





ಕೊಪ್ಪಳ : ಇಂದು ಜಿಲ್ಲೆಯ ಕುಷ್ಟಗಿ ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಬುತ್ತಿ ಬಸವೇಶ್ವರ ಮೈದಾನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಮತ್ತು ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಯೋಗ ಶಿಕ್ಷಕರಾದ ಸಿದ್ದಪ್ಪ ಕಾತರಿಕಿ,ದ್ರಾಕ್ಷಾಯಣಿ ಪಾಟೀಲ್,ಶ್ರೀಕಾಂತ್ ಪಾಟೀಲ್ (ಪ್ರಾಚಾರ್ಯರು),ಷಣ್ಮುಖಪ್ಪ, ದಾವಣಗೆರೆ ರಾಮನಗೌಡ ಪಾಟೀಲ(ವಕೀಲರು),ಪರಶುರಾಮ್ ಬಚನವರ,ರಾಘವೇಂದ್ರ ಬ್ಯಾಲಿಹಾಳ ಇತರರಿಂದ ವಿದ್ಯಾರ್ಥಿಗಳಿಗೆ ಉತ್ತಮವಾದ ಜ್ಞಾನವನ್ನು ಪಡೆಯಲು ಯೋಗದಿಂದ ಮಾತ್ರ ಸಾಧ್ಯ ಎಂದು ಅರ್ಥಪೂರ್ಣವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.