Sunday, June 13, 2021
Homeಜಿಲ್ಲೆವಿಜಯಪುರ : ಐದು ದಿನಗಳ ನೂಲು ಸುತ್ತುವ ವಿಶೇಷ ಪೂಜೆ

ಇದೀಗ ಬಂದ ಸುದ್ದಿ

ವಿಜಯಪುರ : ಐದು ದಿನಗಳ ನೂಲು ಸುತ್ತುವ ವಿಶೇಷ ಪೂಜೆ

ಚಡಚಣ : ತಾಲ್ಲೂಕಿನ ಉಮರಜ ಗ್ರಾಮದಲ್ಲಿ ನೂಲು ಹುಣ್ಣಿಮೆಯಿಂದ 5 ದಿನಗಳ ಕಾಲ ನೂಲು ಸುತ್ತುವ ವಿಶೇಷ ಪೂಜೆ ನೇರವೇರಿತು.

ಶ್ರೀ ರೇವಣ ಸಿದ್ಧೇಶ್ವರನಿಗೆ ವಿಶೇಷವಾದ ಪೂಜೆಯು ರುದ್ರಾಭಿಷೇಕ ನಡೆಯಿತು. ಪೂಜೆ ಕಣ್ತುಂಬಿಕೊಳ್ಳಲು ಐದು ದಿನವೂ ನೂರಾರು ಜನರು ಪಾಲ್ಗೊಳ್ಳುತ್ತಿದ್ದರು. ನೂಲು ಸುತ್ತಿ ಅಕ್ಕಿಯನ್ನು ಎರೆಯುವುದು ದಿನೇ ದಿನೇ ಹೆಚ್ಚಾಗುತ್ತ ಹೋದರೆ ಉತ್ತಮ ಮಳೆ-ಬೆಳೆ ಸಮೃದ್ಧಿಯಾಗುತ್ತದೆಂಬ ನಂಬಿಕೆ ಪೂಜೆ ಮಾಡಲಾಗುತ್ತದೆ‌

ಆಷಾಢ ಅಮವಾಸ್ಯೆಯಿಂದ ಅಂದರೆ ಶ್ರಾವಣ ಮಾಸ ಪೂರ್ಣ ನಡೆಯುವ ಒಂದು ತಿಂಗಳ ಪರ್ಯಂತ ಮಹಾದಾಸೋಹಿ ಶ್ರೀ ಕಲಬುರ್ಗಿ ಶರಣಬಸಪ್ಪನವರ ಪುರಾಣ ಹಾಗೂ ಮಹಾರುದ್ರಾಭಿಷೇಕವು ನಡೆಯುತ್ತಿದೆ.

ಆಕಾಶವಾಣಿ ಕಲಾವಿದ ಸಿದ್ದಣ್ಣಾ ಕುಂಬಾರ್ ಮೂಗಿನ ಮೂಲಕ ಕೋಳಲನ್ನು ನುಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಜಗ ಜಟ್ಟಿಗಳಿಂದ ಕುಸ್ತಿ ಪಂದ್ಯಗಳು ಜರುಗಿದವು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img