Sunday, December 6, 2020
Home ಜಿಲ್ಲೆ ಕೋಲಾರ ಕೊಳ್ಳೇಗಾಲ : ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಣೆ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.66 ಕೋಟಿ ಗಡಿಯತ್ತ ತಲುಪಿದ ಕೊರೋನಾ...

ನ್ಯೂಯಾರ್ಕ್; ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 6.66 ಕೋಟಿ ಗಡಿಯತ್ತ ಸಾಗಿದೆ. ಪ್ರಸ್ತುತ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ ಸೋಂಕಿತರ...

ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಕರವೇ ರಾಜ್ಯಾಧ್ಯಕ್ಷ...

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆಗಳು ತೀವ್ರ ಸ್ವರೂಪ...

ತಮಿಳುನಾಡು ದಕ್ಷಿಣ ಕರಾವಳಿಯಲ್ಲಿ ಕಳೆದ 30 ಗಂಟೆಗಳಿಂದ...

ಚೆನ್ನೈ: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ...

ಕರ್ನಾಟಕ ಬಂದ್: ಟೌನ್‌ಹಾಲ್‌ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ...

ಬೆಂಗಳೂರು, ಡಿ. 05: ಮರಾಠ ನಿಗಮ ಮಂಡಳಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಟೌನ್‌ಹಾಲ್ ಬಳಿ ಪ್ರತಿಭಟನೆ ಆರಂಭವಾಗಿದೆ, ಈ...

ಚಾರ್ಮಾಡಿ ಘಾಟ್ ನಲ್ಲಿ 150 ಅಡಿ ಪ್ರಪಾತಕ್ಕೆ...

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ...

ಕೊಳ್ಳೇಗಾಲ : ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕ ವಿತರಣೆ

ಕೊಳ್ಳೇಗಾಲ : ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ವತಿಯಿಂದ ತಾಲ್ಲೂಕಿನ ಜಾಗೇರಿ ಗ್ರಾಮದ ಪಾಸ್ಕಲ್ ನಗರದಲ್ಲಿರುವ ಸಂತ ಅಗಸ್ಟೀನ್ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಡಿ ಶಾಲಾ ಬ್ಯಾಗ್ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.

            ಕಾರ್ಯಕ್ರಮದಲ್ಲಿ ಕಂಪೆನಿಯ ಜನರಲ್ ಮ್ಯಾನೇಜರ್ ಬಾಲಚಂದ್ರ ಮಾತನಾಡಿ ನಮ್ಮ ಕಂಪೆನಿಯು ಕಳೆದ 6 ವರ್ಷಗಳ ಹಿಂದೆ ಪ್ರಾರಂಭವಾಗಿ ರೈತರ ಏಳಿಗೆಗೆ ದುಡಿಯುತ್ತಾ ಬಂದಿದೆ. ಹಲವಾರು ಸಮಾಜಸೇವೆಗಳನ್ನು ಮಾಡಿದೆ. ಕಂಪನಿಯಲ್ಲಿ 800ಕ್ಕೂ ಅಧಿಕ ಡೀಲರ್‌ಗಳಿದ್ದಾರೆ‌. ರೈತನ ಬೆಳೆಯಲ್ಲಿ ಉತ್ಪಾದನೆ ಹೆಚ್ಚಿಸಲು ನಮ್ಮ ಕಂಪೆನಿ 60 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದರು.

          ಇದರೊಂದಿಗೆ ರೈತರ ಮಕ್ಕಳಿಗೆ ಸೇವೆ ಒದಗಿಸುವ ಸಲುವಾಗಿ ಅತ್ಯಂತ ಹೆಚ್ಚು ರೈತರ ಮಕ್ಕಳು ಓದುವ ಶಾಲೆಗಳನ್ನು ಗುರುತಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಕಂಪೆನಿಯಿಂದ ನೆರವು ನೀಡಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸ್ಕಾಲರ್‌ಶಿಪ್ ನೀಡುವ ಕಾರ್ಯ ಸೇರಿದಂತೆ ಹತ್ತು ಹಲವಾರು ಸಮಾಜಸೇವೆ ಕಂಪೆನಿ ಮಾಡುತ್ತಾ ಬಂದಿದೆ ಎಂದು ಹೇಳಿದರು.

            ಸಿಆರ್‌ಪಿ ನಂಜಯ್ಯ ಮಾತನಾಡಿ ಮಕ್ಕಳಿಗೆ ಸೇವೆ ಒದಗಿಸುವ ಸಲುವಾಗಿ ಈ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸ ತಂದಿದೆ ಎಂದರು. ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು.

          ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಂಪೆನಿ ಡೀಲರ್ ವಿವೇಕ್, ಏರಿಯಾ ಮ್ಯಾನೇಜರ್ ಮಲ್ಲಿಕಾರ್ಜುನ್,ಮುಖ್ಯಶಿಕ್ಷಕ ಸಗಾಯರಾಜ್,ಮುಖ್ಯೋಪಾದ್ಯಾಯಿನಿ ಲೀಮಾ ರೋಸ್,ಚಾರ್ಲ್ಸ್ ಡಿಸೋಜ, ಗ್ರಾ.ಪಂ ಸದಸ್ಯೆ ಅರುಳ್‌ಸೆಲ್ವಿ,ಗ್ರಾಮದ ಮುಖಂಡ ಪನ್ನಾಡಿ ನಾಯಕ ಉಪಸ್ಥಿತರಿದ್ದರು.

TRENDING