Monday, August 10, 2020
Home ಕೋವಿಡ್-19 21 ಜನರಲ್ಲಿ ಕೋವಿಡ್-19 ಸೋಂಕು ದೃಡ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

LATEST TRENDING

ಅಥಣಿ ಪಟ್ಟಣದಲ್ಲಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಮ್...

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೃಷಿ ಇಲಾಖೆಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಡಿಸಿ ಎಮ್ ಲಕ್ಷ್ಮಣ ಸವದಿಎಪಿ ಎಮ್ ಸಿ ಕಾಯ್ದೆಯ ತಿದ್ದುಪಡಿ ಯಾರಿಗೂ ಮಾರಕವಲ್ಲ...

ಮಾಜಿ ಸಚಿವ ಜಿ.ರಾಮಕೃಷ್ಣ ನಿಧನ ಹಿನ್ನಲೆ ಶ್ರದ್ಧಾಂಜಲಿ

ಕಲಬುರಗಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಜಿ.ರಾಮಕೃಷ್ಣ ನಿಧನ ಹಿನ್ನೆಲೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ...

ಕಲಬುರಗಿ: ಕಾರ್ಪೋರೇಶನ್ ಕಂಪನಿಗಳು ಬೇಸಾಯ ಬಿಟ್ಟು ತೊಲಗಲು ಆಗ್ರಹಿಸಿ ಪ್ರಾಂತ ರೈತ ಸಂಘ, ಸಿಐಟಿಯು , ಜೆಸಿಟಿಯು, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಮತ್ತಿತರರ ಸಂಘಟನೆಗಳ ನೇತೃತ್ವದಲ್ಲಿ ಇಂದು...

ಡಿಸಿಎಮ್ ಸವದಿಯಿಂದ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ...

ಅಥಣಿ ಪಟ್ಟಣದ ಹೊರವಲಯದಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೆಜು ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಡಿಸಿಎಮ್ ಲಕ್ಷ್ಮಣ ಸವದಿ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ಕೊವಿಡ್ ಇರುವದರಿಂದ ಸಾಂಕೇತಿಕವಾಗಿ ಉದ್ಘಾಟನೆ...

ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ...

ಉಡುಪಿ ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು...

21 ಜನರಲ್ಲಿ ಕೋವಿಡ್-19 ಸೋಂಕು ದೃಡ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ದೊಡ್ಡಬಳ್ಳಾಪುರ: ಕೊರೊನಾ ಸೋಂಕಿನ ಪ್ರಕರಣದ ಮುಂಜಾಗ್ರತಾ ಕ್ರಮವಾಗಿ ವಿನಾಯಕನಗರ, ಚಿಕ್ಕಪೇಟೆ, ಸ್ನೇಹಲೋಕ ಎಲೆಕ್ಟ್ರಾನಿಕ್  ಹಿಂಬಾಗದ ವಸತಿ ಪ್ರದೇಶ, ಕಲ್ಲುಪೇಟೆ, ದೇಶದ ಪೇಟೆ ರಾಜೀವ್ ಗಾಂಧಿ ಕಾಲೋನಿಯನ್ನು ನರಸಭೆವತಿಯಿಂದ ಸೀಲ್ ಡೌನ್ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್  ತಿಳಿಸಿದ್ದಾರೆ.

ನಗರದ ಹಲವೆಡೆ ಸೀಲ್ ಡೌನ್  ಹಾಗೂ ವೈದ್ಯಕೀಯ ಸಿಬ್ಬಂದಿಗಳ ಚಟುವಟಿಕೆ ಹಿನ್ನೆಲೆ, ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಕುರಿತು ಅಂಕಿ ಸಂಖ್ಯೆಗಳ ಕಾರುಬಾರು ಜೋರಾಗಿದ್ದು, ಅಧಿಕೃತ ಮಾಹಿತಿ ಇಲ್ಲದೆ ಸಾರ್ವಜನಿಕರನ್ನು ಆತಂಕ್ಕೆ ತಳ್ಳುತ್ತಿದ್ದಾರೆಂದು ಆಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಪಟ್ಟಣದ ಕುಂಬರಪೇಟೆಯ 16  ಜನ ದೊಡ್ಡಬಳ್ಳಾಪುರದಲ್ಲಿ ಒಬ್ಬರು, ನೆಲಮಂಗಲದಲ್ಲಿ ಮೂವರು ಹಾಗೂ ಕೇರಳದಿಂದ ಬಂದಿದ್ದ ಒಬ್ಬರಿಗ ಸೇರಿದಂತೆ ಒಟ್ಟು ಇಪ್ಪತ್ತೊಂದು ಜನರಲ್ಲಿ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ  ತಾಲೂಕಿನ  ಕೊಡಿಗೇಹಳ್ಳಿ-ಪಿ-14452 ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಕೋವಿಡ್  ತಪಾಸಣೆ ವೇಳೆ ಸೊಂಕು ಕಂಡು ಬಂದಿದೆ. ಇನ್ನೂ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಪಿ-14453 ತೀವ್ರ ಉಸಿರಾಟದ ತೊಂದರೆಯಿಂದ ನಿಗದಿತ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಸೊಂಕು ದೃಡಪಟ್ಟಿದ್ದು ಪಿ-14454 ಹಾಗೂ ಪಿ-14455 ಐಎಲ್ಐ ಕೇಸ್ ಗಳಾಗಿದ್ದು ನೆಲಮಂಗಲ್ಲಿ ಒಟ್ಟು ಮೂವರಿಗೆ ಸೊಂಕು ತಗುಲಿದೆ.

 ಬೆಂಗಳೂರು ಗ್ರಾಮಾಂತರ ಜಿಲ್ಲೆ,  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ 17 ಜನರು, ನೆಲಮಂಗಲ ತಾಲ್ಲೂಕಿನ 3 ಜನರು ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಒಬ್ಬರಲ್ಲಿ ಸೇರಿದಂತೆ ಒಟ್ಟು 21 ಜನರಲ್ಲಿ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

 ಹೊಸಕೋಟೆ ನಗರದ ಕುಂಬಾರಪೇಟೆಯ ನಿವಾಸಿಗಳಾದ ಪಿ-14435, ಪಿ-14436, ಪಿ-14437, ಪಿ-14438, ಪಿ-14439, ಪಿ-14441, ಪಿ-14442, ಪಿ-14443, ಪಿ-14444, ಪಿ-114445, ಪಿ-14446, ಪಿ-14447, ಪಿ-14448, ಪಿ-14449, ಸೇರಿದಂತೆ ಒಟ್ಟು 14 ಜನರು ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ (ಪಿ-10399) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಪಿ-14450 ವ್ಯಕ್ತಿಯು ಇನ್‌ ಫ್ಲೂಯೆನ್ಜಾ ಲೈಕ್‌ ಇಲ್ನೆಸ್‌ (ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಮತ್ತು ಹೊಸಕೋಟೆ ನಗರದ  ಚಿಕ್ಕತಿಗಳರಪೇಟೆಯ ನಿವಾಸಿಯಾದ ಪಿ-14440 ಕೊರೋನಾ ವೈರಾಣು ಸೋಂಕಿತ ವ್ಯಕ್ತಿಯ(ಪಿ-8545) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದ  ಹಿನ್ನೆಲೆ ಹಾಗೂ ಹೊಸಕೋಟೆ ನಗರದ ನಿವಾಸಿಯಾದ ಪಿ-14451 ಕೇರಳ ರಾಜ್ಯದಿಂದ ಹಿಂದಿರುಗಿದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಕೊಡಿಗೇಹಳ್ಳಿಯ ನಿವಾಸಿ 54 ವರ್ಷದ ಮಹಿಳೆ (ಪಿ-14452) ತೀವ್ರ ಉಸಿರಾಟದ ತೊಂದರೆಯಿಂದ ‌ಬಳಲುತ್ತಿದ್ದ ಹಿನ್ನೆಲೆ, ನೆಲಮಂಗಲ‌ ತಾಲ್ಲೂಕಿನ  ಅರಿಶಿಣಕುಂಟೆಯ ನಿವಾಸಿ 54 ವರ್ಷದ ಪುರುಷ (ಪಿ-14453) ತೀವ್ರ ಉಸಿರಾಟದ ತೊಂದರೆಯಿಂದ ‌ಬಳಲುತ್ತಿದ್ದ ಹಿನ್ನೆಲೆ ಹಾಗೂ ನೆಲಮಂಗಲ‌ ನಗರದ ನಿವಾಸಿ 43 ವರ್ಷದ ಪುರುಷ(ಪಿ-14454) ಹಾಗೂ 14 ವರ್ಷದ ಬಾಲಕಿ(ಪಿ-14455) ಇನ್‌ ಫ್ಲೂಯೆನ್ಜಾ ಲೈಕ್‌ ಇಲ್ನೆಸ್‌ (ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಕೊರೋನಾ ವೈರಾಣು ಸೋಂಕು ದೃಢಪಟ್ಟಿರುತ್ತದೆ.

ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ತಿಳಿಸಿದ್ದಾರೆ.

ಪುರುಷೋತ್ತಮ

ದಿ ನ್ಯೂಸ್ 24 ಕನ್ನಡ, ದೊಡ್ಡಬಳ್ಳಾಪುರ

TRENDING