Monday, August 10, 2020
Home ಅಂತರ್ ರಾಜ್ಯ ತಮಿಳುನಾಡು ಆನ್‌ಲೈನ್ ಜೂಜಾಟವನ್ನು ಉತ್ತೇಜಿಸಿದ ಆರೋಪದ ಮೇಲೆ ಮದ್ರಾಸ್ ಹೈಕೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ತಮನ್ನಾ ವಿರುದ್ಧ...

LATEST TRENDING

ನೀರಿನ ರಬಸಕ್ಕೆ ವಿಜಯನಗರ ಕಾಲುವೆ ಒಡೆದು ಬೆಳೆ...

ವಿಜಯನಗರ ಕಾಲುವೆ ಒಡೆದು ಅಪಾರ ಪ್ರಮಾಣದ ಭತ್ತದ ಬೆಳೆ ನೀರಿಗಾಹುತಿಯಾಗಿದೆ. ಗಂಗಾವತಿ ತಾಲ್ಲೂಕಿನ ಕಡೇಬಾಗಿಲು ಗ್ರಾಮದ ಬಳಿ ವಿಜಯನಗರ ಕಾಲುವೆ ಒಡೆದಿದೆ.

ಹೆಚ್ಚಾದ ನೀರಿನ ಮಟ್ಟ, ಮುಳುಗಡೆಯಾದ ಸೇತುವೆ

ರಾಯಚೂರು: ಒಂದೆಡೆ ಕರೊನಾ ಎಂಬ ಹೆಮ್ಮಾರಿ ಇಡಿಜಗತ್ತನ್ನೆ ಬೆನ್ ಬಿಡದೆ ಕಾಡುತ್ತಿದೆ ಆದರೆ ಇದರ ನಡುವೆ ಕರ್ನಾಟಕದಲ್ಲಿ ಪ್ರವಾಹ ಶುರುವಾಗಿದೆ. ಮಹಾರಾಷ್ಟ್ರದಲ್ಲಿ ಸುರಿದಿರುವ ಮಹಾಮಳೆಗೆ ಜಲಶಯದಿಂದ ಅಪರ ಪ್ರಮಾಣದ ನೀರನ್ನು...

ಕಾರ್ಮಿಕ ಸಂಘಟನೆಗಳಿಂದ ‘ಭಾರತ ರಕ್ಷಿಸಿ’ ಹೋರಾಟ

ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ರದ್ದು ಮಾಡಿರುವ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೋವಿಡ್-19...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ ಎಂದು ವರದಿಯಾಗಿದೆ. ತನಗೆ ಕೋವಿಡ್ ದೃಢವಾದ ಬಗ್ಗೆ ಸ್ವತಃ ಪ್ರಣಬ್ ಮುಖರ್ಜಿ ಅವರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಅಥಣಿ ಪಟ್ಟಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಮ್...

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೃಷಿ ಇಲಾಖೆಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಡಿಸಿ ಎಮ್ ಲಕ್ಷ್ಮಣ ಸವದಿಎಪಿ ಎಮ್ ಸಿ ಕಾಯ್ದೆಯ ತಿದ್ದುಪಡಿ ಯಾರಿಗೂ ಮಾರಕವಲ್ಲ...

ಆನ್‌ಲೈನ್ ಜೂಜಾಟವನ್ನು ಉತ್ತೇಜಿಸಿದ ಆರೋಪದ ಮೇಲೆ ಮದ್ರಾಸ್ ಹೈಕೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ತಮನ್ನಾ ವಿರುದ್ಧ ಪ್ರಕರಣ ದಾಖಲು

ನವದೆಹಲಿ: ಆನ್‌ಲೈನ್‌ ಜೂಟಾಟವನ್ನು ಉತ್ತೇಜನ ನೀಡುತ್ತಿದ್ದಾರೆಂದು ಆರೋಪಿಸಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಚೆನ್ನೈ ಮೂಲದ ವಕೀಲರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆನ್‌ಲೈನ್‌ ಜೂಜಾಟಕ್ಕೆ ಆನ್‌ಲೈನ್‌ನಲ್ಲಿ ಉತ್ತೇಜನ ನೀಡುತ್ತಿರುವ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣದ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸುವಂತೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಹಲವು ಮಾಧ್ಯಮಗಳ ವರದಿ ಮಾಡಿವೆ.

ಜೂಜಾಟಕ್ಕೆ ಬಳಸಿದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದ ಕಾರಣ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಅರ್ಜಿದಾರ ಈ ಪ್ರಕರಣವನ್ನು ದಾಖಲಿಸಿದ್ದಾನೆ ಎಂದು ತಿಳಿದುಬಂದಿದೆ. ಮದ್ರಾಸ್‌ ಹೈಕೋರ್ಟ್‌ನಲ್ಲಿ ದೂರು ಅರ್ಜಿ ಸಲ್ಲಿಸಿರುವ ಚೆನ್ನೈ ಮೂಲದ ವ್ಯಕ್ತಿ, ಆನ್‌ಲೈನ್‌ ಜೂಜಾಟದಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಕಾರಣದಿಂದ ಇಂತಹ ಆಪ್‌ಗಳನ್ನು ರದ್ದು ಮಾಡಬೇಕೆಂದು ಅರ್ಜಿದಾರ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

ಯುವಕರನ್ನು ಮನಸ್ಸನ್ನು ಆನ್‌ಲೈನ್‌ ಜೂಜಾಟಕ್ಕೆ ಸೆಳೆಯಲು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ತಮನ್ನಾ ಭಾಟಿಯಾ ಮುಂತಾದ ಸೆಲೆಬ್ರಿಟಿಗಳನ್ನು ಜಾಹೀರಾತುಗಳಲ್ಲಿ ಜೂಜು ಆನ್‌ಲೈನ್‌ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ, ಈ ಇಬ್ಬರೂ ಸೆಲೆಬ್ರಿಟಿಗಳನ್ನು ಬಂಧಿಸುವಂತೆ ವಕೀಲರು, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಮಂಗಳವಾರ ಎತ್ತಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದ ಕಳೆದ ಮಾರ್ಚ್‌ನಿಂದ ಯಾವುದೇ ಕ್ರಿಕೆಟ್‌ ಚಟುವಟಿಕೆಗಳು ನಡೆದಿರಲಿಲ್ಲ. ಭಾರತ ಫೆಬ್ರುವರಿಯಲ್ಲಿ ನ್ಯೂಜಿಲೆಂಂಡ್‌ ಪ್ರವಾಸ ಮಾಡಿತ್ತು. ನಂತರ ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿ ಆಡಲು ಸಜ್ಜಾಗುತ್ತಿದ್ದ ವೇಳೆ ಕೋವಿಡ್‌-19 ಸಾಂಕ್ರಾಮಿಕ ರೋಗ ವ್ಯಾಪಿಸಿದ್ದರಿಂದ ಸರಣಿಯನ್ನು ರದ್ದು ಮಾಡಲಾಗಿತ್ತು.

TRENDING