Monday, August 10, 2020
Home ಅಂತರ್ ರಾಜ್ಯ ಆಸ್ಪತ್ರೆ 2 ಕಿ.ಮೀ. ದೂರದಲ್ಲಿ ಇದ್ದರೂ ರಸ್ತೆಯಲ್ಲಿ ವಿಲ ವಿಲನೆ ಒದ್ದಾಡಿ ಸತ್ತ!

LATEST TRENDING

ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ...

ಕಲಬುರಗಿ: ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ತೊಲಗಲು ಆಗ್ರಹಿಸಿ ಪ್ರಾಂತ ರೈತ ಸಂಘ, ಸಿಐಟಿಯು , ಜೆಸಿಟಿಯು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಇಂದು...

ಡಿಸಿಎಮ್ ಸವದಿಯಿಂದ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ...

ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೆಜು ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಡಿಸಿಎಮ್ ಲಕ್ಷ್ಮಣ ಸವದಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ಕೊವಿಡ್ ಇರುವದರಿಂದ ಸಾಂಕೇತಿಕವಾಗಿ ಉದ್ಘಾಟನೆ...

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದ ನಟ...

ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್, ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಈ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ...

ರಾಜ್ಯದ ಪ್ರವಾಹ ಮಾಹಿತಿ ಪಡೆದ ಪ್ರಧಾನಿ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಪ್ರವಾಹದಿಂದ ಉಂಟಾದ ನಷ್ಟಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಹಿತಿ ಪಡೆದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಗೃಹ ಸಚಿವ ಗೃಹ ಸಚಿವ...

ಆಸ್ಪತ್ರೆ 2 ಕಿ.ಮೀ. ದೂರದಲ್ಲಿ ಇದ್ದರೂ ರಸ್ತೆಯಲ್ಲಿ ವಿಲ ವಿಲನೆ ಒದ್ದಾಡಿ ಸತ್ತ!

 ಬರೇಲಿ: ಆಸ್ಪತ್ರೆ 2 ಕಿ.ಮೀ. ದೂರದಲ್ಲಿದ್ದರೂ ಅಪಘಾತಕ್ಕೆ ಒಳಗಾಗಿದ್ದ 19ರ ಯುವಕ ವಿಲ ವಿಲನೆ ಒದ್ದಾಡುತ್ತಾ, ಸಹಾಯ ಯಾಚಿಸುತ್ತಾ ಪ್ರಾಣಬಿಟ್ಟಿದ್ದಾನೆ. ಈತನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಕನಿಷ್ಠ ಕಾಳಜಿಯನ್ನೂ ತೋರದ ಜನರು, ಈತ ವಿಲ ವಿಲ ಒದ್ದಾಡುತ್ತಿದ್ದದ್ದನ್ನು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ವಿಕೃತಾನಂದ ಅನುಭವಿಸಿದ್ದಾರೆ.

ದಿವ್ಯಾಂಶು ದೀಕ್ಷಿತ್​ (19) ಮೃತ ಯುವಕ. ಬರೇಲಿಯ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸದ ನಿಮಿತ್ತ ರೋಜಾ ಎಂಬ ಊರಿಗೆ ಬೈಕ್​ನಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನ ಈತನ ಬೈಕ್​ಗೆ ಡಿಕ್ಕಿ ಹೊಡೆಯಿತು. ಬೈಕ್​ನಿಂದ ಹಾರಿಬಿದ್ದ ಈತನ ತಲೆ ಮತ್ತು ಮೈಕೈಗೆ ಗಂಭೀರ ಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದ.

ತೀವ್ರ ರಕ್ತಸ್ರಾವವಾಗುತ್ತಿದ್ದರೂ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಯುವಕ, ತನ್ನನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಇಲ್ಲವೇ ಆಂಬುಲೆನ್ಸ್​ ಅನ್ನಾದರೂ ವ್ಯವಸ್ಥೆ ಮಾಡುವಂತೆ ಅಪಘಾತ ಸ್ಥಳದಲ್ಲಿ ನೆರೆದಿದ್ದ ಜನರನ್ನು ಕೇಳಿಕೊಳ್ಳುತ್ತಲೇ ಇದ್ದ. ಆದರೆ, ಯಾರೊಬ್ಬರೂ ಈತನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಆತ ವಿಲ ವಿಲನೆ ಒದ್ದಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದರು.

ಸುದ್ದಿ ತಿಳಿದ ಪೊಲೀಸರು ಅರ್ಧ ಗಂಟೆ ಬಿಟ್ಟು ಅಪಘಾತಕ್ಕೆ ಸ್ಥಳಕ್ಕೆ ಬಂದು ದೀಕ್ಷಿತ್​ನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕೇವಲ 2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇತ್ತು. ಆತನನ್ನು ತಕ್ಷಣವೇ ಕರೆತಂದಿದ್ದರೆ ಬದುಕುಳಿಸುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ, ಮಾನವೀಯತೆಯನ್ನೇ ಮರೆತ ಜನರು ಆತ ವಿಲ ವಿಲನೆ ಒದ್ದಾಡುತ್ತಾ ಪ್ರಾಣಬಿಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವುದರಲ್ಲೇ ವಿಕೃತಾನಂದ ಕಂಡುಕೊಂಡರು ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

TRENDING