Sunday, June 13, 2021
Homeಬೆಂಗಳೂರು'ಕ್ರಿಕೆಟ್ ಬುಕ್ಕಿಂಗ್' ಮಾಫಿಯಾ ಆರೋಪದಲ್ಲಿ 'ಉದ್ಯಮಿ ಅಲಿ' ವಶಕ್ಕೆ ಪಡೆದು ವಿಚಾರಣೆ

ಇದೀಗ ಬಂದ ಸುದ್ದಿ

‘ಕ್ರಿಕೆಟ್ ಬುಕ್ಕಿಂಗ್’ ಮಾಫಿಯಾ ಆರೋಪದಲ್ಲಿ ‘ಉದ್ಯಮಿ ಅಲಿ’ ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು : ಕ್ರಿಕೆಟ್ ಬುಕ್ಕಿಂಗ್ ಮಾಫಿಯಾ ಪ್ರಕರಣದ ಬೆನ್ನು ಹತ್ತಿದ ರಾಜ್ಯದ ಸಿಸಿಬಿ ಪೊಲೀಸರು, ಇದೀಗ ಉದ್ಯಮಿ ಕೆಪಿಎಲ್ ಬೆಳಗಾವಿ ಪ್ಯಾಂಥರ್ಸ್ ಟೀಂ ಮಾಲೀಕ ಅಲಿ ಅಸ್ಫಕ್ ಥಾರ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಮೂಲಕ ಬೆಂಗಳೂರು ಪೊಲೀಸರು ಬಿಗ್ ಆಪರೇಷನ್ ಮಾಡಿದ್ದಾರೆ.

ಸ್ಥಳೀಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಬುಕ್ಕಿಂಗ್ ಮಾಫಿಯಾ ನಡೆಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ನಗರ ಸಿಸಿಬಿ ಪೊಲೀಸರು, ಕೆಪಿಎಲ್ ಬೆಳಗಾವಿ ಪ್ಯಾಂಥರ್ಸ್ ಟೀಂ ಮಾಲೀಕ ಹಾಗೂ ಅಲಿ ಟೂರ್ಸ್ ಅಂಡ್ ಟ್ರಾವೆಲ್ ಮಾಲೀಕ ಉದ್ಯಮಿ ಅಲಿ ಅಸ್ಫಕ್ ಥಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಬಿ ವಿಚಾರಣೆಯ ವೇಳೆ, ಕ್ರಿಕೆಟರ್ಸ್ ಬಗ್ಗೆ ಹಲವು ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ದಾರಂತೆ ಅಲಿ. ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಲ್ ಮ್ಯಾಚ್ ನಿಂದ ಅಂತರಾಷ್ಟ್ರೀಯ ಮ್ಯಾಚ್ ವರೆಗೆ ಫಿಕ್ಸ್ ಮಾಡುತ್ತಿದ್ದ ಮಾಫಿಯಾದಲ್ಲಿ ಬಾಗಿಯಾಗಿದ್ದರು ಅಲಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿಸಿಬಿ ಪೊಲೀಸರು ಸ್ಪಷ್ಟ ಪಡಿಸಿದ ನಂತ್ರ ತಿಳಿಯಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img