Thursday, July 29, 2021
Homeಚಾಮರಾಜನಗರಕೊಳ್ಳೇಗಾಲಬೈಕ್‌ನಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು

ಇದೀಗ ಬಂದ ಸುದ್ದಿ

ಬೈಕ್‌ನಿಂದ ಬಿದ್ದು ಪೊಲೀಸ್ ಪೇದೆ ಮೃತ್ಯು

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಬೈಕ್‌ನಿಂದ ಆಯ ತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಹೊಸ‌ಅಣಗಳ್ಳಿ ಬಳಿಯ ತಿರುವಿನಲ್ಲಿ ನಡೆದಿದೆ.

ಆರ್.ಸಿದ್ದರಾಜು(33) ಮೃತಪಟ್ಟ ಪೊಲೀಸ್ ಪೇದೆ. ಇವರು ಹನೂರಿನ ಆರ್‌.ಎಸ್.ದೊಡ್ಡಿ ಗ್ರಾಮದವರಾಗಿದ್ದು ಕೊಳ್ಳೇಗಾಲದ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಸಿದ್ದರಾಜು ಕಳೆದ ರಾತ್ರಿ ಕರ್ತವ್ಯ ಮುಗಿಸಿ ಬರುತ್ತಿದ್ದ ವೇಳೆ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಿಕ್ಕ ಕಾಲುವೆಯಲ್ಲಿ ಬೈಕ್ ಸಮೇತ ಬಿದ್ದಿದ್ದಾರೆ. ತಡ ರಾತ್ರಿಯಾಗಿದ್ದರಿಂದ ಯಾರೂ ಗಮನಿಸಿಲ್ಲ. ನೀರಿನಲ್ಲಿ ತಲೆ ಮುಳುಗಿ ಉಸಿರುಗಟ್ಟಿ ಸಾವಿಗೀಡಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬೆಳಗಿನ ಜಾವ ದಾರಿಹೋಕರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಸಾವನ್ನಪ್ಪಿರುವುದು ಪೊಲೀಸ್ ಪೇದೆ ಎಂಬುದು ತಿಳಿದು ಬಂದಿದೆ.

ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಎಚ್.ಡಿ.ಆನಂದ್‌ಕುಮಾರ್, ಡಿವೈಎಸ್ಪಿ ನವೀನ್‌ಕುಮಾರ್, ಸಿಪಿಐ ಶ್ರೀಕಾಂತ್, ಪಿಎಸ್ಐಗಳಾದ ವಿಸಿ.ಅಶೋಕ್ ಹಾಗೂ ಜೆ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಉಪವಿಭಾಗ ಆಸ್ಪತ್ರೆಗೆ ತೆರಳಿದ ಎಸ್ಪಿ‌ ಅವರು ಮೃತ ಪೊಲೀಸ್ ಪೇದೆಯ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img