Tuesday, September 22, 2020
Home ಜಿಲ್ಲೆ ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ ವಿರುದ್ದ ಆಕ್ರೋಶ

ಇದೀಗ ಬಂದ ಸುದ್ದಿ

ಪೂರಕ ಪರೀಕ್ಷೆ: 723 ವಿದ್ಯಾರ್ಥಿಗಳು ಗೈರುಹಾಜರು

 ಬೆಳಗಾವಿ: ಜಿಲ್ಲೆಯಾದ್ಯಂತ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸೋಮವಾರ ಆರಂಭವಾಯಿತು. 'ಮೊದಲ ದಿನ ನಿಗದಿಯಾಗಿದ್ದ ಗಣಿತ ವಿಷಯದ ಪರೀಕ್ಷೆ ಸುಗಮವಾಗಿ ನಡೆಯಿತು. ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ...

ರಾಜ್ಯದಲ್ಲಿಂದು 7339 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್...

ಬೆಂಗಳೂರು : ರಾಜ್ಯದಲ್ಲಿ ಇಂದು 7339 ಮಂದಿಗೆ ಕೊರೊನಾ ಸೋಂಕು ಧೃಡವಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5,26,876 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು...

ಡ್ರಗ್ಸ್ ಪ್ರಕರಣ : ವಿಚಾರಣೆ ಎದುರಿಸಿದ ನಟ...

ಬೆಂಗಳೂರು, ಸೆ. 21: ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನೊಂದೆಡೆ ಎನ್ ಸಿಬಿ ಡ್ರಗ್ ಪೆಡ್ಲರ್...

ಎಲ್‌ಕೆಜಿ, ಯುಕೆಜಿ : ಅಂಗನವಾಡಿಯಲ್ಲೇ ನಡೆಸಿ

ಚಿತ್ರದುರ್ಗ: ಸರ್ಕಾರಿ ಪಬ್ಲಿಕ್ ಶಾಲೆಗಳಲ್ಲಿ 'ಎಲ್‌ಕೆಜಿ, ಯುಕೆಜಿ ತರಗತಿ' ನಡೆಸುವ ಬದಲು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಮಂಡಳಿ ಕಾರ್ಯಕರ್ತೆಯರು ಸೋಮವಾರ ಪ್ರತಿಭಟನೆ...

ಶೀಘ್ರದಲ್ಲಿಯೇ ರಫೇಲ್ ಜೆಟ್ ಹಾರಿಸಲಿದ್ದಾರೆ ಮಹಿಳಾ ಪೈಲಟ್

 ನವದೆಹಲಿ, ಸೆ 21: ಅಂಬಾಲಾ ವಾಯುನೆಲೆಯಲ್ಲಿನ ಸಂಪೂರ್ಣ ಪುರುಷ ಪೈಲಟ್‌ಗಳ ರಫೇಲ್ ತಂಡಕ್ಕೆ ಶೀಘ್ರದಲ್ಲಿಯೇ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಲಿದ್ದಾರೆ. ಭಾರತೀಯ ವಾಯು ಪಡೆಯಲ್ಲಿ ಸಕ್ರಿಯರಾಗಿರುವ...

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ ವಿರುದ್ದ ಆಕ್ರೋಶ

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ಥರಾದ ಜನರಿಗೆ ಮನೆಗಳ ನಿರ್ಮಾಣ ಮತ್ತು ಪರಿಹಾರ ಕೊಡುವುದಾಗಿ ಪೊಳ್ಳು ಭರವಸೆ ಕೊಡುವದನ್ನು  ನಿಲ್ಲಿಸಿ ಕೂಡಲೇ ಸಂಕಷ್ಟಕ್ಕೆ ಸ್ಪಂದಿಬೇಕು ಮತ್ತು ಬೀದಿ ಪಾಲಾಗುತ್ತಿರುವ ಬಡಕುಟುಂಬಗಳ ರಕ್ಷಣೆಯ ಜೊತೆಗೆ ಪ್ರವಾಹದಿಂದ ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಾಮಾಜಿಕ ಹೋರಾಟಗಾರ ದೀಪಕ ಶಿಂಧೇ 2005 ರಲ್ಲಿ ಹಿಪ್ಪರಗಿ ಆಣೆಕಟ್ಟು ನಿರ್ಮಾಣದಿಂದ ಮತ್ತು 2018,19 ರಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಹಲವು ಜನರ ಜೀವಹಾನಿಯಾಗಿದ್ದು ಜಾನುವಾರುಗಳು ಕೂಡ ಸಾವನ್ನಪ್ಪಿವೆ. ಸಾವಿರಾರು ಕುಟುಂಬಗಳು ಮನೆ ಕಳೆದುಕೊಂಡಿದ್ದು ಹಲವು ಕುಟುಂಬಗಳು ಬೀಳುವ ಹಂತದ ಮನೆಗಳಲ್ಲಿ ವಾಸಾವಾಗಿವೆ. ಆದ್ದರಿಂದ ಸಂತ್ರಸ್ಥರಾದ ಕುಟುಂಬಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ವಿಳಂಬದ ಮೂಲಕ ಅನ್ಯಾಯ ಮಾಡುತ್ತಿದ್ದು ನದಿ ತೀರದ ಗ್ರಾಮಗಳ ಜನರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸದೆ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ತಹಶಿಲ್ದಾರ ಮೂಲಕ ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ನೀಡಿದ ಮನವಿಯಲ್ಲಿ  ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ತೀರ್ಥ ಗ್ರಾಮದ ಬಸವರಾಜ ಕಾಂಬಳೆ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು ಮತ್ತು ಸ್ಥಳಾಂತರಕ್ಕೆ ಒತ್ತಾಯಿಸುತ್ತಿರುವ ಗ್ರಾಮಗಳಿಗೆ ಸ್ಥಳ ಗುರುತಿಸಿ ಗ್ರಾಮಗಳ ಸ್ಥಳಾಂತರ ಮಾಡುವುದಲ್ಲದೆ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಭರವಸೆ ಕೊಟ್ಟಂತೆ ಪ್ರತಿ ತಿಂಗಳು 5000 ರೂಪಾಯಿ ಬಾಡಿಗೆ ಸಂದಾಯ ಮಾಡುವಂತೆ ಹೊತ್ತಾಯ ಮಾಡಲಾಯಿತು.

ಇದೆ ವೇಳೆ ಕೃಷ್ಣಾ ನದಿ ನೀರು ಹೋರಾಟ ಸಮೀತಿ ಹಾಗೂ ರೈತ ಅಭಿವೃದ್ಧಿ ಸೇವಾ ಸಮೀತಿಯಿಂದ ಕಾಗವಾಡ ಶಾಸಕ ಹಾಗೂ ಜವಳಿಖಾತೆ ಸಚೀವ ಶ್ರೀಮಂತ ಪಾಟೀಲ ವಿರುದ್ದ ಮನವಿ ಸಲ್ಲಿಸಿ ಮಾತನಾಡಿದ ಬಸನಗೌಡ ಬಮ್ನಾಳ ಮೊಳವಾಡ ಗ್ರಾಮದಲ್ಲಿ ಕಾಟಾಚಾರದ ಭೇಟಿ ನೀಡಿ ಅಲ್ಲಿನ ಜನರು ತರಾಟೆಗೆ ತೆಗೆದುಕೊಂಡ ಸಮಯದಲ್ಲಿ ಉತ್ತರಿಸಲಾಗದೆ ಖಾಸಗಿ ವಾಹಿನಿಯಲ್ಲಿ ಮಾತನಾಡುವಾಗ ಕುಡುಕರು ಬಂದು ದಾಂಧಲೆ ಮಾಡಿದ್ದಾರೆ ಎನ್ನುವ ಮೂಲಕ ಕ್ಷೇತ್ರದ ಜನರಿಗೆ, ಮತದಾರರಿಗೆ ಹಾಗೂ ಸಂತ್ರಸ್ತರಿಗೆ ಅಪಮಾನ ಮಾಡಿದ್ದು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು, ಇಲ್ಲದಿದ್ದರೆ ರಾಜ್ಯ ಸರ್ಕಾರ ಶ್ರೀಮಂತ ಪಾಟೀಲ ಅವರ ಶಾಸಕ ಹಾಗೂ ಸಚೀವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

 ವಿಲಾಸ ಕಾಂಬಳೆ

 ದಿ ನ್ಯೂಸ್ ೨೪ ಕನ್ನಡ, ಅಥಣಿ

TRENDING