Saturday, October 31, 2020
Home ಚಾಮರಾಜನಗರ ಕೊಳ್ಳೇಗಾಲ ಕೊಳ್ಳೇಗಾಲ ಅಂಜುಮನ್ ಸಂಸ್ಥೆಗೆ ನೂತ‌ನ ಅಧ್ಯಕ್ಷರಾಗಿ ಸಮೀಉಲ್ಲಾ ಆಯ್ಕೆ

ಇದೀಗ ಬಂದ ಸುದ್ದಿ

ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದು, ಸಿಸಿಬಿ ಪೊಲೀಸರು ಸಂಪತ್...

ಮನೆಯೊಂದರಲ್ಲಿದ್ದ 435 ಕೆ.ಜಿ ಬ್ರೌನ್​ ಶುಗರ್ ವಶಕ್ಕೆ

ತೌಬಲ್ ಜಿಲ್ಲೆಯ ಮೌಜಿಂಗ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ಫೋಸಿಸ್ ಸೇರಿ 3 ಸಂಸ್ಥೆಗಳಿಂದ ಭೀಮಾ ನೆರೆ...

ಕಲಬುರಗಿ: ಭೀಮಾ ನದಿ ಪ್ರವಾಹ ಸಂತ್ರಸ್ತರ ನೆರವಿಗೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ಇನ್ಫೋಸಿಸ್ ಹಾಗೂ ರಾಮಕೃಷ್ಣ ಸೇವಾ ಆಶ್ರಮ ಮುಂದಾಗಿವೆ. ಮೂರು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ...

ಕಾರ್ಮಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿ: ಡಿಸಿ...

ಮೈಸೂರು: ಜಿಲ್ಲೆಯ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ಆಗಾಗ್ಗೆ ಕೋವಿಡ್-19 ಪರೀಕ್ಷೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ...

ರಾಜ್ಯೋತ್ಸವಕ್ಕೆ ಕ್ಯಾತೆ ತೆಗೆದ ಮಹಾರಾಷ್ಟ್ರ

ಮುಂಬೈ (ಮಹಾರಾಷ್ಟ್ರ): ನಾವು ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಏಕನಾಥ್ ಶಿಂಧೆ ಹಾಗೂ ಚಗನ್ ಭುಜ್ಪಾಲ್ ಗಡಿ...

ಕೊಳ್ಳೇಗಾಲ ಅಂಜುಮನ್ ಸಂಸ್ಥೆಗೆ ನೂತ‌ನ ಅಧ್ಯಕ್ಷರಾಗಿ ಸಮೀಉಲ್ಲಾ ಆಯ್ಕೆ

ನಗರ ವ್ಯಾಪ್ತಿಯ ಅಂಜುಮನ್ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ನಗರದ ನೂರ್‌ಮೊಹಲ್ಲಾದ ಸಮೀಉಲ್ಲಾ ಚುನಾಯಿತರಾದರು.

ಜಿಲ್ಲಾ ವಕ್ಫ್ ಅಧಿಕಾರಿ ನೂರ್‌ಪಾಶ ಅವರ ನೇತೃತ್ವದಲ್ಲಿ ಇಂದು ನಗರದ ಅಂಜುಮನ್ ಕಾಂಪ್ಲೆಕ್ಸ್‌ನಲ್ಲಿ ಚುನಾವಣೆ ನಡೆಯಿತು.

ಅಂಜುಮನ್ ಸಂಸ್ಥೆಯ ನೂತನ ಪದಾಧಿಕಾರಿಗಳು

ಅಂಜುಮನ್ ಸಂಸ್ಥೆಯಿಂದ ವಕ್ಫ್ ಕಾರ್ಯಕಾರಿಣಿ ಸಮಿತಿಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಮೀಉಲ್ಲಾ ಹಾಗೂ ಮೊಹಮ್ಮದ್ ನಾಸೀರುದ್ದೀನ್ ಸ್ಪರ್ಧೆ ಮಾಡಿದ್ದರು.

ಒಟ್ಟು ಹದಿನೈದು ಸದಸ್ಯರು ಮತ ಚಲಾಯಿಸಿದ್ದು ಈ ಪೈಕಿ ಇಬ್ಬರು ಅಭ್ಯರ್ಥಿಗಳೂ ಕೂಡ ತಲಾ 7 ಮತಗಳನ್ನು ಪಡೆದು ಒಂದು ಮತ ತಿರಸ್ಕೃತಗೊಂಡಿತು. ಬಳಿಕ ಲಾಟರಿ ತೆಗೆಯುವ ಮೂಲಕ ನಡೆಸಲಾದ ಆಯ್ಕೆ ಪ್ರಕ್ರಿಯೆಯಲ್ಲಿ ಸಮೀಉಲ್ಲಾ ಗೆಲುವು ಸಾಧಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅಕ್ರಮ್ ಪಾಶ(ಎಪಿ) 8 ಮತಗಳನ್ನು ಪಡೆದು ಗೆಲುವು ಕಂಡರು. ಅನ್ವರ್ ಪಾಶ 7 ಮತಗಳನ್ನು ಗಳಿಸಿ ಕೇವಲ ಒಂದು ಮತದಿಂದ ಪರಾಭವಗೊಂಡರು.

ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಎಂ.ಅನ್ವರ್‌ ಬಾಷ 8 ಮತಗಳನ್ನು ಪಡೆದು ಜಯಗಳಿಸಿದರೆ ಸೈಯದ್ ಕಲೀಮುಲ್ಲಾ 7 ಮತಗಳು ಪಡೆದು ಒಂದು ಮತದಿಂದ ಸೋಲನುಭವಿಸಿದರು.

ಖಜಾಂಚಿ ಸ್ಥಾನವನ್ನು 9 ಮತಗಳನ್ನು ಪಡೆಯುವ ಮೂಲಕ ಇಮ್ರಾನ್ ಖಾನ್ ಗೆಲುವು ಸಾಧಿಸಿದರು. ಮತ್ತೋರ್ವ ಸ್ಪರ್ಧಿ ಮೊಹಮ್ಮದ್ ರಿಜ್ವಾನುಲ್ಲಾ ಖಾನ್ 6 ಮತಗಳನ್ನು ಪಡೆದು ಪರಾಜಿತರಾದರು.

ಬಳಿಕ ನೂತನ ಅಧ್ಯಕ್ಷ ಸಮೀಉಲ್ಲಾ ಮಾತನಾಡಿ ಸಮುದಾಯದ ಎಲ್ಲರೂ ನನಗೆ ಸಹಕಾರ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಸಮುದಾಯಕ್ಕೆ ಕೆಟ್ಟ ಹೆಸರು ತರುವುದಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ ಎಂದರು.

ವಕ್ಫ್ ನಿರೀಕ್ಷಕ ಆಸಿಫ್ ಖಾನ್, ಸಹಾಯಕ ಚುನಾವಣಾಧಿಕಾರಿ ಮೊಹಮ್ಮದ್ ಯೂನುಸ್ ಚುನಾವಣೆ ಪ್ರಕ್ರಿಯೆಯಲ್ಲಿ ಇದ್ದರು.

TRENDING