Tuesday, October 27, 2020
Home ಜಿಲ್ಲೆ ಹಾವೇರಿ ಹಾವೇರಿ | ವೈದ್ಯರು, ಪೊಲೀಸ್‌ ಸೇರಿ 45 ಮಂದಿಗೆ ಕೊರೊನಾ

ಇದೀಗ ಬಂದ ಸುದ್ದಿ

ಸರಳ ದಸರಾವಾದರೂ ಅತ್ಯಂತ ಯಶಸ್ವಿಯಾಗಿ ನೆರವೇರಿದೆ –...

ಮೈಸೂರು: 10 ದಿನಗಳ ದಸರಾ ಸರಳವಾಗಿ ನೆರವೇರಿದೆ. ಸರಳ ದಸರಾವಾದರೂ ಅತ್ಯಂತ ಯಶಸ್ವಿಯಾಗಿ ನೆರವೇರಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್​.ಟಿ ಸೋಮಶೇಖರ್​ ಅವರು ಮಂಗಳವಾರ ಹೇಳಿದರು.

ಮದರಸಾದಲ್ಲಿ ಬಾಂಬ್ ಸ್ಫೋಟ :7 ಮಕ್ಕಳ ಸಾವು...

ಪೇಶಾವರ : ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಮದರಸಾದ ಮೇಲೆ ಬಾಂಬ್​ ದಾಳಿ ನಡೆದಿದೆ. ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಇಸ್ಲಾಂ ಧರ್ಮದ ಬೋಧನೆಗಳ...

ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕಿ ಖುಷ್ಬೂ ಸೇರಿ...

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ನಟಿ ಖುಷ್ಬೂ ಸುಂದರ್ ಗೆ ತಮಿಳುನಾಡು ಪೊಲೀಸರು ಶಾಕ್ ನೀಡಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

ಬಂಡೀಪುರದಲ್ಲಿ ನಟ ಧನ್ವೀರ್​​ ವಿರುದ್ಧ ಎಫ್ಐಆರ್

ಚಾಮರಾಜನಗರ: ನಟ ಧನ್ವೀರ್ ವಿರುದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಮೀಸಲು ಪ್ರದೇಶದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972- ಸೆಕ್ಷನ್...

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಹಾವೇರಿ | ವೈದ್ಯರು, ಪೊಲೀಸ್‌ ಸೇರಿ 45 ಮಂದಿಗೆ ಕೊರೊನಾ

 ಹಾವೇರಿ: ಸರ್ಕಾರಿ ವೈದ್ಯರು, ಪೊಲೀಸ್ ಹಾಗೂ ಲ್ಯಾಬ್‍ ಟೆಕ್ನೀಶಿಯನ್‌ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ 45 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 76 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1889 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1098 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಸೋಮವಾರದ ಮೂರು ಸಾವು ಸೇರಿ ಒಟ್ಟಾರೆ 39 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 752 ಸಕ್ರಿಯ ಪ್ರಕರಣಗಳಿವೆ.

ಸೋಮವಾರ ಪತ್ತೆಯಾದ ಪ್ರಕರಣಗಳಲ್ಲಿ ಬ್ಯಾಡಗಿ-6, ಹಾನಗಲ್-3, ಹಾವೇರಿ-9, ಹಿರೇಕೆರೂರು-4, ರಾಣೆಬೆನ್ನೂರು-9, ಸವಣೂರ ಹಾಗೂ ಶಿಗ್ಗಾವಿ ತಲಾ 7 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು-3, ಮಲ್ಲೂರ, ಶಿಡೇನೂರ, ಆಣೂರ ತಲಾ ಓರ್ವರಿಗೆ ಹಾಗೂ ಹಾನಗಲ್, ಬೊಮ್ಮನಹಳ್ಳಿ, ಅಕ್ಕಿಆಲೂರು ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ-3, ಹಾವನೂರು-2, ಹರಳಹಳ್ಳಿ, ಕಂಚಾರಗಟ್ಟಿ, ರಾಂಪುರ, ಹಂದಿಗನೂರು ತಲಾ ಒಬ್ಬರಿಗೆ ಹಾಗೂ ಸವಣೂರ-2 ಹಾಗೂ ಹತ್ತಿಮತ್ತೂರು-5, ರಾಣೇಬೆನ್ನೂರು-2, ಯಲ್ಲಾಪುರ, ಕುರುಬಗೇರಿ, ಅರೇಮಲ್ಲಾಪುರ ತಲಾ ಒಬ್ಬರಿಗೆ, ಶಿಗ್ಗಾವಿ-1, ಬಂಕಾಪುರ-2, ಬನ್ನೂರ-2, ಗಂಗೀಭಾವಿ, ಗಣಿಯನೂರ ತಲಾ ಒಬ್ಬರಿಗೆ, ಕಣವಿಸಿದ್ದಗೇರಿ-2 ,ಹಿರೇಕೆರೂರು, ಹಾಗೂ ಮಾಸೂರ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಮರಣದ ವಿವರಹಾವೇರಿ ತಾಲೂಕಿನ ರಾಮಾಪುರದ 46 ವರ್ಷದ ಪುರುಷ (ಪಿ-156401) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 1ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆಗಸ್ಟ್ 2ರಂದು ಮೃತಪಟ್ಟಿದ್ದಾರೆ.

ಹಿರೇಕೆರೂರು ತಾಲ್ಲೂಕಿನ ಮಾಸೂರ ಗ್ರಾಮದ 60 ವರ್ಷದ ಪುರುಷ (ಪಿ-185149) ಅನಾರೋಗ್ಯದಿಂದ ಮನೆಯಲ್ಲಿ ಆಗಸ್ಟ್ 9ರಂದು ಮೃತರಾಗಿದ್ದು, ಮೃತರ ಮೂಗಿನ ದ್ರವವನ್ನು ರ್‍ಯಾಪಿಡ್‌ ಆಯಂಟಿಜೆನ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿದ್ದು, ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ 45 ವರ್ಷದ ಮಹಿಳೆ (ಪಿ-186617) ಅನಾರೋಗ್ಯದಿಂದ ಮನೆಯಲ್ಲಿ ಆಗಸ್ಟ್ 9ರಂದು ಮೃತರಾಗಿದ್ದು, ಮೃತರ ಮೂಗಿನ ದ್ರವವನ್ನು ರ್‍ಯಾಪಿಡ್‌ ಆಯಂಟಿಜೆನ್‌ ಪರೀಕ್ಷೆ ನಡೆಸಿದಾಗ, ಕೋವಿಡ್ ದೃಢಪಟ್ಟಿದೆ.

ಗುಣಮುಖಸವಣೂರು-7, ಶಿಗ್ಗಾವಿ-15, ರಾಣೆಬೆನ್ನೂರು-6, ಹಾವೇರಿ-29, ಬ್ಯಾಡಗಿ-2, ಹಾನಗಲ್-11 ಹಾಗೂ ಹಿರೇಕೆರೂರು ತಾಲ್ಲೂಕಿನ 6 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

TRENDING