Saturday, December 5, 2020
Home ಜಿಲ್ಲೆ ಕಾಗವಾಡ : ನಿರಾಶ್ರಿತರ ಶಾಶ್ವತ ಪರಿಹಾರಕ್ಕಾಗಿ ಡಿವೈಎಸ್ಪಿಗೆ ಮನವಿ

ಇದೀಗ ಬಂದ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ ಕಣ್ಣೀರ ಶಾಪ...

 ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣ್ಣೀರು ಹಾಕಿಸಿದ ಶಾಪ ಶೀಘ್ರದಲ್ಲಿ ತುಮಕೂರಿಗೆ ತಟ್ಟಲಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ...

ಡೇಟಾಬೇಸ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಮೊಬೈಲ್...

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಡೇಟಾಬೇಸ್ ನಲ್ಲಿ ನಿಮ್ಮ ಆಧಾರ್ ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅಗತ್ಯ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ...

ಸಕಾಲ ಸೇವಾ ಆಯೋಗ ಸ್ಥಾಪನೆ: ಸಚಿವ ಎಸ್....

ಬೆಂಗಳೂರು: ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್...

ಕರ್ನಾಟಕ ಬಂದ್ ಹಿನ್ನೆಲೆ: ಮೆಜೆಸ್ಟಿಕ್ ನಮ್ಮ ಮೆಟ್ರೋ...

 ಬೆಂಗಳೂರು, ಡಿ.05: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಮೆಜೆಸ್ಟಿಕ್‌ನಲ್ಲಿ ಹೆಚ್ಚು ಜನಸಂದಣಿ ಇರುತ್ತದೆ, ಹಾಗೆಯೇ ಟೌನ್‌ಹಾಲ್‌ಗೆ ಹತ್ತಿರವಿರುವ ಕಾರಣ ಯಾವುದೇ...

ದೇಶದಲ್ಲಿ ಒಂದೇ ದಿನದಲ್ಲಿ 36,652 ಕೊರೋನಾ ಪ್ರಕರಣ...

ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 36,652 ಪ್ರಕರಣ ದಾಖಲಾಗಿದ್ದು, ಈವರೆಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 96 ಲಕ್ಷ ಗಡಿ ದಾಟಿದೆ.

ಕಾಗವಾಡ : ನಿರಾಶ್ರಿತರ ಶಾಶ್ವತ ಪರಿಹಾರಕ್ಕಾಗಿ ಡಿವೈಎಸ್ಪಿಗೆ ಮನವಿ

ಬೆಳಗಾವಿ : ಜಿಲ್ಲೆಯ ಕಾಗವಾಡ ತಾಲೂಕಿನ ನಿರಾಶ್ರಿತರ ಶಾಶ್ವತ ಪರಿಹಾರಕ್ಕಾಗಿ ಡಿವೈಎಸ್ಪಿ ರಾಮಗೊಂಡ ಬಸರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

2004-05 ರಲ್ಲಿ ಹಲವು ಗ್ರಾಮಗಳು ಜಲಾವೃತಗೊಂಡು ಅನೇಕ ಕುಟುಂಬಗಳು ಬೀದಿ ಪಾಲಾಗಿದ್ದವು. ಅವುಗಳ ನಿರ್ವಹಣೆಗೆ ತಾಲೂಕಾಡಳಿತ ಪುನರ್ವಸತಿ ಕಲ್ಪಿಸಿತ್ತು. ಆದರೆ ಈಗ ಪುನರ್ವಸತಿ ಕೇಂದ್ರಕ್ಕೆ ಇಲ್ಲಿಯವರೆಗೆ ಯಾವುದೇ ಸೌಲಭ್ಯಗಳನ್ನು ಒದಗಿಸಿಲ್ಲ. ಯಾವ ಜನಪ್ರತಿನಿಧಿಗಳು ಕೇಂದ್ರಕ್ಕೆ ಭೇಟಿ ಕೊಟ್ಟಿಲ್ಲ. ಈ ಕೇಂದ್ರದಲ್ಲಿ ಎಷ್ಟೋ ಮಕ್ಕಳು ಶಾಲೆಗೆ ಹೋಗಲು ಅನುಕೂಲ ಇಲ್ಲವಾದ್ದರಿಂದ ಮನೆಯಲ್ಲಿಯೇ ಉಳಿಯುವ ಪರಿಸ್ಥಿತಿಯಲ್ಲಿ ಇದ್ದಾರೆ.

ಈ ಕೇಂದ್ರಕ್ಕೆ ಸಮೀಪದ ಉಗಾರದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ಕೆಲಸಕ್ಕೆ ಸುಮಾರು ಅನುಕೂಲವಿದೆ. ಆದರೆ ಅದಕ್ಕೀಗ ಕಲ್ಲುಬಿದ್ದಿದೆ. ಇವರಿಗೆ ಉಗಾರ ಗ್ರಾಮ ಪಂಚಾಯತ್ ಅನುಕೂಲಕರ ವಾತಾವರಣ ನಿರ್ಮಿಸಿದೆ ಹಾಗೂ ಇಲ್ಲಿ ವಾಸಿಸುವ ಕುಟುಂಬಗಳ ಅಲ್ಪ ಸ್ವಲ್ಪ ಜಮೀನುಗಳು ಉಗಾರ ಗ್ರಾಮದಲ್ಲಿವೆ. ಹೀಗಾಗಿ ನಮ್ಮ ಎಲ್ಲಾ ಕುಟುಂಬಗಳನ್ನು ಶೇಡಬಾಳ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಸೇರಿಸುತ್ತಿದ್ದಾರೆ.

ಈ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿರುವ ಎಲ್ಲಾ ಜನರ ಆಧಾರ್,ಪಡಿತರ ಚೀಟಿ ಇನ್ನಿತರ ದಾಖಲಾತಿಗಳು ಉಗಾರ ಬಿ.ಕೆ.ಗ್ರಾಮದ ವ್ಯಾಪ್ತಿಯಲ್ಲಿವೆ. ಆದರೆ ನಮ್ಮನ್ನೆಲ್ಲಾ ಶೇಡಬಾಳ ಪಟ್ಟಣ ಪಂಚಾಯತ್ ಗೆ ಸೇರ್ಪಡೆಗೊಳಿಸಲಾಗುತ್ತಿದೆ. ಇದಕ್ಕೆ ಎಲ್ಲಾ ಜನರ ವಿರೋಧದ ನಡುವೆಯೂ ಹುನ್ನಾರ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ರಾಮಗೊಂಡ ಬಸರಗಿ ಹಾಗೂ ಕಾಗವಾಡ ಪಿಎಸ್ಐ ಹಣಮಂತ ಶಿರಹಟ್ಟಿಯವರಿಗೆ ಮನವಿಯನ್ನು ಸಲ್ಲಿಸಿದ್ದು ಹಾಗೂ ಪರಿಶಿಷ್ಟ ಜಾತಿ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಮಂಡಿಸಲಾಗಿದೆ ಎಂದು ಡಿಎಸ್ಎಸ್ ಮುಖಂಡ ಸಚಿನ್ ಪೂಜಾರಿ ಹೇಳಿದರು.

ಕಾಗವಾಡ ಕ್ಷೇತ್ರದ ಶಾಸಕರಾಗಲಿ,ಸಂಸದರಾಗಲಿ‌ ಚುನಾವಣೆ ಮತ ಕೇಳಲು ಬಂದದ್ದು ಬಿಟ್ಟರೆ ಇತ್ತ ಕಡೆ ಸುಳಿದಿಲ್ಲ ಮತ್ತು ಯಾವುದೇ ಸಹಾಯ ಸಹಕಾರ,ಸೌಲಭ್ಯ ಒದಗಿಸಿಲ್ಲ. ಈಗಲಾದರೂ ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ಸಿಗುತ್ತಾ ಎಂದು ಕಾದುನೋಡೊಣ.

TRENDING