Friday, January 15, 2021
Home ಜಿಲ್ಲೆ ಮಂಡ್ಯ ಎಸ್ಪಿ ಅವರಿಂದ ಗ್ರಾಮಸಭೆ ಹಗೂ ವಾಸ್ತವ್ಯ

ಇದೀಗ ಬಂದ ಸುದ್ದಿ

ಮಂಡ್ಯ ಎಸ್ಪಿ ಅವರಿಂದ ಗ್ರಾಮಸಭೆ ಹಗೂ ವಾಸ್ತವ್ಯ

ಮಂಡ್ಯ : ಸಾಮಾನ್ಯವಾಗಿ ರಾಜಕಾರಣಿಗಳು ಗ್ರಾಮ ವಾಸ್ತವ್ಯ ಮಾಡೋದು ಕಾಮನ್. ಆದ್ರೆ ಮಂಡ್ಯದಲ್ಲಿ ಅಧಿಕಾರಿಯೊಬ್ಬರು ಅದ್ರಲ್ಲೂ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದಾರೆ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹುಟ್ಟೂರು ಸೋಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಕಳೆದ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ್ರು. ವಾಸ್ತವ್ಯಕ್ಕೂ ಮುನ್ನ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿದ ಎಸ್ಪಿ, ಗ್ರಾಮದಲ್ಲಿರುವ ಸಮಸ್ಯೆ, ಶಾಂತಿ ಸೌಹಾರ್ದತೆ, ಸಹಬಾಳ್ವೆ, ಗಲಾಟೆ ಗೋಜಿಗೆ ಅವಕಾಶ ಕೊಡದಂತೆ ಸುದೀರ್ಘ ಮಾತುಕತೆಯನ್ನ ಗ್ರಾಮಸ್ಥರ ಬಳಿ ಹೇಳಿದ್ರು. ಬಳಿಕ ಗ್ರಾಮಸ್ಥರು ಗ್ರಾಮದ ಮುಂದಿರುವ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟ್ರಾಫಿಕ್ ಸಮಸ್ಯೆ, ಪೊಲೀಸ್ ಠಾಣೆ ದೂರದಲ್ಲಿರುವುದು ಸೇರಿದಂತೆ ಅನೇಕ ದೂರುಗಳನ್ನ ನೀಡಿದ್ರು. ದೂರುಗಳಿಗೆ ಸ್ಪಂದಿಸಿದ ಎಸ್ಪಿ, ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ, ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ವಾಸ್ತವ್ಯ ಹೂಡಿ, ಬಳಿಕ ಮಂಡ್ಯಕ್ಕೆ ವಾಪಸ್ಸಾದ್ರು. ಜೊತಗೆ ಮಂಡ್ಯ ಜಿಲ್ಲೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ಮಾಡೋದಾಗಿ ತಿಳಿಸಿದರು.

TRENDING