Sunday, August 9, 2020
Home ಅಂತರ್ ರಾಜ್ಯ ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು, ಶ್ರೀಲಂಕಾದ 16 ಪ್ರದೇಶಗಳ ಮಣ್ಣು ಸಂಗ್ರಹಿಸಿ,...

LATEST TRENDING

ಕೊರೊನಾ ಸೋಂಕಿಗೊಳಗಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ...

ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ.ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಯಡಿಯೂರಪ್ಪ ಅವರ ಆರೋಗ್ಯದ ಬಗ್ಗೆ...

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಲಾಯಂ ಸಿಂಗ್‌ ಆರೋಗ್ಯದಲ್ಲಿ...

 ಲಕ್ನೋ: ಅನಾರೋಗ್ಯದ ಹಿನ್ನೆಲೆಯಲ್ಲಿ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ (80) ಆರೋಗ್ಯ ಸ್ಥಿರವಾಗಿದೆ. ಮೂತ್ರಕೋಶ ಸಮಸ್ಯೆ ಕಾಣಿಸಿಕೊಂಡ...

ಹಾವೇರಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ...

ಹಾವೇರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ವ್ಯಾಪಕ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಹಾಗೂ ಬೆಳೆಹಾನಿ ಪ್ರಾಥಮಿಕ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿಗೆ...

ರಾಜ್ಯದಲ್ಲಿ ಪ್ರವಾಹ; ಸೋಮವಾರ ನರೇಂದ್ರ ಮೋದಿ ಸಭೆ

5 ರಾಜ್ಯಗಳ ಪ್ರವಾಹ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಭೆ ನಡೆಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗಳಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಆಗಸ್ಟ್ 10ರಂದು...

ಕೃಷಿ ವಲಯದ ಅಭಿವೃದ್ಧಿಗೆ ರೂ. 1 ಲಕ್ಷ...

 ನವದೆಹಲಿ : ಕೃಷಿ ವಲಯದ ಅಭಿವೃದ್ಧಿಗೆ ಒತ್ತು ಕೊಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿಯಡಿ ರೂ. 1 ಲಕ್ಷ ಕೋಟಿ...

ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು, ಶ್ರೀಲಂಕಾದ 16 ಪ್ರದೇಶಗಳ ಮಣ್ಣು ಸಂಗ್ರಹಿಸಿ, ಅಯೋಧ್ಯೆ ತಲುಪಿದ ಸಹೋದರರು

 ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ದಿನಗಣನೆ ಶುರುವಾಗಿದ್ದು, ಅಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಹಾಗೇ ಕೆಲವು ಭಕ್ತರು ಕೂಡ ಅಲ್ಲಿಗೆ ತಲುಪುತ್ತಿದ್ದಾರೆ.

ಹಾಗೇ 70 ವರ್ಷಗಳ ಮೇಲ್ಪಟ್ಟಿರುವ ಇಬ್ಬರು ಸಹೋದರರು ಕೂಡ ಅಯೋಧ್ಯೆಯನ್ನು ತಲುಪಿದ್ದಾರೆ. ವಿಶೇಷವೆಂದರೆ ರಾಮಮಂದಿರ ಭೂಮಿಪೂಜೆಗಾಗಿ ಇವರಿಬ್ಬರೂ ಸುಮಾರು 151 ನದಿಗಳ ನೀರನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.
ರಾಧೆ ಶ್ಯಾಮ್​ ಪಾಂಡೆ ಹಾಗೂ ಶಬ್ದ್ ವೈಜ್ಞಾನಿಕ್ ಮಹಾಕವಿ ತ್ರಿಫಲಾ ಎಂಬ ಸೋದರರು 151 ನದಿಗಳ ನೀರನ್ನು ಸಂಗ್ರಹಿಸಿದ್ದಾರೆ. ತಾವು 1968ರಿಂದಲೂ ಈ ಕಾರ್ಯದಲ್ಲಿ ತೊಡಗಿದ್ದೇವೆ. ಒಟ್ಟು 151 ನದಿಗಳಲ್ಲಿ, 8 ಅತಿ ದೊಡ್ಡ ನದಿಗಳು, ಮೂರು ಸಾಗರಗಳ ನೀರು ಇದೆ. ಹಾಗೇ ಶ್ರೀಲಂಕಾದ 16 ಪ್ರದೇಶಗಳ ಮಣ್ಣನ್ನೂ ಕೂಡ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಯಾವಾಗ ರಾಮ ಮಂದಿರ ನಿರ್ಮಾಣವಾಗುತ್ತದೆಯೋ ಆಗ ಪವಿತ್ರ ನದಿಗಳ ನೀರನ್ನು ಅರ್ಪಿಸಬೇಕು ಎಂಬುದು ನಮ್ಮ ಕನಸಾಗಿತ್ತು. ಹಾಗಾಗಿ ಭಾರತಾದ್ಯಂತ ಇರುವ ಪವಿತ್ರ ನದಿಗಳ ನೀರಿನ ಸಂಗ್ರಹದಲ್ಲಿ ತೊಡಗಿಕೊಂಡೆವು. ಹಾಗೇ, ಶ್ರೀಲಂಕಾದ ಮಣ್ಣನ್ನೂ ತಂದಿದ್ದೇವೆ. ಶ್ರೀರಾಮನ ಆಶೀರ್ವಾದದಿಂದ ಅದು ಸಾಧ್ಯವಾಗಿದೆ ಎಂದು ರಾಧೆ ಶ್ಯಾಮ್​ ಅವರು ತಿಳಿಸಿದ್ದಾರೆ.

1968ರಿಂದ 2019ರವರೆಗೆ ಈ ಕಾರ್ಯ ನಡೆಸಿದ್ದೇವೆ. ಎಷ್ಟೋ ಕಡೆಗಳಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದೇವೆ. ಸೈಕಲ್​, ಬೈಕ್​, ರೈಲು ಹಾಗೇ ವಿಮಾನದ ಮೂಲಕವೂ ಸ್ಥಳಕ್ಕೆ ತೆರಳಿ, ಮಣ್ಣು, ನೀರು ಸಂಗ್ರಹಿಸಿದ್ದೇವೆ ಎಂದಿದ್ದಾರೆ

TRENDING