Sunday, June 13, 2021
Homeಜಿಲ್ಲೆಕೋಲಾರ : ಕೋಡಿ ಉಕ್ಕಿ ಹರಿಯುತ್ತಿರುವ ದೊಡ್ಡಶಿವಾರ ಕೆರೆ

ಇದೀಗ ಬಂದ ಸುದ್ದಿ

ಕೋಲಾರ : ಕೋಡಿ ಉಕ್ಕಿ ಹರಿಯುತ್ತಿರುವ ದೊಡ್ಡಶಿವಾರ ಕೆರೆ

ಕೋಲಾರ : ಬಯಲುಸೀಮೆ ಕೋಲಾರ ಜಿಲ್ಲೆಯ ಜೀವ‌ಜಲ ಕೆಸಿವ್ಯಾಲಿ ನೀರಿನಿಂದ ಇಂದು ಮಾಲೂರು ದೊಡ್ಡ ಶಿವಾರ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿದೆ.

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ನೀರಾವರಿ ಅಧಿಕಾರಿಗಳ ತಂಡ ಕೆರೆಗೆ ಭೇಟಿ ನೀಡಿ ಕೆ.ಸಿ ‌ವ್ಯಾಲಿ ನೀರು ಕೋಡಿ ಹರಿಯುವ ದೃಶ್ಯವನ್ನು ಕಣ್ತುಂಬಿಕೊಂಡರು.

ಮಾಲೂರು ತಾಲ್ಲೂಕು ಜನರು ಕೆರೆಗಳಿಗೆ ನೀರು ಹರಿಯುವುದು ಕಂಡು ಸಂತಸಗೊಂಡರು. ಕೆರೆಗಳು ತುಂಬಿ ದಶಕಗಳೇ ಕಳೆದಿದ್ದು ಮಳೆ ಸಕಾಲಕ್ಕೆ ಬಾರದೆ ಒಣಗಿದ ಕೆರೆಗಳಿಗೆ ಕೆಸಿವ್ಯಾಲಿ ನೀರು ಹರಿಸುವ ಮೂಲಕ ಒಣಗಿದ ಕೆರೆಗಳಿಗೆ ಜೀವ ಕಳೆ ಬಂದಂತಾಗಿದೆ.

ಕೆರೆಗಳು ತುಂಬಿದರೆ ಸಾವಿರ ಅಡಿ ಗಡಿ ದಾಟಿದ ಅಂತರ್‌ಜಲ ಮಟ್ಟ ವೃದ್ಧಿಯಾಗಿ ಬರಡು ಭೂಮಿಯಲ್ಲಿ ತೇವಾಂಶ ಹೆಚ್ಚಾಗುತ್ತದೆ. ಬತ್ತಿದ ಕೊಳವೆ ಬಾವಿಗಳಿಂದ ಮತ್ತೆ ನೀರು ಸಿಗುತ್ತದೆ. ಇದರಿಂದ ಜಿಲ್ಲೆಯ ಜನ-ಜಾನುವಾರುಗಳಿಗೆ ರೈತರ ಕೃಷಿ ಚಟುವಟಿಕೆ ಹೆಚ್ಚಾಗಿ ಸಂವೃದ್ಧಿಯಾಗಿ ಇರಲು‌ ಸಾದ್ಯವಾಗುತ್ತದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img