Saturday, November 28, 2020
Home ಜಿಲ್ಲೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಯಡಿಯಾಪುರ ಬಸನಗೌಡ ಆಯ್ಕೆ

ಇದೀಗ ಬಂದ ಸುದ್ದಿ

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ಭಾರತ-ಬ್ರಿಟನ್ ಪ್ರಧಾನಿಗಳ ಮಹತ್ವದ ಮಾತುಕತೆ

 ನವದೆಹಲಿ, ನ.28: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಬೆಳೆಸುವ...

ಕ್ರಿಮಿನಾಶಕ ಸಿಂಪಡಣೆ ನಂತರ ಒಣಗಿದ ತೊಗರಿ ಬೆಳೆ,...

ಕಲಬುರಗಿ,ನ.28 : ಕ್ರಿಮಿನಾಶಕ ಸಿಂಪರಣೆ ನಂತರ ತೊಗರಿ ಬೆಳೆ ಒಣಗಿ ಹೊಗಿದ್ದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೀರಾಮಣಿ ತಾಂಡಾದಲ್ಲಿ ನಡೆದಿದೆ. ಕೀಟಗಳ ನಿಯಂತ್ರಣ...

ʼಕಿಸಾನ್ʼ ಯೋಜನೆಯಡಿ ಹಣ ಪಡೆಯುವ ಕುರಿತು ಇಲ್ಲಿದೆ...

 ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಏಳನೇ ಕಂತಿನ ಪಾವತಿ ಡಿಸೆಂಬರ್‌ನಲ್ಲಿ ಮಾಡಬೇಕಿದೆ ಎಂದು ವೇಳಾಪಟ್ಟಿ ತಿಳಿಸುತ್ತಿದೆ. ಈ ಯೋಜನೆಯ ಫಲಾನುಭವಿಗಳು ತಿಳಿದುಕೊಳ್ಳಬೇಕಾದ ಕೆಲವೊಂದು ಮಾಹಿತಿಗಳು ಇಂತಿವೆ:

ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ...

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ 98 ವಸತಿ ಯೋಜನೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕರ್ನಾಟಕ...

ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಯಡಿಯಾಪುರ ಬಸನಗೌಡ ಆಯ್ಕೆ

ಯಾದಗಿರಿ : ಕಳೆದ ದಿನಗಳ ಹಿಂದೆ ಯಾದಗಿರಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನವು ತೆರವಾದ ಹಿನ್ನೆಲೆ ಇಂದು ಜುಲೈ 10 ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಗೆ ಕರೋನ ವೈರಸ್ನಿಂದ ಸ್ವಲ್ಪ ಸಮಯ ತಡೆ : ಇಂದು ಯಾದಗಿರಿ ಜಿಲ್ಲಾಡಳಿತದ ಸಿಬ್ಬಂದಿಗಳಿಗೆ ಕರೋನಾವೈರಸ್ ಸಕಾರಾತ್ಮಕ ವರದಿ ಬಂದಿರುವ ಹಿನ್ನೆಲೆ ಜಿಲ್ಲಾಡಳಿತದ ಭವನಕ್ಕೆ ಸಂಪೂರ್ಣ ಸ್ಯಾನಿಟೇಜಿಂಗ್ ಸಿಂಪರಣೆ ಮಾಡಲಾಗುತ್ತಿತ್ತು. ಇದರ ನಡುವೆ ಬೆಳಿಗ್ಗೆ ಪ್ರಾರಂಭವಾಗಬೇಕಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆ ಸ್ವಲ್ಪ ಸಮಯ ತಡವಾಗಿ ಮಧ್ಯಾಹ್ನ ಪ್ರಾರಂಭವಾಯಿತು. ಜಿ. ಪ. ಸಭಾಂಗಣದಲ್ಲಿ ಸದಸ್ಯ ಹಾಜರ್ : ಜಿ.ಪ. ಅಧ್ಯಕ್ಷರ ಚುನಾವಣೆ ಪ್ರಾರಂಭ ಹಿನ್ನೆಲೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುಮಾರು 3 ಗಂಟೆಗೆ ಅಧಿಕೃತವಾಗಿ 22 ಜಿಲ್ಲಾ ಪಂಚಾಯತ್ ಸದಸ್ಯರು ಹಾಜರಾಗಿದ್ದರು. ಅದರಲ್ಲಿ ಬಿಜೆಪಿ ಪಕ್ಷದಿಂದ 10 ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದಿಂದ 11 ಹಾಗೂ ಜೆಡಿಎಸ್ ಪಕ್ಷದಿಂದ ಓರ್ವ ಅಭ್ಯರ್ಥಿ ಸಭಾಂಗಣದಲ್ಲಿ ಹಾಜರಿದ್ದರು.

ಸದಸ್ಯರ ಸಂಖ್ಯಾಬಲ : ಒಟ್ಟಾರೆ ಯಾದಗಿರಿ ಜಿಲ್ಲಾ ಪಂಚಾಯತಿ ಸದಸ್ಯರ ಸಂಖ್ಯೆಯು 24 ಆಗಿದ್ದು ಅದರಲ್ಲಿ ಓರ್ವ ಬಿಜೆಪಿ ಸದಸ್ಯ ಭೀಮನಗೌಡ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯ ಅಶೋಕ್ ರೆಡ್ಡಿ ಗೋನಾಲ್ ಅಕಾಲಿಕ ಮರಣ ಹೊಂದಿದ್ದರು. ಹೀಗಾಗಿ ಸದಸ್ಯರ ಸಂಖ್ಯೆಯು ಕುಸಿದು 22 ಅಭ್ಯರ್ಥಿಗಳನ್ನು ಒಳಗೊಂಡಿತ್ತು. ಅದರಲ್ಲಿ 10 ಬಿಜೆಪಿ, 11 ಕಾಂಗ್ರೆಸ್ ,1 ಜೆಡಿಎಸ್ ಸದಸ್ಯರುಗಳು ಇದ್ದರು.

ಮಧ್ಯಾಹ್ನ 3: 00 ಕ್ಕೆ ಚುನಾವಣೆ :  ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶರಣಮ್ಮ ನಾಗಮ್ಮ ಪಕ್ಷದ ಪರವಾಗಿ ಕಣಕ್ಕಿಳಿದಿದ್ದರು . ಬಿಜೆಪಿ ಪಕ್ಷದಿಂದ ಯಾವ ಓರ್ವ ಸದಸ್ಯನನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ನಿಲ್ಲಿಸಿರಲಿಲ್ಲ. ಕಾಂಗ್ರೆಸ್ ಪಕ್ಷದ ಸದಸ್ಯ ಯಡಿಯಾಪುರ ಬಸವನಗೌಡ ಸಭಾಂಗಣದಲ್ಲಿ ತಮ್ಮದೇಯಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಮ್ಮ ನಾಗಮ್ಮ ಹಾಗೂ ಪಕ್ಷದ ವಿರುದ್ಧ ಬಂಡಾಯವೆದ್ದು ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಚುನಾವಣೆ ಜಯಭೇರಿ : ಬಿಜೆಪಿ ಪಕ್ಷದ 10 ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯ ಕಿಶನ್ ರಾಥೋಡ್ ಬಂಡಾಯ ಅಭ್ಯರ್ಥಿ ಯಡಿಯಾಪುರ ಬಸನಗೌಡರಿಗೆ ಬೆಂಬಲವನ್ನು ಸೂಚಿಸಿದರು. ಹೀಗಾಗಿ ನೂತನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಯಡಿಯಾಪುರ ಬಸನಗೌಡ ಅವರು ಆಯ್ಕೆಯಾದರು.

ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ :ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚುನಾವಣೆ ನಡೆಯುವ ಪೂರ್ವ ದಿನದಂದು ಜಿಲ್ಲಾ ಚುನಾವಣೆ ವೀಕ್ಷಕ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ 12 ಸದಸ್ಯರಿಗೆ ಸಭೆಗೆ ಹಾಜರಾಗಲು ವಿಪ್ ಜಾರಿ ಮಾಡಲಾಗಿತ್ತು . ಅದರಂತೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣಾ ಅಧಿಕೃತ ಅಭ್ಯರ್ಥಿಯಾಗಿ ಶರಣಮ್ಮ ನಾಗಪ್ಪ ಅವರನ್ನು ಘೋಷಿಸಲಾಯಿತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಡಿಯಾಪುರ ಬಸನಗೌಡ ಹಾಗೂ ಬೆಂಬಲಿತ ಕೆಲವು ಸದಸ್ಯರು ಕಾಂಗ್ರೆಸ್ ಕಚೇರಿಯಲ್ಲಿ ಸಭೆಗೆ ಹಾಜರಾಗಲಿಲ್ಲ.

ಪಕ್ಷಾಂತರ ನಿಷೇಧ ಕಾಯ್ದೆ .: ಕಾಂಗ್ರೆಸ್ ಅಭ್ಯರ್ಥಿ ಯಡಿಯಾಪುರ ಬಸನಗೌಡ ಬಂಡಾಯವೆದ್ದು ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಧ್ಯಕ್ಷರಾಗಿ ಆಯ್ಕೆಯಾದರು. ಇದರ ನಡುವೆ ಕಾಂಗ್ರೆಸ್ಸಿನ ಕೆಲವು ಸದಸ್ಯರು ಸಂವಿಧಾನದ ಹತ್ತನೇ ಅನುಸೂಚಿ ಪ್ರಕಾರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕಾಂಗ್ರೆಸ್ ಅಭ್ಯರ್ಥಿ ಯಡಿಯಾಪುರ ಬಸನಗೌಡ ಅವರ ಪ್ರಾಥಮಿಕ ಕಾಂಗ್ರೆಸ್ ಸದಸ್ಯತ್ವವನ್ನು ರದ್ದು ಮಾಡುವಂತೆ ಚುನಾವಣೆ ವೀಕ್ಷಕ ಅಲ್ಲಂಪ್ರಭು ಪಾಟೀಲ್ ಅವರಿಗೆ ಮನವರಿಕೆ ಮಾಡಿದ್ದಾರೆ.

ವರದಿ : ಶಿವಕುಮಾರ್ ವೈ ದೇಶಮಾನೆ,ಯಾದಗಿರಿ

TRENDING