Friday, September 25, 2020
Home ಜಿಲ್ಲೆ ಚಾಮರಾಜನಗರ ಇಂದಿನಿಂದ ವಾರದ ಎಲ್ಲಾ ದಿನಗಳಲ್ಲೂ ಮಾದಪ್ಪನ ದರ್ಶನಕ್ಕೆ ಅವಕಾಶ

ಇದೀಗ ಬಂದ ಸುದ್ದಿ

ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ ಎಸ್‌. ಪಿ....

 ಚೆನ್ನೈ: ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ, ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ವಿಧಿವಶರಾಗಿದ್ದಾರೆ. ಎಸ್‌ಪಿಬಿ ನಿಧನರಾದ ವಿಚಾರವನ್ನು ಸ್ವತಃ ಅವರ ಪುತ್ರ ಎಸ್‌ಪಿ ಚರಣ್‌ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಡಿಸಿಎಂ ಸಿಸೋಡಿಯಾರಿಗೆ ಕೊರೊನಾ ಜೊತೆ ಡೆಂಗ್ಯೂ...

ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆ ನವದೆಹಲಿಯ ಲೋಕ ನಾಯಕ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಡೆಂಗ್ಯೂ ಸೋಂಕು ಕೂಡಾ ತಗುಲಿರುವ ಬಗ್ಗೆ ತಿಳಿದು ಬಂದಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ:...

 ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ವಿವಿಧ ಶ್ರೇಣಿಯ 20,203 ಹುದ್ದೆಗಳು ಖಾಲಿ ಇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಗುರುವಾರ ಜೆಡಿಎಸ್‌...

ಬ್ಯಾಂಕ್ ಖಾತೆಯಲ್ಲಿ ವಂಚನೆಯಾದ್ರೆ ತಕ್ಷಣ ಏನು ಮಾಡಬೇಕು.?...

 ಕೊರೊನಾ ಮಧ್ಯೆ ವಂಚನೆ ಪ್ರಕರಣಗಳು ಹೆಚ್ಚಾಗ್ತಿವೆ. ಇದನ್ನು ತಪ್ಪಿಸಲು ಆರ್‌ಬಿಐ ಸಾಮಾನ್ಯ ಜನರಿಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ. ಇದರ ಹೊರತಾಗಿಯೂ ಖಾತೆಯಲ್ಲಿರುವ ಹಣ ಕಳ್ಳತನವಾದ್ರೆ ಏನು ಮಾಡಬೇಕು ಎಂಬ ಬಗ್ಗೆ...

ಕೋವಿಡ್ 19 ಪರಿಹಾರ ಧನ : ಚಾಲಕರಿಗೆ...

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

ಇಂದಿನಿಂದ ವಾರದ ಎಲ್ಲಾ ದಿನಗಳಲ್ಲೂ ಮಾದಪ್ಪನ ದರ್ಶನಕ್ಕೆ ಅವಕಾಶ

 ಚಾಮರಾಜನಗರ(ಆಗಸ್ಟ್ .02): ಮಲೆಮಹದೇಶ್ವರನ ದರ್ಶನಕ್ಕೆ ವಿಧಿಸಲಾಗಿದ್ದ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ, ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್-19 ನಿಯಮಗಳನ್ನು ಪಾಲಿಸಿಕೊಂಡು ಭಕ್ತರು ಇನ್ನು ಮುಂದೆ ವಾರದ ಎಲ್ಲಾ ದಿನಗಳಲ್ಲೂ ಎಂದಿನಂತೆ ಮಾದಪ್ಪನ ದರ್ಶನ ಮಾಡಬಹುದು.

ಭಾನುವಾರದ ಲಾಕ್ ಡೌನ್ ತೆರವುಗೊಳಿಸಿರುವುದರಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ದೇವಾಲಯ ತೆರೆದಿರುತ್ತದೆ. ನಾಳೆ ಸೋಮವಾರದಿಂದ ಬೆಳಿಗ್ಗೆ 4 ರಿಂದ ರಾತ್ರಿ‌ 10ರವರೆಗೆ ತೆರೆಯಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಲೈಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ಸೋಮವಾರದಿಂದ ಬೆಳಿಗ್ಗೆ 4 ಗಂಟೆ, ಬೆಳಿಗ್ಗೆ‌ 10.30 ಹಾಗೂ ಸಂಜೆ 7 ಗಂಟೆಗೆ ಮಲೆಮಹದೇಶ್ವರನಿಗೆ ಅಭಿಷೇಕ ನಡೆಯಲಿದೆ. ಆದರೆ, ದೇವಾಲಯದ‌ ಒಳಗಡೆ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ಉತ್ಸವಗಳು ಇರುವುದಿಲ್ಲ. ಮಾಸ್ಕ್ ಧರಿಸಿಯೇ ಬರಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ‌ ಪಡೆಯಬಹುದು. ಪೂಜೆ ಮಾಡಿಸಬಹುದು. ಲಾಡು ಪ್ರಸಾದ ಮತ್ತು ಮಿಶ್ರ ಪ್ರಸಾದ ಮಾರಾಟ ವ್ಯವಸ್ಥೆ ಇದೆ.

ಇಂದು ಸಂಜೆ‌ 5 ಗಂಟೆಯಿಂದ ಭಕ್ತಾದಿಗಳು ರಾತ್ರಿ ತಂಗಲು ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಪ್ರಾಯೋಗಿಕವಾಗಿ ನಾಗಮಲೈ ಭವನದ ಕೊಠಡಿಗಳನ್ನು ನೀಡಲಾಗುವುದು. ದಾಸೋಹದಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ‌ ಉಪಹಾರ ಪ್ರಸಾದ ವಿತರಣೆ ವ್ಯವಸ್ಥೆ ಇರಲಿದೆ ಎಲ್ಲೆಡೆ ಶುದ್ಧಕುಡಿಯುವ ನೀರಿನ‌ ಘಟಕಗಳು ಕಾರ್ಯ ನಿರ್ವಹಿಸಲಿದ್ದು, ಪ್ಲಾಸ್ಟಿಕ್ ಬಾಟಲ್ ತರಬಾರದು ಎಂದು ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮನವಿ ಮಾಡಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಮಾರ್ಚ್ 20 ರಿಂದ ಮಹದೇಶ್ವರ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ದೇವರ ದರ್ಶನದಿಂದ ಭಕ್ತರು ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಮೇ. 29 ರಿಂದ ಆನ್ ಲೈನ್ ದರ್ಶನ ಸೌಲಭ್ಯ ಕಲ್ಪಿಸಲಾಗಿತ್ತು. ನಂತರ ಜೂನ್ 8 ರಿಂದ ಹಲವು ನಿರ್ಬಂಧಗಳೊಡನೆ ಭಕ್ತರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಆದರೆ, ಬೆಟ್ಟದಲ್ಲಿ ಉಳಿದುಕೊಳ್ಳುವಂತಿರಲಿಲ್ಲ, ಅಭಿಷೇಕ ಮಾಡಿಸುವಂತಿರಲಿಲ್ಲ.
ದರ್ಶನಕ್ಕೆ ಅವಕಾಶ ಮಾತ್ರ ಇತ್ತು. ಇದಾದ ನಂತರ ಅಮಾವಾಸ್ಯೆ ಹಿನ್ನಲೆಯಲ್ಲಿ ಜೂನ್ 19 ರಿಂದ 21 ರವರೆಗೆ ಹಾಗು ಭಾನವಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತಿ ಭಾನುವಾರಗಳಂದು ಸಹ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಅನ್ ಲಾಕ್ 3.0 ಜಾರಿ ಹಿನ್ನಲೆಯಲ್ಲಿ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸಿ ಮಲೆಮಹದೇಶ್ವರನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

TRENDING