Thursday, November 26, 2020
Home ಜಿಲ್ಲೆ ಚಾಮರಾಜನಗರ 54 ಕೋಟಿ ರೂ. ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶಿಸಿದ ಶಾಸಕ

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ...

ವಾಷಿಂಗ್ಟನ್: ಇಷ್ಟು ದಿನ ಅತೀ ಹೆಚ್ಚು ಸೋಂಕಿನಿಂದ ದಾಖಲೆ ಬರೆಯುತ್ತಿದ್ದ ಅಮೆರಿಕಾ ಇದೀಗ ಸಾವಿನಲ್ಲೂ ದಾಖಲೆ ಬರೆದಿದೆ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಒಂದೇ ದಿನ...

ಉ.ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಟ್ಟ ಸಿಎಂ...

ಲಕ್ನೋ, ನ. 25: ಉತ್ತರ ಪ್ರದೇಶದ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ...

 ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಹೌದು,...

ಪ.ಬಂಗಾಳ ‘ಎರಡನೇ ಕಾಶ್ಮೀರ’ವಾಗಿ ಮಾರ್ಪಟ್ಟಿದೆ: ಬಿಜೆಪಿ ಮುಖ್ಯಸ್ಥ...

 ಕೋಲ್ಕತ್ತ:‍ ಪಶ್ಚಿಮ ಬಂಗಾಳ 'ಎರಡನೇ ಕಾಶ್ಮೀರವಾಗಿ' ಮಾರ್ಪಟ್ಟಿದೆ. ಇಲ್ಲಿ ನಿತ್ಯ ಉಗ್ರರನ್ನು ಬಂಧಿಸಲಾಗುತ್ತಿದೆ. ದಿನಬೆಳಗಾದರೆ ಅಕ್ರಮ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮದ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಇದೀಗ ಪಗರು ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ...

54 ಕೋಟಿ ರೂ. ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶಿಸಿದ ಶಾಸಕ

ಕೊಳ್ಳೇಗಾಲ : ನಗರದ 31 ವಾರ್ಡುಗಳಿಗೆ ದಿನದ 24 ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದ್ದು ಇದಕ್ಕೆ ಸಾರ್ವಜನಿಕರಿಂದ ತೀರಾ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಜನರ ಮನವಿಗೆ ಸ್ಪಂದಿಸಿದ ಶಾಸಕ ಎನ್.ಮಹೇಶ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಆದೇಶಿಸಿದ್ದಾರೆ.

           ಹೌದು, ನಗರ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರಲಾಗಿರುವ ಬರೋಬ್ಬರಿ 54 ಕೋಟಿ ರೂ. ಮೊತ್ತದ ನಿರಂತರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ನೂತನ ಶಾಸಕ ಎನ್.ಮಹೇಶ್ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

ಈ ಯೋಜನೆಗೆ ಪ್ರಾರಂಭದಿಂದಲೇ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಚರ್ಚಿಸಲು ಸಾರ್ವಜನಿಕರ ಸಭೆಗಳನ್ನು ಸಹ ನಡೆಸಲಾಗಿತ್ತು. ಎಲ್ಲಾ ಸಭೆಗಳಲ್ಲೂ ಸಾರ್ವಜನಿಕರು ಹಾಗೂ ವಿವಿಧ ಸಂಘಸಂಸ್ಥೆಗಳು ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಪ್ರಗತಿಪರ ಸಂಘಟನೆಗಳ ಒಕ್ಕೂಟವು ಯೋಜನೆ ವಿರೋಧಿಸಿ ನಗರದಲ್ಲಿ ಜನಾಂದೋಲನ ನಡೆಸುತ್ತಿತ್ತು. ಅಲ್ಲದೇ ಇದೇ ತಿಂಗಳ 25 ರಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಯೋಜನೆ ಸಂಬಂಧ ಚರ್ಚಿಸಲು ಶಾಸಕರ ಅಧ್ಯಕ್ಷತೆಯಲ್ಲಿ ಇಂದು ಸಹ ಸಭೆ ಕರೆಯಲಾಗಿತ್ತು‌. ಯೋಜನೆ ಜಾರಿಗೆ ಹಿಂದಿನ ಸಭೆಗಳಲ್ಲಿ ವ್ಯಕ್ತವಾದ ವಿರೋಧಕ್ಕಿಂತ ಹೆಚ್ಚಿನ ವಿರೋಧ ಇಂದಿನ ಸಭೆಯಲ್ಲಿ ವ್ಯಕ್ತವಾಯಿತು.

          ತೀವ್ರ ವಿರೋಧ ವ್ಯಕ್ತಪಡಿಸಿದ ವಿವಿಧ ಸಂಘಟನೆಗಳ ಮುಖಂಡರು ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ಬಡವನ‌ ಜೇಬಿಗೆ ಕತ್ತರಿ ಹಾಕುವ ಯೋಜನೆ ಬೇಡ ಎಂದು ಸಾರ್ವಜನಿಕರು ಕಿಡಿಕಾರಿದರು‌. ಪ್ರಾರಂಭದಲ್ಲಿ ಕಡಿಮೆ ದರ ನಿಗದಿ ಮಾಡಿ ನಂತರ ದುಬಾರಿಗೊಳಿಸಲಾಗುತ್ತದೆ ಎಂದು ಆರೋಪಿಸಿದರು. ಈ ಯೋಜನೆಯಿಂದ ಬೀದಿ ನಲ್ಲಿಗಳನ್ನೇ ಅವಲಂಬಿಸಿರುವರ ಗತಿಯೇನು ಎಂದು ಪ್ರಶ್ನಿಸಿದರು.

           ನಗರದಲ್ಲಿ ಶೇ.65 ರಷ್ಟು ಜನರು ಬಿಪಿಎಲ್ ಕಾರ್ಡ್‌ದಾರರಿದ್ದು ಅವರಿಗೆ ತಿನ್ನುವ ಅಕ್ಕಿ ಉಚಿತವಾಗಿದೆ. ಅದರೆ ನೀರಿಗೆ ಹಣ ವಸೂಲಿ ಮಾಡುವುದು ಯಾವ ನ್ಯಾಯ ಎಂದು ಹರಿಹಾಯ್ದರು. ಅಭಿವೃದ್ಧಿ ಮಾಡುವವರು ಮೊದಲನೇ ಹಂತದ ನೀರಾವರಿ ಯೋಜನೆಯ ಮೋಟಾರ್ ಕೆಟ್ಟು ಹೋಗಿದ್ದರೂ ಅದನ್ನು ದುರಸ್ತಿಗೊಳಿಸದೆ ಹೊಸ ಯೋಜನೆ ಜಾರಿಗೊಳಿಸಿರುವುದು ಏಕೆ? ಎಂದು ಪ್ರಶ್ನೆ ಮಾಡಿದರು.

         ಯೋಜನೆ ಜಾರಿಯಾದ ಸಮಯದಲ್ಲಿ ನಗರಸಭೆ ಬೋರ್ಡ್ ಇತ್ತು. ಇಂದು ಬೋರ್ಡ್ ಇಲ್ಲ‌‌. ಹಾಗಾಗಿ ನೂತನ ಬೋರ್ಡ್ ಬರುವವರೆಗೆ ಕಾಮಗಾರಿ ನಿಲ್ಲಿಸಿ. ನಾವೂ ಸಹ ನಮ್ಮ ಹೋರಾಟ ನಿಲ್ಲಿಸುತ್ತೇವೆ.‌ ಆನಂತರ ಬೋರ್ಡ್‌ನಲ್ಲಿ ಚರ್ಚೆಯಾಗಲಿ ಎಂದು ಮನವಿ ಮಾಡಿದರು‌.

          ಸಭೆಯಲ್ಲಿ ಸಾರ್ವಜನಿಕರು ಹಾಗೂ ಮುಖಂಡರಿಂದ ವ್ಯಕ್ತವಾದ ವಿರೋಧಕ್ಕೆ ಹಾಗೂ ಯೋಜನೆಯನ್ನು ನಿಲ್ಲಿಸಬೇಕೆಂಬ ಮನವಿಗೆ ಸ್ಪಂದಿಸಿದ ಶಾಸಕ ಎನ್.ಮಹೇಶ್ ನೂತನ ಬೋರ್ಡ್ ಸ್ಥಾಪನೆಯಾಗುವವರೆಗೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

       ಸಭೆಯಲ್ಲಿ ನಗರಸಭಾ ಪೌರಾಯುಕ್ತ ನಾಗಶೆಟ್ಟಿ, ಮಲ್ಟಿ ಮ್ಯಾಂಟೆಕ್ ಇಂಟರ್ ನ್ಯಾಷನಲ್ ಕಂಪೆನಿಯ ಟೀಂ ಲೀಡರ್ ರಂಗಧಾಮಯ್ಯ, ನಗರಸಭಾ ಸದಸ್ಯ ನಾಸೀರ್‌ ಷರೀಫ್ ಹಾಗೂ ವಿವಿಧ ಸಂಘಸಂಸ್ಥೆಗಳ ಹಲವಾರು ಮುಖಂಡರು ಹಾಜರಿದ್ದರು.

TRENDING