Friday, September 25, 2020
Home ಜಿಲ್ಲೆ ಆಷಾಢ ಮಾಸದ ಗುಳ್ಳವ್ವನ ಹಬ್ಬ : ಉತ್ತರ ಕರ್ನಾಟಕದಲ್ಲಿ ಸಖತ್ ಸಡಗರ

ಇದೀಗ ಬಂದ ಸುದ್ದಿ

ಐಪಿಎಲ್-2020 : ಇಂದು ಚೆನ್ನೈ ಸೂಪರ್ ಕಿಂಗ್ಸ್‌...

 ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ವಿರುದ್ಧ ಜಯಿಸಿತ್ತು. ಎರಡನೇ...

ಕಣ್ವ ಗ್ರೂಪ್‌ನ ನೂರಾರು ಕೋಟಿ ಮೌಲ್ಯದ...

ಕಣ್ವ ಗ್ರೂಪ್‌ನಲ್ಲಿ 650 ಕೋಟಿಗೂ ಅಧಿಕ ಹೂಡಿಕೆ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಕಣ್ವ ಗ್ರೂಪ್‌ಗೆ ಸೇರಿದ 255.17 ಕೋಟಿ ರೂ. ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಸರ್ಕಾರಿ ಗೌರವಗಳೊಂದಿಗೆ ಶಾಸಕ ನಾರಾಯಣ ರಾವ್ ಅಂತ್ಯಕ್ರಿಯೆ

ಬೀದರ್,ಸೆ.25- ನಿನ್ನೆ ನಿಧನರಾದ ಕಾಂಗ್ರೆಸ್ ಶಾಸಕ ಬಿ.ನಾರಾಯಣ ರಾವ್ ಅವರ ಅಂತ್ಯಕ್ರಿಯೆ ಇಂದು ಬಸವ ಕಲ್ಯಾಣದದ ಸಸ್ತಾಪುರ ಬಂಗ್ಲಾ ಸಮೀಪದ ಬೊಕ್ಕೆ ಲೇಔಟ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ನಟಿ ದೀಪಿಕಾರನ್ನು ರೋಲ್ ಮಾಡಲ್ ಆಗಿ ಅನುಸರಿಸಿರುವವರಿಗೆ...

 ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ, ರಾಜಕಾರಣಿ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಅಂಬಾವಿಲಾಸ ಅರಮನೆ ರತ್ನಖಚಿತ ಸಿಂಹಾಸನ : ...

ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಿರುವ ರತ್ನಖಚಿತ ಸಿಂಹಾಸನ ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ...

ಆಷಾಢ ಮಾಸದ ಗುಳ್ಳವ್ವನ ಹಬ್ಬ : ಉತ್ತರ ಕರ್ನಾಟಕದಲ್ಲಿ ಸಖತ್ ಸಡಗರ

ರಬಕವಿ-ಬನಹಟ್ಟಿ : ಒಂದರಿಷಿನ ಒಂದರಿಷಿನ ಕ್ಯಾದಗಿ ಪರಿಮಳ, ಗುಳ್ಳವ್ವನ ಹೆಣ್ಣುಮಕ್ಕಳು ಆಡುತ್ತಾ ಬಂದಾರ, ಉತ್ತತಿ ಬನಕ ತೊಟ್ಟಿಲ ಕಟ್ಟಿ ಜಯ ಒಂದು ಜಯ ಒಂದು, ಎಂಬ ಜನಪದ ಶೈಲಿಯ ಹಾಡುಗಳು ಆಶಾಡ ಮಾಸದ ಪ್ರತಿ ಮಂಗಳವಾರಗಳಂದು ಉತ್ತರ ಕರ್ನಾಟಕದ ಬಾಲೆಯರ ಕಂಠದಿಂದ
ಪುಂಖಾನು ಪುಂಖವಾಗಿ ಕೇಳಿ ಬರುತ್ತವೆ.

ಇದು ಜಾನಪದ ಹಬ್ಬದ ಆಚರಣೆಯ ಪ್ರಮುಖ ಅಂಗವಾಗಿದೆ. ಈ ಆಚರಣೆಯ ಬಹು ಮುಖ್ಯ ಉದ್ದೇಶ ಸಕಲ ಜೀವಿಗಳನ್ನು ಪೊರೆದು ಪೋಶಿಸುವ ಭೂದೇವಿಗೆ ಅರ್ಚನೆ ಸಲ್ಲಿಸುವ ಆಚರಣೆ ಇದಾಗಿದೆ. ಮಣ್ಣಿಂದ ಕಾಯ ಮಣ್ಣಿಂದ ಸಕಲ ಸಂಪದವು ಎಂದು ಪ್ರಾಚೀನ ತತ್ವಜ್ಞಾನಿಗಳು ಹಾಡಿ ಮಣ್ಣಿನ ಗುಣ, ಸಿರಿವಂತಿಕೆಯನ್ನು ಮತ್ತು ಮಣ್ಣು ಜೀವನದ ಮೂಲಾಧಾರ ಎಂಬುವುದನ್ನು ಸ್ಪಷ್ಟಪಡಿಸಿದ್ದರು.

ಮಣ್ಣಿಗೆ ಮಾತೆ ಸ್ಥಾನ ಇದೆ. ಮಣ್ಣು ಮನು ಕುಲವನ್ನು ತಾಯಿಯಂತೆ ಸಲಹುತ್ತದೆ. ಈ ಕಾರಣಕ್ಕೆ ಹಿಂದಿನ ಕಾಲದ ಜನರು ಮಣ್ಣಿನ ಪೂಜೆಗೆ ಮುಂದಾದರು. ಮಣ್ಣಿಗೆ ಕೃತಜ್ಞತೆ ಮತ್ತು ಗೌರವ ಸಲ್ಲಿಸುವುದಕ್ಕಾಗಿ ಹುಣ್ಣಿಮೆ ಸಂದರ್ಭದಲ್ಲಿ ಮಣ್ಣಿನ ಬಸವಣ್ಣ ಮಾಡಿ ಆಷಾಢದಲ್ಲಿ ಗುಳ್ಳವ್ವನ ಪೂಜೆಯ ಸಂಪ್ರದಾಯ ಪ್ರಾರಂಭಿಸಿದರು. ಭಾದ್ರಪದ ಮಾಸದಲ್ಲಿ ಗಣೇಶ ದೇವರು ಮತ್ತು ಜೋಕುಮಾರ ಪೂಜೆಯನ್ನು ಮಾಡುವ ಸಂಪ್ರದಾಯ ಈಗಲೂ ಜೀವಂತವಿದೆ.

ಉತ್ತರ ಕರ್ನಾಟಕದಲ್ಲಿ ಗುಳ್ಳವ್ವನ ಆಚರಣೆ ಬಹು ಜನಪ್ರಿಯವಾಗಿರುವ ಜಾನಪದ ಹಬ್ಬ. ಮಣ್ಣಿನಿಂದ ಗುಳ್ಳವ್ವ‌ನ ಪ್ರತಿಮೆಯನ್ನು ತಯಾರಿಸಲಾಗುತ್ತದೆ. ಇದು ಆಷಾಢ ಮಾಸದ ಪ್ರತಿ ಮಂಗಳವಾರ ಆಚರಿಸುವ ಹಬ್ಬವಾಗಿದೆ.

ಈ ಹಬ್ಬದಲ್ಲಿ ಗುಳ್ಳವ್ವನ ಪ್ರತಿಷ್ಠಾಪಿಸಿ ಜೋಳ, ಗೋಧಿ, ಎಳ್ಳು ದಾನ್ಯಗಳ ಜೊತಗೆ ಗುಲಗಂಜಿಗಳಿಂದ ಸಿಂಗರಿಸಿ ಪೂಜಿಸಲಾಗುತ್ತದೆ. ಮನೆಗಳಲ್ಲಿ ತುಂಬಿದ ಮಣ್ಣಿನಾರತಿ ಬೆಳಗಿಸುವ ಮುಖಾಂತರ ಬಾಲೆಯರು ಸಂಭ್ರಮದಿಂದ ಹಾಡಿ ಹಬ್ಬವಾಗಿ ಆಚರಿಸುತ್ತಾರೆ.

ಈ ಆಚರಣೆಯ ಸಡಗರದ ನೆಪದಲ್ಲಿ ವಿಶೇಷ ಸಿಹಿ ತಿಂಡಿಗಳನ್ನು ತಯಾರಿಸಿ ಊರಿನ ಪಕ್ಕದ ತೋಟ, ಉದ್ಯಾನವನ, ನದಿಗಳಿಗೆ ಸಂಬಂಧಿಕರೊಂದಿಗೆ ತೆರಳಿ ಕಾಲ ಕಳೆಯುವುದು ವಿಶೇಷ. ಸದ್ಯ ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಹಬ್ಬಗಳು ಮರೆಯಾಗುತ್ತಿದ್ದು ಈ ಆಚರಣೆಗಳು ಉತ್ತರ ಕರ್ನಾಟಕದಲ್ಲಿ ಬಹಿ ಜನಪ್ರಿಯವಾಗಿ ಇನ್ನೂ ಆಚರಣೆಯಲ್ಲಿವೆ

ಪ್ರಕಾಶ ಕುಂಬಾರ, ದಿ ನ್ಯೂಸ್24 ಕನ್ನಡ

TRENDING