Sunday, May 16, 2021
Homeಜಿಲ್ಲೆಯಾದಗಿರಿ : ಗಾಣಿಗ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಜಗದೀಶ ಸಜ್ಜನ್ ನೇಮಕ

ಇದೀಗ ಬಂದ ಸುದ್ದಿ

ಯಾದಗಿರಿ : ಗಾಣಿಗ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಜಗದೀಶ ಸಜ್ಜನ್ ನೇಮಕ

ಯಾದಗಿರಿ : ತಾಲೂಕು ಗಾಣಿಗ ಸಂಘದ ನೂತನ ಅಧ್ಯಕ್ಷರಾಗಿ ಜಗದೀಶ ಸಜ್ಜನ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಗೊಂಡರು.

ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಸೈದಾಪೂರ ನಗರದ ಶಂಭುಲಿಂಗೇಶ್ವರ ರೈಸ್‌ಮಿಲ್ ಆವರಣದಲ್ಲಿ
ಅಖಿಲ ಭಾರತ ಗಾಣಿಗ ಸಂಘ ಹೈದ್ರಾಬಾದ್ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಡಾ. ಸುರೇಶ್ ಸಜ್ಜನ್ ನೇತೃತ್ವದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ನೂತನ ತಾಲೂಕು ಅಧ್ಯಕ್ಷರಾದ ಶ್ರೀ ಜಗದೀಶ್‌ಸಜ್ಜನ್ ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜವನ್ನು ತಳಮಟ್ಟದಿಂದ ಕಟ್ಟಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮುನ್ನೆಲೆಗೆ ತರಲು ಹಾಗೂ ಸಮಾಜವನ್ನು ಬಲಪಡಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ಯುವಕರು ದೇಶಕ್ಕಾಗಿ ಚಿಂತಿಸುವ ನಿಟ್ಟಿನಲ್ಲಿ ಹಾಗೂ ದೇಶಕ್ಕಾಗಿ ಸೇವೆ ಸಲ್ಲಿಸುವ ಮಹತ್ತರ ಸಾಧನೆ ಮಾಡುವತ್ತ ಹಾತೊರೆಯಬೇಕಾಗಿದೆ.
ಉತ್ತಮ ಸಂಸ್ಕಾರ, ಸಂಸ್ಕೃತಿಗಳ ಅಭಿವೃದ್ಧಿಯಿಂದ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸುರೇಂದ್ರನಾಥ ಸಜ್ಜನ್, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗಪ್ಪ ಸಜ್ಜನ್, ಖಜಾಂಚಿ ಚಂದ್ರಶೇಖರ, ಕಾನೂನು ಸಲಹೆಗಾರ ರಾಜೇಂದ್ರಕುಮಾರ, ಸಂಚಾಲಕ ಭೀಮು, ಯುವ ಮುಖಂಡರಾದ ಭಾನುಪ್ರಕಾಶ ಸಜ್ಜನ್ ಹಾಗೂ ಗಾಣಿಗ ಸಮಾಜದ ವಿವಿಧ ಮುಖಂಡರು ಭಾಗವಹಿಸಿದ್ದರು.

ಬೀರಲಿಂಗಪ್ಪ, ದಿ ನ್ಯೂಸ್24 ಕನ್ನಡ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img