Tuesday, October 27, 2020
Home ಸುದ್ದಿ ಜಾಲ ಹೇಮಾವತಿ ನೀರನ್ನು ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಹರಿಸುವುದು ಬೇಡ; ಸಚಿವ ಮಾಧುಸ್ವಾಮಿ

ಇದೀಗ ಬಂದ ಸುದ್ದಿ

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಮತ್ತೆ ಗತವೈಭವದತ್ತ ಸಾಗುತ್ತಿದೆ ವಾಹನಗಳ ಮಾರಾಟ

ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು...

TET ಉತ್ತೀರ್ಣರಾದವರಿಗೆ ಭರ್ಜರಿ ಗುಡ್...

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು...

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

ಹೇಮಾವತಿ ನೀರನ್ನು ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಹರಿಸುವುದು ಬೇಡ; ಸಚಿವ ಮಾಧುಸ್ವಾಮಿ

ಬೆಂಗಳೂರು: ಹೇಮಾವತಿ ಜಲಾಶಯದ ನೀರನ್ನು ಅಗತ್ಯಕ್ಕಿಂತ ಹೆಚ್ಚು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಹೀಗಾಗಿ ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆಯೋ? ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಣ್ಣ ನಿರಾವರಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ಹೇಮಾವತಿ ಜಲಾಶಯದ ನೀರನ್ನು ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಳಿಗೆ ಹರಿಸುವ ಬಗ್ಗೆ ಇಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಮೂರು ಜಿಲ್ಲೆಗಳ ಸಂಸದರು ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗವೂ ನಡೆಯಿತು. ವಿಕಾಸಸೌಧದಲ್ಲಿ ಇಂದು ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲಾಗಿತ್ತು. ಸಚಿವರಾದ ಮಾಧುಸ್ವಾಮಿ, ಗೋಪಾಲಯ್ಯ ಹಾಗೂ ತುಮಕೂರು ಸಂಸದ ಬಸವರಾಜ್ , ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಂಡ್ಯ, ಹಾಸನ, ತುಮಕೂರು ಶಾಸಕರು, ಪರಿಷತ್ ಸದಸ್ಯರು ಅಧಿಕಾರಿಗಳು ಭಾಗಿಯಾಗಿದ್ದರು.

ನೀರು ಹಂಚಿಕೆ ವಿಚಾರದಲ್ಲಿ ಹಾಸನದವರು ಅನ್ಯಾಯ ಮಾಡಿದರೆಂದು ತುಮಕೂರು ಸಂಸದ ಬಸವರಾಜು ಹೇಳಿದರು. ಆಗ, ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ಹಾಸನದವರು ಅನ್ಯಾಯ ಮಾಡಿದರು, ಹಾಸನದವರು ಅನ್ಯಾಯ ಮಾಡಿದರೆಂದು ಹೇಳುತ್ತಲೇ ಇದ್ದೀರಿ. ಚರ್ಚೆಗೆ ಅವಕಾಶ ಕೊಡಿ. ಚರ್ಚೆ ಆಗಲಿ. ಎಲ್ಲಿ ಎಷ್ಟು ನೀರು ಬರುತ್ತದೆ. ಸಂಗ್ರಹ ಎಷ್ಟಾಗುತ್ತದೆ ಎಂಬುದು ನಮಗೂ ಗೊತ್ತಿದೆ ಎಂದು ಏರು ಧ್ವನಿಯಲ್ಲಿ ಹೇಳಿದರು.

ಆಗ ಸಂಸದ ಬಸವರಾಜ್ ಅವರಿಗೂ, ಶಾಸಕ ಶಿವಲಿಂಗೇಗೌಡ ನಡುವೆ ಮಾತಿನ ಚಕಮಕಿ ಉಂಟಾಯಿತು. ಚರ್ಚೆ ಆಗಲಿ ಎಂದರು ಸಂಸದ ಬಸವರಾಜ್.ಇದರ ಮಧ್ಯ ಪ್ರವೇಶಿಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್, ಸಚಿವರೇ ಹಿಂದೆ ಅದಾಗಿತ್ತು, ಇದಾಗಿತ್ತು ಅನ್ನೋದರ ಬಗ್ಗೆ ಚರ್ಚೆ ಬೇಡ. ಈಗ ಇರುವ ನೀರನ್ನು ಮೂರು ಜಿಲ್ಲೆಗಳಿಗೆ ಹೇಗೆ ಮ್ಯಾನೇಜ್ ಮಾಡಬೇಕು ಅನ್ನೋದರ ಬಗ್ಗೆ ಮಾತ್ರ ಹೇಳಿ ಅಂತಾ ಪಟ್ಟು ಹಿಡಿದರು.

ಸಭೆಯಲ್ಲಿ ಹೆಚ್.ಡಿ. ರೇವಣ್ಣ ಮಾತನಾಡಿ, ನೀರನ್ನು ಸಮಾನವಾಗಿ ಹಂಚಿಕೆ ಮಾಡಿ. ಹಾಸನ, ತುಮಕೂರು, ಮಂಡ್ಯ ಬೇರೆ ಬೇರೆ ಅಲ್ಲ. ಎಲ್ಲರಿಗೂ ನೀರು ಕೊಡಬೇಕು. ರೈತರು ಬೆಳೆ ಬೆಳೆಯಬೇಕು. ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.

ಹಾಸನದವರು ನೀರು ಬಿಡುವುದಿಲ್ಲವೆಂದು ಆರೋಪ ಮಾಡ್ತಾರೆ. ನಾನು 15 ವರ್ಷಗಳ ಮಾಹಿತಿ ‌ಕೊಡುತ್ತೇವೆ. ತುಮಕೂರಿಗೂ ನೀರು ಬಿಟ್ಟಿದ್ದೇವೆ. ನೀರು ಬಿಟ್ಟಿಲ್ಲ ಅನ್ನೋದು ಸರಿಯಲ್ಲ. ತುಮಕೂರಿಗೆ ಅನ್ಯಾಯ ಆಗ್ತಿದೆ ಅಂತ ದಿನಾ ಹೇಳ್ತಾರೆ. ರಾಜಕೀಯವಾಗಿ ಮಾತಾಡೋದು ಬೇಡ. 3 ಜಿಲ್ಲೆಗೂ ಸಮಾನತೆ ಇರಬೇಕು. ಎಲ್ಲಾ ಜಿಲ್ಲೆಗಳಿಗೆ ಸಮಾನವಾಗಿ ನೀರು ಹಂಚಿಕೆ ಮಾಡಿ ಎಂದು ಆಗ್ರಹಿಸಿದರು. 

ರೇವಣ್ಣಮಾಧುಸ್ವಾಮಿ ನಡುವೆ ಚಕಮಕಿ :

ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಹೆಚ್ .ಡಿ ರೇವಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ‌  ಮಾಧುಸ್ವಾಮಿ ನಡುವೆ ಚಕಮಕಿ ನಡೆಯಿತು. ಈ ವೇಳೆ ಅಗತ್ಯಕ್ಕಿಂತ ಹೆಚ್ಚು ನೀರು ಹಾಸನಕ್ಕೆ ಮತ್ತು ಮಂಡ್ಯಕ್ಕೆ ಹರಿದಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ನೀರು ಹರಿಸಬೇಕೆಂಬ ನಿಯಮವಿದೆ ಅಷ್ಟೇ ನೀರು ಹರಿಸುವ ನಿರ್ಣಯವನ್ನು ಅಂಗೀಕರಿಸೋಣ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಆಯ್ತು ಸ್ವಾಮಿ ಅಷ್ಟೇ ನೀರು ಹರಿಸಿ, ನಿರ್ಣಯ ಮಾಡಿ.‌ ಹಾಸನಕ್ಕೆ ಹೆಚ್ಚಿಗೆ ನೀರು ಹರಿದಿಲ್ಲವೆಂದು ರೇವಣ್ಣ ಹೇಳಿದಾಗ, ಹರಿದಿದೆ ಸ್ಚಾಮಿ ಅಧಿಕಾರಿಗಳೇ ಮಾಹಿತಿ ನೀಡ್ತಾರೆ ಇರೀ ಎಂದು ಸಚಿವ ಮಾಧುಸ್ವಾಮಿ ಸಮಜಾಯಿಷಿ ನೀಡಿದರು.ತಂದೆ ಕೆಳಗೆ, ಮಗ ವೇದಿಕೆ ಮೇಲೆ : ಸಂಸದ ಪ್ರಜ್ವಲ್ ರೇವಣ್ಣ ವೇದಿಕೆ ಮೇಲೆ ಕುಳಿತಿದ್ದರೆ, ಇವರ ತಂದೆ, ಮಾಜಿ ಸಚಿವ, ಶಾಸಕ ಹೆಚ್.ಡಿ.ರೇವಣ್ಣ ವೇದಿಕೆ ಕೆಳಗೆ ಕುಳಿತಿದ್ದ ದೃಶ್ಯ ಕಂಡು ಬಂತು.

TRENDING