Friday, September 25, 2020
Home ಅಂತರ್ ರಾಜ್ಯ ಮಹಾರಾಷ್ಟ್ರ : ಮಹಾಮಾರಿ ಕೊರೊನಾಗೆ ಕಳೆದ 24 ಗಂಟೆಗಳಲ್ಲಿ 3 ಪೊಲೀಸರು ಬಲಿ,107ಕ್ಕೇರಿದ ಸಿಬಂದಿಗಳ...

ಇದೀಗ ಬಂದ ಸುದ್ದಿ

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರೈತರ ಪ್ರತಿಭಟನೆ

ಮೈಸೂರು: ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ತಡೆದು ಪ್ರತಿಭಟನೆ ನಡೆಸಿದರು.

ವಿಜಯಪುರ-ಕಲಬುರ್ಗಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ

 ವಿಜಯಪುರ: ಇಲ್ಲಿನ ಸಿಂದಗಿ ಬೈಪಾಸ್ ಬಳಿ ವಿಜಯಪುರ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡ ಶಕ್ತಿಕುಮಾರ ಉಕಮನಾಳ ನೇತೃತ್ವದಲ್ಲಿ ರೈತರು ಹೆದ್ದಾರಿ...

ದೇಶದ ಸಣ್ಣ, ಅತಿ ಸಣ್ಣ ರೈತರಿಗೆ ಮಸೂದೆಗಳು...

 ನವದೆಹಲಿ: ಕೃಷಿ ಮಸೂದೆಗಳನ್ನು ವಿರೋಧಿಸುತ್ತಾ, ಕೇಂದ್ರದ ವಿರುದ್ಧ ಹರಿಹಾಯುತ್ತಿರುವ ವಿರೋಧಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, 'ರೈತರಿಗೆ ಸದಾ ಸುಳ್ಳು ಹೇಳುತ್ತಿದ್ದವರು, ಈಗ ತಮ್ಮ ರಾಜಕೀಯ ಲಾಭಕ್ಕಾಗಿ ಆ...

ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

 ಬೆಂಗಳೂರು : ಖ್ಯಾತ ಸಂಗೀತ ದಿಗ್ಗಜ, ಗಾಯಕರಾದ ಎಸ್.ಪಿ.ಬಾಲಸುಬ್ರಮಣ್ಯಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಚಲನಚಿತ್ರರಂಗದ ಶ್ರೇಷ್ಠ ಗಾಯಕರಾಗಿದ್ದ ಅವರು,...

ಈಗ ನಾವೇನು ಅಷ್ಟೋ ಇಷ್ಟೋ ...

ಬೆಂಗಳೂರು: ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅವರ ನಿಧನದ ಬೆನ್ನಲ್ಲೇ, ಅವರ ಗರಡಿಯಲ್ಲಿಯೇ ಪಳಗಿದ ಗಾಯಕ ರಾಜೇಶ್ ಕೃಷ್ಣನ್​ ಅಗಲಿದೆ ಗಾನ ಗಂಧರ್ವನ ಬಗ್ಗೆ ಮಾತನಾಡಿದ್ದಾರೆ.

ಮಹಾರಾಷ್ಟ್ರ : ಮಹಾಮಾರಿ ಕೊರೊನಾಗೆ ಕಳೆದ 24 ಗಂಟೆಗಳಲ್ಲಿ 3 ಪೊಲೀಸರು ಬಲಿ,107ಕ್ಕೇರಿದ ಸಿಬಂದಿಗಳ ಸಾವಿನ ಸಂಖ್ಯೆ

 ಮುಂಬಯಿ: ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದ ಮೂರು ಮಂದಿ ಪೊಲೀಸ್‌ ಸಿಬಂದಿಗಳು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಟ್ಟು ರಾಜ್ಯದಲ್ಲಿ ಸೋಂಕಿಕೆ ಸಾವನ್ನಪ್ಪಿದ ಸಿಬಂದಿಗಳ ಸಂಖ್ಯೆ 107ಕ್ಕೆ ಏರಿಯಾಗಿದೆ. ರಾಜ್ಯದಲ್ಲಿ 231 ಪೊಲೀಸ್‌ ಸಿಬಂದಿ ಸೋಂಕಿಗೆ ತುತ್ತಾಗಿದ್ದಾರೆ.

ಮೃತ ಮೂವರೂ ಪೊಲೀಸರು ಕುಡಿತದ ಚಟವನ್ನು ಹೊಂದಿದ್ದ ಕಾನ್‌ಸ್ಟೆಬಲ್‌, ಇತರೆ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮರೋಲ್‌ ಪಿಟಿಎಸ್‌ನಲ್ಲಿ ರಿಸರ್ವ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ರಂಗನಾಥ್‌ ಅಚ್ಯುತ್‌ ಮಾನೆರ್ಕರ್‌ (51) ಅವರಲ್ಲಿ ಜುಲೈ 25 ರಂದು ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜೋಗೇಶ್ವರಿಯಲ್ಲಿರುವ ಟ್ರಾಮಾ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮಂಗಳವಾರ ನಿಧನ ಹೊಂದಿದರು. 2ನೇ ಪ್ರಕರಣದಲ್ಲಿ ಥಾಣೆ ನಗರ ಪೊಲೀಸ್‌ ಪ್ರಧಾನ ಕಚೇರಿಯ ಕಾನ್‌ಸ್ಟೆಬಲ್‌ ದೀಪಕ್‌ ಕಿಶನ್‌ ಮೋರ್‌ (46) ಅವರು ಜುಲೈ 28ರಿಂದ ಥಾಣೆ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಹ್ಮದ್‌ನಗರ ಜಿಲ್ಲೆಯ ಸೋನೈ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಸಂಜಯ್‌ ಲಕ್ಷ್ಮಣ್‌ ಪೋಟೆ (32) ಕೂಡ ಚಿಕಿತ್ಸೆ ಸಂದರ್ಭ ಮೃತಪಟ್ಟಿದ್ದಾರೆ ಎಂದು ಅಹ್ಮದ್‌ನಗರ ಪೊಲೀಸ್‌ ಅಧೀಕ್ಷಕ ಅಖೀಲೇಶ್‌ ಸಿಂಗ್‌ ಹೇಳಿದ್ದಾರೆ.

ಈವರೆಗೆ 10 ಅಧಿಕಾರಿಗಳು ಸೇರಿದಂತೆ 9,934 ಮಹಾರಾಷ್ಟ್ರ ಪೊಲೀಸ್‌ ಸಿಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು. ಪ್ರಸ್ತುತ 1,877 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಸೋಂಕಿನಿಂದ 7,950ಕ್ಕೂ ಅಧಿಕ ಸಿಬಂದಿ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸ್‌ ಸಹಾಯಕ ಇನ್ಸ್‌ಪೆಕ್ಟರ್‌ ಜನರಲ್‌ (ಕಾನೂನು ಮತ್ತು ಸುವ್ಯವಸ್ಥೆ) ವಿನಾಯಕ್‌ ದೇಶಮುಖ್ ಹೇಳಿದ್ದಾರೆ. ಮುಂಬಯಿ ಪೊಲೀಸ್‌ ಸಿಬಂದಿಯಲ್ಲಿ ಸುಮಾರು 3,900 ಮಂದಿ ಸೋಂಕಿಗೆ ತುತ್ತಾಗಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ.

TRENDING