Thursday, October 22, 2020
Home ಜಿಲ್ಲೆ ಕೊಡಗು ಮುಂಗಾರು ಚುರುಕು : ಕೊಡಗು ಜಿಲ್ಲೆಯಲ್ಲಿ 4 ದಿನ ಭಾರಿ ಮಳೆ- ಹವಾಮಾನ ಇಲಾಖೆ

ಇದೀಗ ಬಂದ ಸುದ್ದಿ

ಅ.23ರಿಂದ ಬೆಂಗಳೂರು-ಪುದುಚೇರಿ ಬಸ್ ಸೇವೆ ಆರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು-ಪುದುಚೇರಿ ನಡುವೆ ಅಕ್ಟೋಬರ್ 23ರಿಂದ ಬಸ್ ಸೇವೆಯನ್ನು ಪುನಃ ಆರಂಭಿಸಲಿದೆ. ಲಾಕ್ ಡೌನ್ ಘೋಷಣೆ ಬಳಿಕ ಬಸ್ ಸೇವೆಯನ್ನು ರದ್ದುಗೊಳಿಸಲಾಗಿತ್ತು.

ಯು.ಪಿ ರೈತರ ಖಾತೆಗೆ ಸರ್ಕಾರದಿಂದ ನೇರವಾಗಿ ನಗದು...

ಲಖ್ನೋ: ಉತ್ತರ ಪ್ರದೇಶದಲ್ಲಿ 3.4 ಲಕ್ಷ ರೈತರ ರೈತರ ಖಾತೆಗೆ 113 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 19 ಜಿಲ್ಲೆಗಳಲ್ಲಿ ನೆರೆ ಸಂತ್ರಸ್ತರಾಗಿರುವ 3,48,511 ರೈತರ...

ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ...

ಬೆಳಗಾವಿ: ಚಿತ್ರ ಸಾಹಿತಿ ಕೆ.ಕಲ್ಯಾಣ್​ ಕುಟುಂಬದಲ್ಲಿ ಬಿರುಕು ಮೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿ ಎನ್ನಿಸಿಕೊಂಡಿರುವ ಶಿವಾನಂದ ವಾಲಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮಲ್ಪೆಯ ಬಳಿ ತಮಿಳುನಾಡು ಮೀನುಗಾರರಿಂದ ಗೂಂಡಾಗಿರಿ

ಉಡುಪಿ ಜಿಲ್ಲೆಯ ಮಲ್ಪೆಯ ಬಳಿ ತಮಿಳುನಾಡು ಮೀನುಗಾರರು ಕರ್ನಾಟಕ ಮೀನುಗಾರರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಮಲ್ಪೆಯಿಂದ ತೆರಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರ ಬೋಟ್ ಅನ್ನು ಹಾನಿಗೊಳಿಸಿದ್ದಾರೆ.

ತಮಿಳುನಾಡು : ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ...

ಚೆನ್ನೈ: ತಮಿಳುನಾಡಿನಲ್ಲಿ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ. ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ....

ಮುಂಗಾರು ಚುರುಕು : ಕೊಡಗು ಜಿಲ್ಲೆಯಲ್ಲಿ 4 ದಿನ ಭಾರಿ ಮಳೆ- ಹವಾಮಾನ ಇಲಾಖೆ

ಮಡಿಕೇರಿ, ಆಗಸ್ಟ್ 05 : ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದೆ. ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನಲೆಯಲ್ಲಿ ಕೊಡಗು ಜಿಲ್ಲಾಡಳಿತ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದೆ. ಆಗಸ್ಟ್ 6 ರಿಂದ 10ರ ತನಕ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಆಗಸ್ಟ್ 6ರ ಬೆಳಗ್ಗೆಯಿಂದ 7ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. 115.6 ರಿಂದ 204.4 ಮಿ. ಮೀ. ತನಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಆಗಸ್ಟ್ 7ರ ಬೆಳಗ್ಗೆಯಿಂದ ಆಗಸ್ಟ್ 8ರ ಬೆಳಗ್ಗೆ ತನಕ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. 64.5 ಮಿ. ಮೀ. ನಿಂದ 115. ಮಿ. ಮೀ. ತನಕ ಮಳೆಯಾಗುವ ಸಾಧ್ಯತೆ ಇದೆ.

ದಿನಾಂಕ 8ರ ಬೆಳಗ್ಗೆಯಿಂದ ಆಗಸ್ಟ್ 10ರ ತನಕ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಂಭವವಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.

TRENDING