Thursday, September 24, 2020
Home ಬೆಂಗಳೂರು ಬೆಂಗಳೂರು ಗಲಭೆ : 9 ಎಫ್‌ಐಆರ್, 17 ಪ್ರಮುಖ ಆರೋಪಿಗಳು - ನಾಲ್ವರ ಬಂಧನ

ಇದೀಗ ಬಂದ ಸುದ್ದಿ

ತಮಿಳು ನಟನನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ ಪಾಪ್‌...

ಚೆನ್ನೈ: ಖ್ಯಾತ ಪಾಪ್‌ ಗಾಯಕ ಜಸ್ಟೀನ್‌ ಬೈಬರ್‌ ಅವರು ತಮಿಳಿನ ಸಂಗೀತ ಸಂಯೋಜಕ, ನಟ ಜಿ.ವಿ. ಪ್ರಕಾಶ್‌ ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಿದ್ದಾರೆ. ಜಿ.ವಿ. ಪ್ರಕಾಶ್‌ ಅವರು...

ಲಡಾಖ್‌ ಗಡಿ ಪ್ರದೇಶಕ್ಕೆ ಹೊರಡಲು ಚೀನಾ ಸೈನಿಕರ...

 ತೈಪೆ: ಲಡಾಖ್‌ನ ಎಲ್‌ಎಸಿಯ ದುರ್ಗಮ ವಾತಾವರಣದಲ್ಲಿ ಕರ್ತವ್ಯಕ್ಕಿಳಿಯಲು ಚೀನೀ ಸೈನಿಕರು ಎಷ್ಟು ಭೀತರಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ವೀಡಿಯೋವೊಂದು ವೈರಲ್‌ ಆಗಿದೆ.

ಸಚಿವ ಸುರೇಶ್ ಅಂಗಡಿ ನಿಧನಕ್ಕೆ ರಾಜಕೀಯ ನಾಯಕರು...

ನವದೆಹಲಿ : ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ಸಾವನಪ್ಪಿದ್ದು, ಅಗಲಿದ ನಾಯಕನಿಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ...

ಐಪಿಎಲ್ 2020 : ಕೆಕೆಆರ್ ವಿರುದ್ಧ...

ಬುಧವಾರ ಅಬುದಾಬಿಯಲ್ಲಿ ನಡೆದ ಐಪಿಎಲ್ ನ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಗುಜರಾತ್‌ : ತೈಲ, ಅನಿಲ ಸಂಸ್ಕರಣಾ ಘಟಕದಲ್ಲಿ...

ಸೂರತ್‌ (ಗುಜರಾತ್‌): ಸೂರತ್‌ನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಸ್ಥಾವರದಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಟೆಂಡರ್ ಪ್ರಸ್ತುತ ಸ್ಥಳದಲ್ಲಿದೆ.

ಬೆಂಗಳೂರು ಗಲಭೆ : 9 ಎಫ್‌ಐಆರ್, 17 ಪ್ರಮುಖ ಆರೋಪಿಗಳು – ನಾಲ್ವರ ಬಂಧನ

ಬೆಂಗಳೂರು(. 13): ಮೊನ್ನೆ ರಾತ್ರಿ ದೇವರ ಜೀವನಹಳ್ಳಿ ಸೇರಿದಂತೆ ಮೂರು ಪ್ರದೇಶಗಳಲ್ಲಿ ನಡೆದ ಗಲಭೆ ಘಟನೆಗಳ ಸಂಬಂಧ ಪೊಲೀಸರು ಈವರೆಗೆ 9 ಎಫ್ಐಆರ್ ದಾಖಲಿಸಿರುವುದು ತಿಳಿದುಬಂದಿದೆ. ಡಿಜೆ ಹಳ್ಳಿಯಲ್ಲಿ 6 ಹಾಗೂ ಕಾಡುಗೊಂಡನಹಳ್ಳಿಯಲ್ಲಿ (ಕೆಜಿ ಹಳ್ಳಿ) 3 ಎಫ್ಐಆರ್ ಹಾಕಲಾಗಿದೆ. ಕೆಜಿ ಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ಗಳಲ್ಲಿ 17 ಮಂದಿಯನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಇವರೆಲ್ಲರೂ ಎಸ್ಡಿಪಿಐ ಸದಸ್ಯರೇ ಆಗಿದ್ದಾರೆ. ಕಾವಲ್ ಬೈರಸಂದ್ರದಲ್ಲೂ ಗಲಭೆಗಳಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.

ಕಾಡುಗೊಂಡನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎಫ್​ಐಆರ್​ನಲ್ಲಿ ಹೆಸರಿಸಲಾಗಿರುವ 17 ಆರೋಪಿಗಳ ಪೈಕಿ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಅಬ್ಬಾಸ್ ಎ1, ಫಿರೋಜ್ ಎ2, ಮುಜಾಮಿಲ್ ಎ3, ಹಬೀಬ್ ಎ4, ಪೀರ್ ಪಾಷಾ ಎ5 ಸೇರಿದಂತೆ 17 ಆರೋಪಿಗಳನ್ನ ಹೆಸರಿಸಲಾಗಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಫೈರೋಜ್ ಖಾನ್ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಟಿಪ್ಪು ಆರ್ಮಿ ಎಂಬ ಗ್ರೂಪ್ ರಚಿಸಿಕೊಂಡಿದ್ದ ಫೈರೋಜ್ ಖಾನ್, ಮುಂಚಿತವಾಗಿ ಅಂಗಡಿ ಬಂದ್ ಮಾಡುವುದು, ಗಲಭೆಯನ್ನ ಹೇಗೆ ಮಾಡಬೇಕು, ಯಾರ್ಯಾರು ಯಾವ್ಯಾವ ಜಾಗದಲ್ಲಿ ಇರಬೇಕು ಇತ್ಯಾದಿ ರೂಪುರೇಷೆ ಮಾಡಿದ್ದರೆನ್ನಲಾಗಿದೆ.

ಈಗ ಬಂಧಿತವಾಗಿರುವ ನಾಲ್ವರು ಪ್ರಮುಖ ಆರೋಪಿಗಳು ಸೇರಿ 150 ಮಂದಿಯನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತಿದೆ.

ಇನ್ನು, ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪಿ ನವೀನ್​ನನ್ನು ಪೊಲೀಸರು ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ಧಾರೆ. ನಿನ್ನೆ ಈತನನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಯ ಅಗತ್ಯದ ಕಾರಣದಿಂದ ಈತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.  

TRENDING