Thursday, November 26, 2020
Home ಬೆಂಗಳೂರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವೂ ಬೇಡ,ಶಾಸಕ ಸ್ಥಾನವೂ ಬೇಡ-ಎಚ್.ವಿಶ್ವನಾಥ್

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವೂ ಬೇಡ,ಶಾಸಕ ಸ್ಥಾನವೂ ಬೇಡ-ಎಚ್.ವಿಶ್ವನಾಥ್

ಬೆಂಗಳೂರು : ನನ್ನ ಅನುಭವವನ್ನು ಸಿಎಂ ಆಗಲಿ,ಸಿದ್ದರಾಮಯ್ಯ ಆಗಲಿ ಉಪಯೋಗಿಸಿಕೊಂಡಿಲ್ಲ, ನನ್ನ ರಾಜೀನಾಮೆ ಅಂಗೀಕರಿಸಿ ಎಂದು ಮಾಧ್ಯಮ ಮೂಲಕವೇ ಮನವಿ ಮಾಡುವೆ. ಆದರೆ ಪಕ್ಷದ ಹಿತದೃಷ್ಟಿಯಿಂದ ಸಿಎಂ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ವಹಿಸುವುದು ಉತ್ತಮ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಕೋಟಾದ ಖಾಲಿ ಸಚಿವ ಸ್ಥಾನ ಭರ್ತಿ ಮಾಡಿ.ಸಚಿವರಾಗಿರುವ ಪಕ್ಷೇತರರಿಗೆ ಶೀಘ್ರವಾಗಿ ಖಾತೆ ಹಂಚಿಕೆ ಮಾಡಿ.ಅವರ ಸಮುದಾಯಕ್ಕೆ ನೋವುಂಟುಮಾಡಬೇಡಿ. ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ.ಸಿಎಂ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು.ಆದ್ರೆ ಸನ್ನಿವೇಶ ಆದಕ್ಕೆ ಆಸ್ಪದ ಕೊಟ್ಟಿಲ್ಲ ಎಂದು ಹೇಳಿದರು.

ಹುಣಸೂರು ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆಯಿದೆ. ಶಿಕ್ಷಣ ಇಲಾಖೆ ನಿರ್ಲಕ್ಷಿಸುವ ಸರ್ಕಾರವನ್ನು ಜನತೆ ಕ್ಷಮಿಸುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರಾಜೀನಾಮೆ ಅಂಗೀಕರಿಸದಿದ್ರೆ ಪಕ್ಷದ ಶಾಸಕತ್ವವೂ ಬೇಡ.ನಾನು ಕಾಂಗ್ರೆಸ್ ನಲ್ಲಿ ಇದ್ದಿದ್ರೆ ರೋಷನ್ ಬೇಗ್ ಸ್ಥಿತಿಯೇ ನನಗೂ ಬರ್ತಿತ್ತು ಎಂದು  ಜೆಡಿಎಸ್ ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ ರವಾನಿಸಿದರು.

ಇದೇ ವೇಳೆ ಸಮನ್ವಯ ಸಮಿತಿಗೆ ಸೇರ್ಪಡೆ ಆಗದಿದ್ದಕ್ಕೆ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಶಾಸಕ-ಅಲ್ಪಸಂಖ್ಯಾತ ಮುಖಂಡ ರೋಷನ್ ಬೇಗ್ ಅವರನ್ನು ಅಮಾನತು ಮಾಡಿಸಿದ್ದಾರೆ. ಕೈನಲ್ಲಿದ್ದಿದ್ದಿದ್ರೆ ನನ್ ಕಥೆಯೂ ಇದಕ್ಕಿಂತ ಹೊರತಾಗ್ತಿರಲಿಲ್ಲ.ಮಂತ್ರಿಗಳಿಗೆ ಖಾತೆ ಹಂಚದಿರುವುದು ಅವಮಾನಕರ ಸಂಗತಿ.

ಸಮನ್ವಯದ ಅರ್ಥಾನೆ ಗೊತ್ತಿಲ್ಲದ ನೀವ್ಯಾವ ಸೀಮೆ ಅಧ್ಯಕ್ಷರ್ರೀ  ಎಂದು ಸಿದ್ದರಾಮಯ್ಯಗೆ ವಿಶ್ವನಾಥ್ ತರಾಟೆ ತೆಗೆದುಕೊಂಡರು.

ಇದೇ ವೇಳೆ ತಮ್ಮದು ಮಂತ್ರಿಗಿರಿಗೆ ಮನೆ ಬಾಗಿಲು ತಟ್ಟೊ ಜಾಯಮಾನ ನಂದಲ್ಲ ಎಂದು ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಎಚ್.ವಿಶ್ವನಾಥ್ ಅಂತ್ಯಗೊಳಿಸಿದರು.

TRENDING