ಕೋಲಾರ : ಟಂಟಂ ಆಟೋ-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಸೂರ್ಯ ಪೇಟ ಜಿಲ್ಲೆಯಲ್ಲಿ ನಡೆದಿದೆ,
ಸೂರ್ಯಪೇಟ ಜಿಲ್ಲೆಯ ಚಿಲಕೂರು ಮಂಡಲಂ ಮಿಟ್ಸ್ ಕಲಾಶಾಲಾ ಬಳಿಯ ಪದ್ದಕೊದಾಡ ಹಾಗೂ ಮಿರ್ಯಾಲಗೂಡ ಮಾರ್ಗದ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಮೃತರಾದವರನ್ನು ಮಹಬೂಬ್ ಬಾದ್ ಜಿಲ್ಲೆಯ ಕೊರವಿ ಮಂಡಲಂ ಚಿಂತಪಲ್ಲಿ ಗ್ರಾಮಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದವರು ಜಾನ್ ಪವಾಡ್ ದರ್ಗಾ ದರ್ಶನ ಮಾಡಿಕೊಂಡು ಬರುವಾಗ ನಡೆದ ಈ ಅಪಘಾತ ನಡೆದಿದೆ. ಅಪಘಾತ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣವನ್ನು ಚಿಲಕೂರು ಪೊಲೀಸ್ ಠಾಣೆಯಲ್ಲಿ ರಣದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.