Saturday, July 31, 2021
Homeಜಿಲ್ಲೆಕಲಬುರ್ಗಿಕಲಬುರ್ಗಿ : ಕ್ರೀಡಾಂಗಣ ಕಾಮಗಾರಿ ವಿಳಂಬಕ್ಕೆ ಆರ್ ಸಿ ಆಕ್ರೋಶ

ಇದೀಗ ಬಂದ ಸುದ್ದಿ

ಕಲಬುರ್ಗಿ : ಕ್ರೀಡಾಂಗಣ ಕಾಮಗಾರಿ ವಿಳಂಬಕ್ಕೆ ಆರ್ ಸಿ ಆಕ್ರೋಶ

ಅಫಜಲಪುರ : ಪಟ್ಟಣದಲ್ಲಿ ನಡೆಯುತ್ತಿರುವ ಕ್ರೀಡಾಂಗಣ ಕಾಮಗಾರಿ ನಿರ್ಮಾಣ ಸ್ಥಳಕ್ಕೆ ಪ್ರಾದೇಶಿಕ ಆಯುಕ್ತ ಸುಬೋದ್ ಯಾದವ್ ಭೇಟಿ ನೀಡಿ ಪರಿಶೀಲಿಸಿದರು.

ಅಫಜಲಪುರ ಪಟ್ಟಣದ ಹೊರ ವಲಯದಲ್ಲಿ ಎಂಟು ಏಕರೆ ಪ್ರದೇಶದಲ್ಲಿ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣ ಕಾಮಗಾರಿ ವಿಳಂಬದ ಹಿನ್ನಲೆಯಲ್ಲಿ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದರು.

ಕ್ರೀಡಾಂಗಣಕ್ಕೆ ತೆರಳಲು ಆರ್ ಸಿ ಯವರಿಗೆ ದಾರಿ ಸಿಗದೆಯಿದ್ದಾಗ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರೀಡಾಂಗಣಕ್ಕೆ ತೆರಳಲು ದಾರಿಯೆಲಿದೆ ಎಂದು ಪ್ರಶ್ನಿಸಿದರು. ಸ್ಥಳದಲ್ಲಿದ್ದ ಕೆಆರ್ ಐಡಿ ಎಲ್ ಅಧಿಕಾರಿ ಎಸ್.ಬಿ.ನಾಗೂರ ನಾನು ಬಂದು ನಾಲ್ಕು ತಿಂಗಳಾಗಿದೆ ಎಂದು ಉತ್ತರ ನೀಡಿದರು. ಇದಕ್ಕೆ

ಕ್ರೀಡಾಂಗಣಕ್ಕೆ ತೆರಳಲು ಸೂಕ್ತ ದಾರಿ ಇಲ್ಲದ ಹಿನ್ನಲೆಯಲ್ಲಿ ಗರಂ ಆಯುಕ್ತರು ನಿರ್ಮಾಣಕ್ಕೆ ಸಾಮಗ್ರಿಗಳನ್ನು ಸಾಗಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕ್ರೀಡಾಂಗಣ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಗತಿಸಿದರೂ ಇಲ್ಲಿಯವರೆಗೆ ಏಕೆ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳಿಗೆ ಕಿಡಿಕಾರಿದರು.

ಸಬೂಬು ಹೇಳುವುದನ್ನು ಬಿಟ್ಟು ಕೆಲಸ ಮಾಡಿ ಎಂದು ಕ್ಲಾಸ್ ತೆಗೆದುಕೊಂಡರು

ಕ್ರೀಡಾಂಗಣ ನಿರ್ಮಾಣಕ್ಕೆ ಯಾವ ಇಲಾಖೆಯಿಂದ ಜಮೀನು ಖರೀದಿ ಮಾಡಿದಾಗ ರಸ್ತೆ ಸಮಸ್ಯೆ ಇರುವುದು ಗೊತ್ತಿರಲಿಲ್ಲವೆ ? ಎಂದು ಸರ್ವೆ ವಿಭಾಗದ ಮೇಲ್ವಿಚಾರಕ ಬಿ.ಎಚ್. ಅವಟೆಗೆ ತರಾಟೆ ತೆಗೆದುಕೊಂಡರು. ಕ್ರೀಡಾಂಗಣಕ್ಕೆ ತೆರಳಲು ರಸ್ತೆ ನಿರ್ಮಾಣ ಮಾಡಲು ಜಮೀನು ಖರೀದಿಸಲು ದಾಖಲೆಗಳು ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಟ್ಟದ ಸಭೆ ಕರೆದಾಗ ಸಭೆಯಲ್ಲಿ ಒಂದು ಉತ್ತರ ನೀಡುತ್ತೀರಿ ಸ್ಥಳ ಪರಿಶೀಲನೆಗೆ ಬಂದಾಗ ಮತ್ತೊಂದು ಉತ್ತರ ನೀಡುತ್ತೀರಿ. ಕೋಟಿಗಟ್ಟಲೆ ಸರಕಾರದ ಹಣ ಖರ್ಚಾಗುತ್ತಿದೆ. ನಿಮಗೆ ಜವಾಬ್ದಾರಿ ಇಲ್ಲವೇ? ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬ ತಿಳುವಳಿಕೆ ಇಲ್ಲವೆ ಎಂದು ಭೂಸೇನಾ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಬೊದ್ ಯಾದವ್ ಹೆಚ್‌ಕೆ‌ಅರ್‌ಡಿಬಿಯಿಂದ ಆರು ಜಿಲ್ಲೆಗಳಲ್ಲಿ ಭೂಸೇನಾ ನಿಗಮದವರಿಗೆ ಈಗಾಗಲೇ ನೀಡಿರುವ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಹೊಸ ಕಾಮಗಾರಿಗಳು ನೀಡುತ್ತಿಲ್ಲ ಎಂದು ತಿಳಿಸಿದರು.

ಎಚ್.ಕೆ.ಆರ್.ಡಿ.ಬಿ.ಯಿಂದ ಜಮೀನು ಖರೀದಿ ಮಾಡಲು ಅವಕಾಶವಿಲ್ಲ. ಕಾಮಗಾರಿಗಳಿಗೆ ಅನುದಾನ ನೀಡಲು ಅವಕಾಶವಿದೆ. ಕ್ರೀಡಾಂಗಣಕ್ಕೆ ತೆರಳಲು ರಸ್ತೆ ನಿರ್ಮಾಣಕ್ಕೆ ಬೇಕಾಗುವ ಜಮೀನನ್ನು ಈ ಮೊದಲು ಯಾವ ಇಲಾಖೆಯಿಂದ ಜಮೀನು ಖರೀದಿಸಲಾಗಿದೆ ಅದೇ ಇಲಾಖೆಯಿಂದ ಖರೀದಿ ಮಾಡಲು ಸೂಚಿಸಲಾಗುವುದು ಎಂದು ತಿಳಿಸಿದರು.

ಉಪ ತಹಸೀಲ್ದಾರ ಪ್ರಭಾಕರ ಖಜೂರೆ, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಬಿಲಗುಂದಿ, ಭೂಸೇನೆ ಇಲಾಖೆ ಎಇಇ ಎಸ್.ಬಿ. ನಾಗೂರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

  • ಅಶೋಕ.ಎಚ್‌.ಕಲ್ಲೂರ, ದಿ ನ್ಯೂಸ್24

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img