Wednesday, December 2, 2020
Home ಜಿಲ್ಲೆ ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ 76 ಜೋಡಿಗಳ ಸಾಮೂಹಿಕ ವಿವಾಹ

ಇದೀಗ ಬಂದ ಸುದ್ದಿ

ಕೋವಿಡ್-19 : ವಿಶ್ವದಾದ್ಯಂತ 4.41 ಕೋಟಿ ಜನರು...

 ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.83 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 4,235 ಜನರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ...

ರಾಜ್ಯದಲ್ಲಿ 2 ದಿನ ಭಾರೀ ಮಳೆ :...

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 4 ಮತ್ತು 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಮುಖ

ಬೆಂಗಳೂರು, ಡಿ.02 : ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಸಹ ಒಂದು ಲಕ್ಷದಿಂದ ಇಳಿಕೆಯಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,86,227.

ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ಕಲಬುರಗಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಘಟಕದಲ್ಲಿ ಖಾಲಿಯಿರುವ ಶೀಘ್ರಪಿಲಿಗಾರ (ಹಿಂಬಾಕಿ ಹುದ್ದೆಗಳು) 8-ಹುದ್ದೆಗಳು, ಬೆರಳಚ್ಚುಗಾರ-1, ಬೆರಳಚ್ಚು ನಕಲುಗಾರ-1 ಹುದ್ದೆ, ಆದೇಶ ಜಾರಿಕಾರ 2 ಹುದ್ದೆ ಹಾಗೂ ಜವಾನ 51...

ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ:...

ಬೆಂಗಳೂರು: ಮುಂದಿನ ವರ್ಷ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ 13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ನೇತೃತ್ವದ...

ಮಲೆಮಹದೇಶ್ವರ ಬೆಟ್ಟದಲ್ಲಿ 76 ಜೋಡಿಗಳ ಸಾಮೂಹಿಕ ವಿವಾಹ

ಕೊಳ್ಳೇಗಾಲ : ರಾಜ್ಯದ ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಪ್ರಾಧಿಕಾರದ ವತಿಯಿಂದ 76 ಜೋಡಿಗಳ ಸಾಮೂಹಿಕ ವಿವಾಹ ನೆರವೇರಿಸಲಾಯಿತು.

           ಗಡಿ ತಾಲ್ಲೂಕಾದ ಹನೂರಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು 30ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈ ಬಾರಿ ಒಟ್ಟು 76 ಜೋಡಿ ವಧುವರರ ವಿವಾಹ ನೆರವೇರಿದ್ದು ಆ ಪೈಕಿ 10 ಜೋಡಿಗಳು ಅಂತರ್ಜಾತಿ ವಿವಾಹಗಳು ಹಾಗೂ ಒಂದು ವಿಕಲಚೇತನ ವರನ ವಿವಾಹ ಸಹ ಜರುಗಿತು.

           ಬೆಳೆಗ್ಗೆ 10:49 ರ ವೇಳೆಯಲ್ಲಿ ಸಲ್ಲುವ ಸಿಂಹ ಲಗ್ನದಲ್ಲಿ ಸಾಲೂರು ಬೃಹನ್ಮಠದ ಅಧ್ಯಕ್ಷರಾದ  ಶ್ರೀ.ಗುರುಸ್ವಾಮಿಗಳ ಸಾನಿಧ್ಯದಲ್ಲಿ ಶುಭವಿವಾಹ ಕಾರ್ಯ ನಡೆಯಿತು.

          ಮಠಾಧ್ಯಕ್ಷ ಶ್ರೀ.ಗುರುಸ್ವಾಮಿಗಳು ಆಶೀರ್ವಚನ ನೀಡುವುದರ ಮೂಲಕ ವಿಧಿ ವಿಧಾನಗಳೊಂದಿಗೆ ಸಾಮೂಹಿಕ ವಿವಾಹವು ಅದ್ಧೂರಿಯಾಗಿ ಜರುಗಿತು.

          ಪ್ರಾಧಿಕಾರದ ವತಿಯಿಂದ ಸಾಮೂಹಿಕ ವಿವಾಹದಲ್ಲಿ ಪ್ರತಿ ವಧುವಿಗೂ ಬಂಗಾರದ ತಾಳಿ,ಬೆಳ್ಳಿ ಕಾಲುಂಗುರ,ಸೀರೆ-ರವಿಕೆ, ಬಳೆ ಒದಗಿಸಿಕೊಡಲಾಗಿತ್ತು. ಪ್ರತಿಯೊಬ್ಬವರನಿಗೂ ಬಿಳಿ ಪಂಚೆ,ಷರ್ಟ್ ಮತ್ತು ಟವೆಲ್ ನೀಡಲಾಯಿತು. ಇದರೊಂದಿಗೆ ವಧುವರರು ಹಾಗೂ ಅವರ ಕಡೆಯ ಸಂಬಂಧಿಕರಿಗೆ ಹಾಗೂ ಕುಟುಂಬಸ್ಥರಿಗೆ ಊಟ,ತಿಂಡಿ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಆಯೋಜಿಸಲಾಗಿತ್ತು.

           ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ನವ ವಧು-ವರರಿಗೆ ಆಶೀರ್ವದಿಸಿ ವೈಯಕ್ತಿಕ ಕಾಣಿಕೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ ಮಹದೇಶ್ವರನ ಸನ್ನಿಧಿಯಲ್ಲಿ ವಿವಾಹವಾಗುವ ಅವಕಾಶ ಸಿಕ್ಕಿರುವುದು ನಿಮ್ಮ ಪೂರ್ವ ಜನ್ಮದ ಪುಣ್ಯ. ನವ ವಧು-ವರರು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಸುಖಕರ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

          ಹನೂರು ಶಾಸಕ ಆರ್.ನರೇಂದ್ರ ನೂತನ ವಧುವರರಿಗೆ ಆಶೀರ್ವದಿಸಿ ಹಾರೈಸಿದರು.

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಶಿವಮ್ಮಕೃಷ್ಣ,ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ,ಪ್ರಾಧಿಕಾರದ ಕಾರ್ಯದರ್ಶಿ ಸಿ.ಎಲ್.ಆನಂದ್,ಉಪ ಕಾರ್ಯದರ್ಶಿ ರಾಜಶೇಖರ್,ವ್ಯವಸ್ಥಾಪಕ ಬಸವರಾಜು,ತಾ.ಪಂ ಅಧ್ಯಕ್ಷ ಎಂ.ರಾಜೇಂದ್ರ,ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ,ವಿಶೇಷ ತಹಶೀಲ್ದಾರ್ ನಾಗರಾಜು ಮತ್ತಿತರರು ಹಾಜರಿದ್ದರು.

TRENDING