Tuesday, October 27, 2020
Home ಅಂತರ್ ರಾಜ್ಯ ಕೇರಳ ವಿಮಾನ ದುರಂತ; ಮಲಪ್ಪುರಂ ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್

ಇದೀಗ ಬಂದ ಸುದ್ದಿ

R R ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ...

 ಬೆಂಗಳೂರು : ರಾಜರಾಜೇಶ್ವರಿನಗರ ಉಪ ಚುನಾವಣೆಯ ಕಣ ತಾರಕಕ್ಕೇರಿದೆ. ಆಡಳಿತ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ಮುಂದುವರಿದಂತ ಸಂದರ್ಭದಲ್ಲಿಯೇ ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಚುನಾವಣಾ ಅವ್ಯವಹಾರದ...

ಕಮಲ್‌ನಾಥ್, ದಿಗ್ವಿಜಯ್ ಸಿಂಗ್ ‘ಅತಿದೊಡ್ಡ ವಂಚಕರು’: ಜ್ಯೋತಿರಾದಿತ್ಯ...

ನವದೆಹಲಿ: 'ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕಮಲ್ ನಾಥ್ ಮತ್ತು ದಿಗ್ವಿಜಯ್ ಸಿಂಗ್ ಅವರೇ 'ಅತಿದೊಡ್ಡ ವಂಚಕರು' ಎಂದು ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಆರೋಪಿಸಿದ್ದಾರೆ. 'ಭ್ರಷ್ಟ ಆಡಳಿತ'ವನ್ನು ನೀಡುವ ಮೂಲಕ ಇವರು...

ಮತ್ತೆ ಗತವೈಭವದತ್ತ ಸಾಗುತ್ತಿದೆ ವಾಹನಗಳ ಮಾರಾಟ

ಪ್ರಸಕ್ತ ಆರ್ಥಿಕ ವರ್ಷ ಆರಂಭದಿಂದ ಹಿನ್ನಡೆ ಅನುಭವಿಸಿದ್ದ ವಾಹನಗಳ ಮಾರಾಟ ಮತ್ತೆ ಗತವೈಭವಕ್ಕೆ ಸಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಸಪ್ಟೆಂಬರ್ ನಲ್ಲಿ ಹಿನ್ನಡೆ ಅನುಭವಿಸಿದ್ದ ದ್ವಿಚಕ್ರ ವಾಹನಗಳ ಮಾರಾಟ ಮತ್ತು...

TET ಉತ್ತೀರ್ಣರಾದವರಿಗೆ ಭರ್ಜರಿ ಗುಡ್...

ಬೆಂಗಳೂರು: ಶಿಕ್ಷಕರ ಹುದ್ದೆಗೆ ಅರ್ಹತೆ ಪಡೆಯಲು ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಉತ್ತೀರ್ಣರಾದವರ ಪ್ರಮಾಣಪತ್ರದ ಸಿಂಧುತ್ವ ಅವಧಿಯನ್ನು ಜೀವಿತಾವಧಿವರೆಗೆ ವಿಸ್ತರಿಸಲಾಗಿದೆ. ಈಗಿರುವ 7 ವರ್ಷದಿಂದ ಜೀವಿತಾವಧಿವರೆಗೆ ವಿಸ್ತರಿಸಲು...

6,500 ಕೋಟಿ ಚಕ್ರಬಡ್ಡಿ ಮನ್ನಾ ಘೋಷಿಸಿದ ಕೇಂದ್ರ...

ಆದಾಯದ ಕೊರತೆ ಎದುರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಚಿಕ್ಕ ರಿಲೀಫ್ ನೀಡಿದ್ದು ದೀಪಾವಳಿ ಕೊಡುಗೆ ಎಂಬಂತೆ ಚಕ್ರಬಡ್ಡಿ ಮನ್ನಾ ಆದೇಶ ಹೊರಡಿಸಿದೆ. ಒಟ್ಟು 6,500 ಕೋಟಿ ರೂಪಾಯಿ ಮೌಲ್ಯದ ಚಕ್ರಬಡ್ಡಿ...

ಕೇರಳ ವಿಮಾನ ದುರಂತ; ಮಲಪ್ಪುರಂ ಡಿಸಿ ಸೇರಿ 600 ಜನರಿಗೆ ಕ್ವಾರಂಟೈನ್

ತಿರುವನಂತಪುರಂ, ಆಗಸ್ಟ್ 10 : ಕೇರಳದಲ್ಲಿ ವಿಮಾನ ದುರಂತ ನಡೆದಾಗ ನೂರಾರು ಜನರು ರಕ್ಷಣಾ ಕಾರ್ಯಕ್ಕೆ ನೆರವು ನೀಡಿದ್ದರು. ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ 600 ಜನರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ 18 ಜನರು ಮೃತಪಟ್ಟಿದ್ದರು. 56 ಪ್ರಯಾಣಿಕರು ಗಾಯಗೊಂಡಿದ್ದರು. ದುಬೈನಿಂದ ವಂದೇ ಭಾರತ್ ಮಿಷನ್ ಅಡಿ ಕೇರಳಕ್ಕೆ ಆಗಮಿಸಿದ್ದ ವಿಮಾನ ಅಪಘಾತಕ್ಕೀಡಾಗಿತ್ತು.

ಶುಕ್ರವಾರ ರಾತ್ರಿ ವಿಮಾನ ದುರಂತ ನಡೆದಾಗ ನೂರಾರು ಜನರು ಕೋವಿಡ್ ಪರಿಸ್ಥಿತಿಯನ್ನೂ ಲೆಕ್ಕಿಸದೇ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದರು. ಈಗ ಮಲಪ್ಪುರಂ ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಸೇರಿದಂತೆ 600 ಜನರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಪ್ರಯಾಣಿಕರು ಮತ್ತು ರಕ್ಷಣಾ ಕಾರ್ಯಕ್ಕೆ ಬಂದಿದ್ದವರಲ್ಲಿ ಯಾರಿಗೆ ಕೋವಿಡ್ ಸೋಂಕು ಇತ್ತು? ಎಂಬುದು ತಿಳಿದಿಲ್ಲ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 14 ದಿನದ ಕ್ವಾರಂಟೈನ್‌ನಲ್ಲಿ ಎಲ್ಲರೂ ಇರಲಿದ್ದಾರೆ.

ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಶಬೀರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. “ವಿಮಾನ ಅಪ್ಪಳಿಸಿದ ಸದ್ದು ಕೇಳಿ ಅಲ್ಲಿಗೆ ಆಗಮಿಸಿದೆವು. ಆಗಲೇ ಸುಮಾರು 10 ಜನರು ಅಲ್ಲಿಗೆ ಆಗಮಿಸಿದ್ದರು. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳುವ ಆತಂಕ ಎದುರಾಗಿತ್ತು. ಪ್ರಯಾಣಿಕರ ಚೀರಾಟ ಕೇಳಿದಾಗ ಯಾವುದನ್ನೂ ಲೆಕ್ಕಿಸಿದೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆವು” ಎಂದು ಹೇಳಿದ್ದಾರೆ.

ವಿಮಾನ ಅಪಘಾತಗೊಂಡ ಸ್ಥಳ ಕಂಟೈನ್ಮೆಂಟ್ ಝೋನ್ ಆಗಿತ್ತು. ಆದರೆ, ವಿಮಾನ ದುರಂತ ಸಂಭವಿಸಿದಾಗ ಅಧಿಕಾರಿಗಳು ಜನರನ್ನು ತಡೆಯಲಿಲ್ಲ. ವಿಮಾನದಲ್ಲಿದ್ದವರ ರಕ್ಷಣೆ ಮೊದಲ ಆದ್ಯತೆ ಆಗಿತ್ತು. ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆದಿತ್ತು.

ನೂರಾರು ಜನರು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರು, ಆಟೋ, ಜೀಪ್‌ಗಳ ಮೂಲಕವೂ ಪ್ರಯಾಣಿಕರನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ಜನರು ಕರೆದುಕೊಂಡು ಹೋದರು. ದುರಂತ ನಡೆದಾಗ ಜನರು ಸ್ಪಂದಿಸಿದ ರೀತಿಗೆ ಏರ್ ಇಂಡಿಯಾ ಸಹ ಮೆಚ್ಚುಗೆ ಸೂಚಿಸಿದೆ.

TRENDING