Saturday, July 31, 2021
Homeಜಿಲ್ಲೆಹಲಸಂಗಿ ಗೆಳೆಯರ ಬಳಗದ ಹಿರಿಯ ಜಾನಪದ ಸಾಹಿತಿ ಪುರುಷೋತ್ತಮ ಗಲಗಲಿ ಇನ್ನಿಲ್ಲ

ಇದೀಗ ಬಂದ ಸುದ್ದಿ

ಹಲಸಂಗಿ ಗೆಳೆಯರ ಬಳಗದ ಹಿರಿಯ ಜಾನಪದ ಸಾಹಿತಿ ಪುರುಷೋತ್ತಮ ಗಲಗಲಿ ಇನ್ನಿಲ್ಲ

ಚಡಚಣ : ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಲಸಂಗಿ ಗ್ರಾಮದ ಜಾನಪದ ಸಾಹಿತ್ಯ ಲೋಕದ ದಿಗ್ಗಜ ದಿ.ಮಧುರಚೆನ್ನರ ಹಿರಿಯ ಮಗ ಪುರುಷೋತ್ತಮ ಗಲಗಲಿ (91) ಮಂಗಳವಾರ ಮಧ್ಹ್ಯಾನ 1 ಗಂಟೆಗೆ ನಿಧನರಾಗಿದ್ದಾರೆ.  

ಅವರಿಗೆ ಮೂವರು ಪುತ್ರರು, ಮೂವರು ಪುತ್ರಿಯರು ಇದ್ದರು. ಅಲ್ಲದೆ ಸಾವಿರಾರು ಶಿಷ್ಯರು,ಅಸಂಖ್ಯಾತ ಜಾನಪದ ಸಾಹಿತ್ಯಾಸಕ್ತರನ್ನು ಸಹ ಅವರು ಅಗಲಿದ್ದಾರೆ. ಇಂದು ಬೆಳಿಗ್ಗೆ ಪುರುಷೋತ್ತಮ ಗಲಗಲಿ ಅವರ ಅಂತ್ಯಕ್ರಿಯೆ ಸ್ವಗ್ರಾಮ ಹಲಸಂಗಿಯಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

ಪುರುಷೋತ್ತಮರ ಪರಿಚಯ

ಸಮ್ಮೇಳನದ ಅಧ್ಯಕ್ಷ ಪುರುಷೋತ್ತಮ ಚನ್ನಮಲ್ಲಪ್ಪ ಗಲಗಲಿ ಅವರು ಮೂಲತಃ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ನಾಡಿನ ಖ್ಯಾತ ಸಾಹಿತಿ ಮಧುರಚನ್ನರ ಆರು ಜನ ಪುತ್ರರಲ್ಲಿ ಮೊದಲನೆಯವರು. 25 ಆಗಸ್ಟ್ 1925 ರಲ್ಲಿ ಹಲಸಂಗಿಯಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೇ ಮುಗಿಸಿ, 1949 ರಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ನಂತರ ಶಿಕ್ಷಣ ಸಂಯೋಜಕರಾಗಿ, ಪ್ರಭಾರ ಸಹಾಯಕ ಶಿಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. 89 ರ ಇಳಿ ವಯಸ್ಸಿನ ಪುರುಷೋತ್ತಮ ಸಾಹಿತ್ಯ ಕ್ಷೇತ್ರದಲ್ಲಿನ ನಂಟಿನಿಂದ ಈ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದರು.

ಪುರುಷೋತ್ತಮರ ಸಾಧನೆ

ಪುರುಷೋತ್ತಮರವರು ಅರವಿಂದ ಆಶ್ರಮದ ಹಿರಿಯ ಸಾಧಕರು.

ಅಖಿಲ ಭಾರತ ಪತ್ರಿಕೆಯ ಕನ್ನಡ ಅನುವಾದಕರಾಗಿದ್ದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾಗಿದ್ದರು.

ಕರ್ನಾಟಕದ ಅರವಿಂದ ಸೊಸೈಟಿಯ ವಲಯ ಉಪಾಧ್ಯಕ್ಷರಾಗಿದ್ದರು.

ಇದಲ್ಲದೇ ಚಡಚಣ ಪಟ್ಟಣದಲ್ಲಿ ನಡೆದ 7 ನೇ ಇಂಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img