ಸೋನು ಸೂದ್ ಸಾಕಷ್ಟು ಸಾಮಾಜಿಕ ಕೆಲಸ ಮಾಡಿತ್ತಿದ್ದಾರೆ. ಬಡವರಿಗೆ ಕೈಲಾದ ಸಹಾಯ ಮಾಡುತ್ತಿರುವ ಸೋನು ಈಗ ಮೂರು ಅನಾಧ ಮಕ್ಕಳನ್ನು ದತ್ತು ಪಡೆದಿದ್ದಾರೆ.
ರಾಜೇಶ್ ಕರಣಂ ಎನ್ನುವವರು ಸೋನುಗೆ ಟ್ವೀಟ್ ಮಾಡಿದ್ದರು ತೆಲಂಗಾಣ ರಾಜ್ಯದ ಮೂರು ಮಕ್ಕಳಿಗೆ ಸ್ವಂತದವರು ಯಾರೂ ಇಲ್ಲ. ಅವರು ನಿಮ್ಮ ಸಹಾಯ ಕೇಳುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ತಿಳಿಸಿದ್ದರು. ಆ ಮಕ್ಕಳ ವಿಡಿಯೋ ಸಹ ಹಂಚಿಕೊಂಡಿದ್ದರು.
ಈ ಮೂರು ಮಕ್ಕಳ ತಂದೆ, ಕಳೆದ ವರ್ಷ ನಿಧನರಾಗಿದ್ದರು. ಇನ್ನು ಅವರ ತಾಯಿ ಅನಾರೋಗ್ಯದಿಂದ ಕಳೆದ ವಾರ ಮೃತಪಟ್ಟರಂತೆ. ಆ ನಂತರ ಇವರನ್ನು ನೋಡಿಕೊಳ್ಳುವುದಕ್ಕೆ ಯಾರೆಂದರೆ ಯಾರೂ ಇಲ್ಲ. ಸಂಬಂಧಿಕರು ಸಹ ಯಾರೂ ಇಲ್ಲವಾದ್ದರಿಂದ, ಮಕ್ಕಳು ಅಕ್ಷರಶಃ ಅನಾಥರಾಗಿದ್ದರು.
ತಕ್ಷಣ ಸೋನು ಅವರ ತಂಡದವನ್ನು ಕಳಿಸಿದ್ದಾರೆ. ಆ ಮೂರು ಮಕ್ಕಳನ್ನು ಸಂಪರ್ಕಿಸಿದ್ದಾರೆ. ಸೋನು ಆ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸೋನು ಅವರು, ‘ಇನ್ನು ಮುಂದೆ ಅವರು ಅನಾಥರಲ್ಲ. ಅವರು ನನ್ನ ಜವಾಬ್ದಾರಿ’ ಎಂದು ಹೇಳಿಕೊಂಡಿದ್ದಾರೆ