Friday, October 23, 2020
Home ಜಿಲ್ಲೆ ಕೊಡಗು ಕೊಡಗಿನ ಬ್ರಹ್ಮಗಿರಿ ದುರಂತ; ಆಚಾರ್ಯರ ಮನೆಯ ಪುಸ್ತಕ, ಬಟ್ಟೆಗಳು ಪತ್ತೆ; ನಾಲ್ವರಿಗಾಗಿ ಶೋಧ

ಇದೀಗ ಬಂದ ಸುದ್ದಿ

ವಿಡಿಯೋ ಕಾಲ್​​ ಮೂಲಕ ಮೊಮ್ಮಗನ ನೋಡಿ ಖುಷಿಪಟ್ಟ...

ಚಿರಂಜೀವಿ ಸರ್ಜಾ ಹಾಗು ಮೇಘನಾ ರಾಜ್ ಕುಟುಂಬದಲ್ಲಿ ಗಂಡು ಮಗುವಿನ ಆಗಮನದಿಂದ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಚಿರಂಜೀವಿ ಸರ್ಜಾ ಮಾವ ಅರ್ಜುನ್ ಸರ್ಜಾ ಮಾತ್ರ ಸಿನಿಮಾ ಶೂಟಿಂಗ್...

ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​​​​​ದೇವ್​​ಗೆ ಹೃದಯಾಘಾತ

ನವದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು, ದೆಹಲಿಯ ಫೋರ್ಟೀಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪಿಲ್ ದೇವ್ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ...

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ

ಕೇರಳ: ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ...

ಪಟಾಕಿ ಘಟಕದಲ್ಲಿ ಭೀಕರ ಸ್ಫೋಟ

ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಭೀಕರ ಸ್ಫೋಟಗೊಂಡ ಪರಿಣಾಮ ಐವರು ಸಾವಿಗೀಡಾಗಿದ್ದಾರೆ. ವಿರುಡುನಗರ ಜಿಲ್ಲೆಯ ಶಿವಕಾಶಿ ಬಳಿಯ ಪಟಾಕಿ ಘಟಕದಲ್ಲಿ ಈ ದುರಂತ ವರದಿಯಾಗಿದೆ. ಸಾವನ್ನಪ್ಪಿದವರ ಪೈಕಿ ಮೂವರು ಮಹಿಳೆಯರು...

ಬಂಧನ ಭೀತಿಯಿಂದ ಜಾಮೀನು ಪಡೆದ ಗಿರೀಶ್​ ಗದಿಗೆಪ್ಪಗೌಡ

ಧಾರವಾಡ: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಾಗಿಣಿ ಅವರಿಗೆ ಆಪ್ತ ಎನ್ನಲಾದ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಿರೀಶ್ ಗದಿಗೆಪ್ಪಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. 2 ಲಕ್ಷ ರೂಪಾಯಿ...

ಕೊಡಗಿನ ಬ್ರಹ್ಮಗಿರಿ ದುರಂತ; ಆಚಾರ್ಯರ ಮನೆಯ ಪುಸ್ತಕ, ಬಟ್ಟೆಗಳು ಪತ್ತೆ; ನಾಲ್ವರಿಗಾಗಿ ಶೋಧ

ಕೊಡಗು: ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ ನಾಪತ್ತೆಯಾಗಿ ನಾಲ್ಕು ದಿನಗಳಾಗಿವೆ. ಮಣ್ಣಿನಡಿ ಹೂತುಹೋಗಿದ್ದ ಐವರ ಪೈಕಿ ನಾರಾಯಣ ಆಚಾರ್ಯರ ಸಹೋದರನ ಶವ ನಿನ್ನೆ ಪತ್ತೆಯಾಗಿತ್ತು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾರಾಯಣ ಆಚಾರ್ಯ ಅವರ ಮನೆಯ ಬಟ್ಟೆಗಳು, ಪುಸ್ತಕಗಳು ಇಂದಿನ ಶೋಧಕಾರ್ಯದ ವೇಳೆ ಪತ್ತೆಯಾಗಿವೆ. ಹೀಗಾಗಿ, ಇಂದು ಉಳಿದ ನಾಲ್ವರ ಶವಗಳು ಸಿಗುವ ಸಾಧ್ಯತೆ ಇದೆ.

ನಾರಾಯಣ ಆಚಾರ್ಯರ ಮಕ್ಕಳು ಇಂದು ವಿದೇಶಗಳಿಂದ ಆಗಮಿಸಿದ್ದಾರೆ. ಮಣ್ಣಿನ ಅಡಿಯಲ್ಲಿ ಸಿಲುಕಿರೋ ನಾಲ್ವರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ಮೂರು ಹಿಟಾಚಿ, ಎನ್‌ಡಿಆರ್​ಎಫ್, ಎಸ್​ಟಿಆಡ್​ಎಫ್ ಮೂಲಕ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ, ದಟ್ಟ ಮಂಜಿನ ನಡುವೆಯೂ ಕಾರ್ಯಾಚರಣೆ ಆರಂಭವಾಗಿದೆ. ಕಾರ್ಯಚರಣೆ ನಡೆದ ಸ್ಥಳದಲ್ಲಿ ಇಂದು ರಾಶಿ ರಾಶಿ ಪುಸ್ತಕ, ಬಟ್ಟೆಗಳು ಪತ್ತೆಯಾಗಿವೆ.

 ವಿದೇಶದಲ್ಲಿದ್ದ ನಾರಾಯಣ ಆಚಾರ್ಯರ ಮಕ್ಕಳು ತಲಕಾವೇರಿಗೆ ಆಗಮಿಸಿದ್ದಾರೆ. ಜಿಲ್ಲಾಡಳಿತ ಸಂಪರ್ಕದ‌ ನಂತರ ಕೊಡಗಿಗೆ ಆಗಮಿಸಿದ ಮಕ್ಕಳಿಗೆ ಮೊದಲು ಕೊರೋನಾ ಟೆಸ್ಟ್​ ಮಾಡಲಾಗಿದೆ. ನಾರಾಯಣ ಆಚಾರ್ಯರ ಮನೆಯಲ್ಲಿ ರಾಶಿ ರಾಶಿ ಪುಸ್ತಕ ಪತ್ತೆಯಾಗಿವೆ. ಅವರ ಅಣ್ಣ ಆನಂದ ತೀರ್ಥರು ಆಧ್ಯಾತ್ಮದತ್ತ ವಾಲಿದ್ದರು. ಈ ಹಿನ್ನೆಲೆಯಲ್ಲಿ ಅನೇಕ ಪುಸ್ತಕಗಳನ್ನು ಓದುತ್ತಿದ್ದರು. ಆನಂದ ತೀರ್ಥರು ಮರಣ ಶಾಸನ ಪುಸ್ತಕಗಳನ್ನು‌ ಓದುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ನಾರಾಯಣ ಆಚಾರ್ಯರ ಮಕ್ಕಳಾದ ಶಾರದಾ ಮತ್ತು ನಮಿತಾ ಇಂದು ಕೊಡಗಿಗೆ ಬಂದಿದ್ದಾರೆ. ಪ್ರತಿದಿನ ನಮ್ಮ ತಂದೆಯವರು ಪೋನ್‌ನಲ್ಲಿ ಮಾತನಾಡುತ್ತಿದ್ದರು. ಘಟನೆ ಆದ ದಿನವೇ ಮಾಹಿತಿ ತಿಳಿಯಿತು. ಪೋನ್‌ ಮೂಲಕ ಮಾಹಿತಿ ತಿಳಿಯಿತು‌ ಎಂದು ಅವರು ಹೇಳಿದ್ದಾರೆ. ಸಚಿವ ವಿ. ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ನಾರಾಯಣ ಆಚಾರ್ಯರ ಮಕ್ಕಳ ಜೊತೆ ಮಾತುಕತೆ ನಡೆಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಕೊಡಗಿನಲ್ಲಿ ಭಾರೀ ಮಳೆಯಾಗಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ಬುಧವಾರ ಸಂಜೆಯಷ್ಟೇ ಹಲವರು ಪರಿಪರಿಯಾಗಿ ಹೇಳಿದ್ದರಂತೆ. ಆದರೆ, ತಾವು ಹುಟ್ಟಿ ಬೆಳೆದ ಊರು, ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ.
ಆದರೆ, ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ. ನಿನ್ನೆ ಕಾರ್ಯಾಚರಣೆ ವೇಳೆ ನಾರಾಯಣ ಆಚಾರ್ಯರ ಸೋದರನ ಶವ ಪತ್ತೆಯಾಗಿತ್ತು.

TRENDING