಾ ಪರೀಕ್ಷೆ!

ಇದೀಗ ಬಂದ ಸುದ್ದಿ

ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿ...

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ. ಸಂಜನಾ ಪರ ವಕೀಲರು...

ಡ್ರಗ್ಸ್ ಪ್ರಕರಣ :ನಾಳೆ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಲಿದ್ದಾರೆ...

 ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನ ಹೈ ಪ್ರೊಫೈಲ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಎನ್.ಸಿ.ಬಿ. ಸಮನ್ಸ್ ನೀಡಿದ್ದು, ನಾಳೆ ನಟಿ...

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರಿಯಲ್ ಎಸ್ಟೇಟ್...

 ಉಡುಪಿ : ಉಡಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ ಎಂದು...

ಕೇಂದ್ರ ಸರ್ಕಾರ ರೈತರ ನಂತರ, ಕಾರ್ಮಿಕರನ್ನು...

ನವದೆಹಲಿ: ಸಂಸತ್ತು ಅಂಗೀಕರಿಸಿದ ಮೂರು ಕಾರ್ಮಿಕ ಸುಧಾರಣಾ ಮಸೂದೆಗಳ ಕುರಿತು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರ ರೈತರ ನಂತರ ಕಾರ್ಮಿಕರನ್ನು...

ಪಂಜಾಬ್ ನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ:...

ಮೊಹಾಲಿ : ನಿರ್ಮಾಣ ಹಂತದ ಎರಡು ಮಹಡಿಯ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು ಕಟ್ಟಡದ ಮಾಲೀಕ ಸೇರಿ ಹಲವರು ಗಾಯಗೊಂಡು ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ...

ಉಸಿರು, ಕೆಮ್ಮು, ಧ್ವನಿಯಿಂದಲೇ ಕೊರೊನಾ ಪರೀಕ್ಷೆ!

 ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ‘ಕೋಸ್ವರ’ ಯೋಜನಾ ತಂಡವು ಉಸಿರು, ಕೆಮ್ಮು ಹಾಗೂ ಧ್ವನಿಯ ಆಧಾರದಲ್ಲಿ ಕೋವಿಡ್‌ ಪತ್ತೆಹಚ್ಚುವ ಸಾಧನ ರೂಪಿಸುತ್ತಿದೆ. ಇದರಿಂದ ರೋಗ ಪತ್ತೆ ನಡೆಸಲು ವ್ಯಕ್ತಿಯು ಐದರಿಂದ ಏಳು ನಿಮಿಷಗಳ ಉಸಿರಾಟ, ಕೆಮ್ಮು ಹಾಗೂ ಧ್ವನಿಯನ್ನು ಒದಗಿಸಬೇಕಾಗುತ್ತದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಇವರ ಪರೀಕ್ಷಾ ವಿಧಾನವನ್ನು ಪರಿಶೀಲಿಸಿದ್ದು, ರೋಗ ಪತ್ತೆ ಸಾಧನವನ್ನು ದೃಢೀಕರಿಸಲು ಸಾಕಷ್ಟು ಧ್ವನಿ ಮಾದರಿಗಳನ್ನು ಸಂಗ್ರಹಿಸಿ ತರುವಂತೆ ಸೂಚಿಸಿದೆ. ಇದುವರೆಗೆ ಯೋಜನಾ ತಂಡವು 1,100 ಧ್ವನಿ ಮಾದರಿಗಳನ್ನು ಸಂಗ್ರಹಿಸಿದೆ. ಸಂಗ್ರಹಿಸಲಾದ ದತ್ತಾಂಶವನ್ನು ಸಂಕೇತ ಸಂಸ್ಕರಣೆ (ಸಿಗ್ನಲ್ ಪ್ರೊಸೆಸಿಂಗ್‌) ಹಾಗೂ ಯಾಂತ್ರಿಕ ಕಲಿಕೆ (ಮೆಷೀನ್‌ ಲರ್ನಿಂಗ್‌) ತಂತ್ರಗಳ ಮೂಲಕ ವಿಶ್ಲೇಷಿಸಲಾಗುತ್ತದೆ.

ಧ್ವನಿಯ ತೀಕ್ಷ್ಣತೆ ಮತ್ತು ಕಂಪನಾಂಕವು ಕೊರೊನಾ ಸೋಂಕು ಹೊಂದಿರುವವರನ್ನು ಹಾಗೂ ಸೋಂಕು ಇಲ್ಲದವರನ್ನು ಪ್ರತ್ಯೇಕಿಸಲು ನೆರವಾಗುತ್ತದೆ. ಈ ತಪಾಸಣಾ ಸಾಧನವನ್ನು ವೆಬ್‌ ಅಥವಾ ಮೊಬೈಲ್‌ ಆಪ್ಲಿಕೇಷನ್‌ ರೂಪದಲ್ಲೂ ಬಿಡುಗಡೆ ಮಾಡುವ ಚಿಂತನೆಯನ್ನು ಈ ತಂಡವು ಹೊಂದಿದೆ. ಈ ಆಯಪ್‌ನಲ್ಲಿ ಗೋಚರಿಸುವ ಅಂಕಗಳು ವ್ಯಕ್ತಿಯು ಕೊರೊನಾ ಸೋಂಕು ಹೊಂದಿರುವ ಸಾಧ್ಯತೆಯನ್ನು ಸೂಚಿಸಲಿವೆ.

‘ಈ ಸಾಧನದ ದೃಢೀಕರಣ ಪರೀಕ್ಷೆ ಸಲುವಾಗಿ 2000ಕ್ಕೂ ಹೆಚ್ಚು ಧ್ವನಿ ಮಾದರಿಗಳನ್ನು ತಪಾಸಣೆಗೆ ಒಳಪಡಿಸಬೇಕಿದೆ. ಆರೋಗ್ಯಯುತವಾಗಿರುವವರು ಹಾಗೂ ಕೋವಿಡ್‌ ಸೋಂಕಿತರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಧ್ವನಿ ಮಾದರಿ ನೀಡುವಂತೆ ಈ ಸಂಶೋಧಕರು ಕೋರಿದ್ದಾರೆ. ಇದಕ್ಕಾಗಿ ವೆಬ್‌ಸೈಟ್‌ನ ಸಂಪರ್ಕ ಕೊಂಡಿಯನ್ನೂ (https://coswara.iisc.ac.in) ನೀಡಿದ್ದಾರೆ.

ಧ್ವನಿ ಪತ್ತೆ (ಸ್ಪೀಚ್‌ ರೆಕಗ್ನಿಷನ್‌), ಆಳ ಅಧ್ಯಯನ (ಡೀಪ್‌ ಲರ್ನಿಂಗ್‌) ನರವಿಜ್ಞಾನ (ನ್ಯೂರೋಸೈನ್ಸ್‌) ಕ್ಷೇತ್ರದ ತಜ್ಞರಾಗಿರುವ ಐಐಎಸ್ಸಿಯ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀರಾಮ ಗಣಪತಿ ಈ ಸಂಶೋಧನೆಯ ರೂವಾರಿ.

‘ಕೋವಿಡ್‌ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಧ್ವನಿ ಉತ್ಪಾದನಾ ಸಾಮರ್ಥ್ಯವು ಕುಗ್ಗುತ್ತದೆ. ನಾವು ಕೆಮ್ಮಿನಲ್ಲಿ ವಿಭಿನ್ನ ಧ್ವನಿ ವಿನ್ಯಾಸಗಳನ್ನು ಹುಡುಕುತ್ತಿದ್ದೇವೆ. ಸಾಮಾನ್ಯ ರೋಗಿಗಳ ಕೆಮ್ಮು ಲಯಬದ್ಧವಾಗಿರುತ್ತದೆ. ನಿರ್ದಿಷ್ಟ ಕಂಪನಾಂಕದಲ್ಲಿರುತ್ತದೆ. ಕೋವಿಡ್‌ ರೋಗಿಗಳ ಕೆಮ್ಮು ಬೇರೆ ಬೇರೆ ಕಂಪನಾಂಕಗಳನ್ನು ಹೊಂದಿರುತ್ತದೆ’ ಎಂದು ಶ್ರೀರಾಮ ಗಣಪತಿ ತಿಳಿಸಿದರು.

‘ನಿರ್ದಿಷ್ಟ ಕಂಪನಾಂಕವು ಕಂಡುಬರದೇ ಹಾಗೂ ಕಂಪನಾಂಕದ ಸುತ್ತ ತಲ್ಲಣಗಳು ಕಾಣಿಸಿಕೊಂಡರೆ, ಅದರ ಸಂಕೇತಗಳನ್ನು ಪಡೆದು ನಾವು ಕಂಪ್ಯೂಟರ್‌ ಆಲ್ಗಾರಿಥಂನಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತೇವೆ. ಅದಕ್ಕೊಂದು ಮಾದರಿಯನ್ನು ಸೃಷ್ಟಿಸುತ್ತೇವೆ. ಅದು ಈ ತಲ್ಲಣಗಳನ್ನು ಗುರುತಿಸುತ್ತದೆ. ಈ ತಲ್ಲಣಗಳು ನಿರ್ದಿಷ್ಟ ಮಿತಿಯನ್ನು ತಲುಪಿದಾಗ ನಾವು ಕೋವಿಡ್‌ ಅನ್ನು ಗುರುತಿಸಬಹುದು. ಈ ಮಿತಿಯನ್ನು ಪತ್ತೆಹಚ್ಚಲು ನಾವು ಈಗಾಗಲೇ ಗುರುತಿಸಿರುವ ಕೊರೊನಾ ಸೋಂಕಿತರ ಧ್ವನಿ ಮಾದರಿಗಳನ್ನು ಬಳಸಿಕೊಳ್ಳುತ್ತೇವೆ’ ಎಂದು ಅವರು ವಿವರಿಸಿದರು.

ಈ ತಂಡವು ಆರೋಗ್ಯಯುತವಾಗಿರುವವರ ಧ್ವನಿ ಮಾದರಿಗಳನ್ನೂ ಬಳಸಿಕೊಂಡು ಅದಕ್ಕೆ ಸಂಬಂಧಿಸಿದ ದತ್ತಾಂಶವನ್ನು ಹೊಂದಿದೆ. ಅದರ ಆಧಾರದಲ್ಲಿ ಸೂಕ್ತ ಮಿತಿಯನ್ನು ಗುರುತಿಸಿದೆ. ಅಮೆರಿಕದ ಕಾರ್ನೆಗಿ ಮೆಲನ್‌ ಹಗೂ ಬ್ರಿಟನ್‌ನ ಕೇಂಬ್ರಿಜ್‌ ವಿಶ್ವವಿದ್ಯಾಲಯಗಳು ಕೂಡಾ ಧ್ವನಿ ಆಧಾರಿತ ಪರೀಕ್ಷಾ ವಿಧಾನದ ಬಗ್ಗೆ ಪ್ರಯತ್ನಿಸುತ್ತಿವೆ. ಕೆಮ್ಮಿನ ಸದ್ದಿನ ಆಧಾರದಲ್ಲಿ ಆಸ್ತಮಾ ಹಾಗೂ ನ್ಯುಮೋನಿಯಾ ಪತ್ತೆಹಚ್ಚುವ ಆಯಪ್ ಅನ್ನು ಟೆಲಿಮೆಡಿಸಿನ್‌ ಸಾಧನವನ್ನಾಗಿ ಬಳಸುವುದಕ್ಕೆ ಆಸ್ಟ್ರೇಲಿಯಾದಲ್ಲಿ ಅನುಮತಿ ನೀಡಲಾಗಿದೆ.

ರಾಸಾಯನಿಕ ಪರೀಕ್ಷೆಗಳಿಗೆ ಪರ್ಯಾಯವಲ್ಲ
ತೀರಾ ಸರಳವಾದ ಹಾಗೂ ಮಿತವ್ಯಯಿಯಾದ ರೋಗ ಪತ್ತೆ ವಿಧಾನವನ್ನು ಅನುಸರಿಸುವ ಈ ಸಾಧನದ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಭಾಗಶಃ ಯಶಸ್ಸು ಸಿಕ್ಕರೂ ಕೋವಿಡ್‌ ಸಾಂಕ್ರಾಮಿಕ ರೋಗ ಪತ್ತೆಗಾಗಿ ಭಾರಿ ಪ್ರಮಾಣದಲ್ಲಿ ಆರಂಭಿಕ ತಪಾಸಣೆ ನಡೆಸುವುದಕ್ಕೆ ಅದನ್ನು ಬಳಸಬಹುದು. ಈ ಸಂಭಾವ್ಯ ಸಾಧನವು ರಾಸಾಯನಿಕಗಳನ್ನು ಬಳಸಿ ನಡೆಸುವ ಕೋವಿಡ್‌ ಪರೀಕ್ಷೆಗೆ ಪರ್ಯಾಯವಲ್ಲ. ಆದರೆ, ಈಗಾಗಲೇ ಬಳಕೆಯಲ್ಲಿರುವ ಪರೀಕ್ಷಾ ವಿಧಾನಗಳಿಗೆ ಇದನ್ನು ಪೂರಕವಾಗಿ ಬಳಸಬಹುದು.

TRENDING