Monday, October 26, 2020
Home ಜಿಲ್ಲೆ ಸಕಲೇಶಪುರ : ಬಾಳ್ಳುಪೇಟೆ ಗ್ರಾಮ ಪಂಚಾಯ್ತಿಗೆ ಶಿಲ್ಪಮಲ್ಲಿಕ್ ನೂತನ ಅಧ್ಯಕ್ಷೆ

ಇದೀಗ ಬಂದ ಸುದ್ದಿ

ಕಿರಿಯ ಆಟಗಾರರಿಗೆ ಜೆರ್ಸಿ ವಿತರಿಸುತ್ತಿರುವ ಧೋನಿ

ಹೊಸದಿಲ್ಲಿ: ಚೆನ್ನೈ ತಂಡ ಪ್ರಸಕ್ತ ಐಪಿಎಲ್‌ನಿಂದ ನಿರ್ಗಮಿಸಲು ಇನ್ನೊಂದೇ ಹೆಜ್ಜೆ ಬಾಕಿ. ಈ ನಡುವೆ ನಾಯಕ ಧೋನಿ ಎದುರಾಳಿ ಆಟಗಾರರಿಗೆಲ್ಲ ತನ್ನ “ನಂ.7′ ಜೆರ್ಸಿ ಹಂಚುತ್ತಿರುವುದು ಅವರ ಅಭಿಮಾನಿಗಳಲ್ಲಿ ಅನೇಕ...

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ :...

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಬಿ.ಎಸ್....

ತಮಿಳುನಾಡು : ಸರ್ಕಾರಿ ನೌಕರರಿಗೆ ಜ.1, 2021ರಿಂದ...

ತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ ನಿರ್ವಹಿಸಲು ತೀರ್ಮಾನ ಕೈಗೊಳ್ಳಲಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೂಡಿ ಆಯುಧ ಪೂಜೆ...

ಚೀನಾ-ಭಾರತ ಗಡಿಭಾಗದಲ್ಲಿ ಸಂಘರ್ಷಮಯ ಸನ್ನಿವೇಶ ಮುಂದುವರಿದಿರುವಂತೆಯೇ ಸೈನಿಕರಲ್ಲಿ ಆತ್ಮಬಲ ತುಂಬುವ ಕೆಲಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ. ದಸರಾವನ್ನು ಸೈನಿಕರ ಜತೆಗೆ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದ ಅವರು, ಇಂದು ಸಿಕ್ಕಿಂನಲ್ಲಿ...

ನೂತನ ಸಾಹಿತ್ಯ ಪರಿಷತ್ ಭವನ ಉದ್ಘಾಟಿಸಿದ ಸಿಎಂ

ನಗರದ ಗೋಪಿಶೆಟ್ಟಿಕೊಪ್ಪದಲ್ಲಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸಾಹಿತ್ಯ ಭವನವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಹಿತ್ಯದ ತವರು ಶಿವಮೊಗ್ಗ. ಮೊದಲ ಜ್ಞಾನಪೀಠ ಪ್ರಶಸ್ತಿ...

ಸಕಲೇಶಪುರ : ಬಾಳ್ಳುಪೇಟೆ ಗ್ರಾಮ ಪಂಚಾಯ್ತಿಗೆ ಶಿಲ್ಪಮಲ್ಲಿಕ್ ನೂತನ ಅಧ್ಯಕ್ಷೆ

ಸಕಲೇಶಪುರ : ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳ ಪೈಕಿ 16 ಜನ ಸದಸ್ಯರನ್ನು ಹೊಂದಿ ದೊಡ್ಡ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಾಳ್ಳುಪೇಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶಿಲ್ಪಾ ಮಲ್ಲಿಕ್ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ರೂಪ ರಾಜೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನೆಡೆಯಿತು. ಇಂದು ಬೆಳಗ್ಗೆ 8 ಗಂಟೆಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದರು. ನಾಮ ಪತ್ರಗಳ ಪರಿಶೀಲನೆ ಹಾಗು ಹಿಂಪಡೆದುಕೊಳ್ಳುವ ಪ್ರಕ್ರಿಯೆ ನೆಡೆದು ಕೊನೆಯದಾಗಿ ಶಿಲ್ಪಾ ಮಲ್ಲಿಕ್ ಮತ್ತು ರತ್ನ.ಎಚ್‌.ಕೆ ಕಣದಲ್ಲುಳಿದರು. 11 ಗಂಟೆಗೆ ಮತದಾನ ಪ್ರಾರಂಭವಾಗಿ 16 ಸದಸ್ಯರ ಗ್ರಾಮ ಪಂಚಾಯತಿಯಲ್ಲಿ 13 ಸದಸ್ಯರು ಶಿಲ್ಪಾ ಮಲ್ಲಿಕ್ ಪರವಾಗಿ ಮತಚಲಾಯಿಸಿದರು. ಎಚ್ ಕೆ ರತ್ನ ಅವರಿಗೆ ಕೇವಲ 3 ಮತಗಳು ಮಾತ್ರ ದಕ್ಕಿತು.

ಅತಿ ಹೆಚ್ಚು ಮತ ಪಡೆದ ಶಿಲ್ಪಾ ಮಲ್ಲಿಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾಧಿಕಾರಿಯಾದ ಜಿ. ಆರ್ ಹರೀಶ್ ಘೋಷಿಸಿದರು. ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಕಾರ್ಯದರ್ಶಿ ಶೇಖರ್ ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಠಾಣಾ ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪರಾಭವಗೊಂಡ ಅಭ್ಯರ್ಥಿಯ ಅಳಲು :

ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿ ಎಚ್.ಕೆ.ರತ್ನ ಪ್ರತಿಕ್ರಯಿಸಿ ಈ ಮೊದಲೇ ಆಗಿದ್ದ ಆಂತರಿಕ ಒಪ್ಪಂದದಂತೆ ಎರಡೂವರೆ ವರ್ಷ ಅಧ್ಯಕ್ಷ ಸ್ಥಾನ ನನಗೆ ಬಿಟ್ಟು ಕೊಡಬೇಕಿತ್ತು. ಆದರೆ ನಾಲ್ಕು ವರ್ಷ ಕಳೆಯುತ್ತಾ ಬಂದಿದ್ದರೂ ಅಧ್ಯಕ್ಷ ಸ್ಥಾನ ಬಿಟ್ಟುಕೊಡದೆ ಮುಂದುವರೆದಿದ್ದರೂ ಇದರಿಂದ ಇತರ ಸದಸ್ಯರ ಸಹಾಯ ಪಡೆದು ಅವಿಶ್ವಾಸವನ್ನು ತಂದಿದ್ದೆವು. ಆದರೆ ನಮ್ಮ ಸದಸ್ಯರು ತಿಂದ ಮನೆಗೆ ದ್ರೋಹ ಬಗೆದ ಕಾರಣ ನಮಗೆ ಅವಿಶ್ವಾಸ ನಿರ್ಣಯದಲ್ಲಿ ಸೋಲಾಗಿತ್ತು.

ಆದರೂ ನಾನು ಛಲಬಿಡದೆ ಇಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಇಂದು ಸಹ ನನಗೆ ಮೋಸ ಮಾಡಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿರು. 16 ಜನ ಸದಸ್ಯರ ಗ್ರಾಮ ಪಂಚಾಯಿತಿಯಲ್ಲಿ ಒಂಬತ್ತು ಜನರು ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿದ್ದರು. ಆದರೆ ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ನನಗೆ ದ್ರೋಹ ಬಗೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

  • ಪ್ರದೀಪ್ ಬಾಳ್ಳುಪೇಟೆ, ದಿ ನ್ಯೂಸ್24 ಕನ್ನಡ

TRENDING