Wednesday, December 2, 2020
Home ಜಿಲ್ಲೆ ಕುಂದಗೋಳ-ಕಳೆದ ಉಪ ಚುನಾವಣೆಯಲ್ಲಿ ಟ್ರಬಲ್ ಶೂಟರ್ ಮತದಾರರ ಮನವೊಲಿಕೆಗೆ ದತ್ತು,ದಾನ ಹುಸಿಯಾತೆ?

ಇದೀಗ ಬಂದ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು, ಡಿ. 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್...

ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ :...

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಸಿಹಿ ಸುದ್ದಿ ನೀಡಿದ್ದು, ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.

ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ...

ಉಡುಪಿ : ಉಡುಪಿ ಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಮಾಯವಾಗಿದೆ. ಇನ್ನೂ ನವೆಂಬರ್ ಮುಗಿದು ಒಂದು ದಿನವಾಗಿಲ್ಲ. ಆಗಲೇ ಪ್ರಸಿದ್ಧ ಉಡುಪಿ ಕೃಷ್ಣಮಠದ ಮುಖ್ಯ...

ರೈತ ಪ್ರತಿಭಟನೆ ಯಶಸ್ಸಿಗೆ ಗುರುದ್ವಾರಗಳಲ್ಲಿ ಇಂದು ವಿಶೇಷ...

ನವದೆಹಲಿ,ಡಿ.1-ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಚಳವಳಿ ಯಶಸ್ಸಿಗಾಗಿ ರಾಜಧಾನಿಯಲ್ಲಿರುವ ಗುರುದ್ವಾರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರಿಗೆ ಮಾರಕವಾಗಿರುವ ಕೃಷಿ ನೀತಿಯನ್ನು ಸರ್ಕಾರ ಈ ಕೂಡಲೇ...

ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ,...

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಜಾರಿಗೆ ತರುವುದು ಬೇಡ ಹೊಸ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ವಿರೋಧ ಪಕ್ಷದ ನಾಯಕ...

ಕುಂದಗೋಳ-ಕಳೆದ ಉಪ ಚುನಾವಣೆಯಲ್ಲಿ ಟ್ರಬಲ್ ಶೂಟರ್ ಮತದಾರರ ಮನವೊಲಿಕೆಗೆ ದತ್ತು,ದಾನ ಹುಸಿಯಾತೆ?

ಕುಂದಗೋಳ : ಹೌದು ವೀಕ್ಷಕರೇ, ರಾಜ್ಯದಲ್ಲಿ ಲೋಕಸಭೆ ಫಲಿತಾಂಶ ಮುನ್ನವೆ ಕುಂದಗೋಳ ಉಪಚುನಾವಣೆ ಕ್ಷೇತ್ರ ಭಾರಿ  ಸಂಚಲನ ಮೂಡಿತ್ತು.

ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ,ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ನೇರ ಹಣಾಹಣಿ ನಡೆದಿತ್ತು. ರಾಜ್ಯದಲ್ಲಿ ಕುಂದಗೋಳ ಎರಡು ಪಕ್ಷಗಳಿಗೆ ಭಾರಿ ಪ್ರತಿಷ್ಠೆಯ ಕಣವಾಗಿದ್ದವು. ಮೈತ್ರಿ ಅಭ್ಯೆರ್ಥಿ ಕುಸುಮಾ ಶಿವಳ್ಳಿ‌ 77,341 ಮತ ತೆಗೆದುಕೊಂಡರೆ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರು 76,701 ಮತ ತೆಗೆದುಕೊಂಡು ಅತಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.

ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿಯವರ ಪರ ಟ್ರಬಲ ಶೂಟರ್ ಡಿ.ಕೆ.ಶಿವಕುಮಾರ್ ಅವರು ನಮ್ಮ ಶಿವಳ್ಳಿಯವರ ಪತ್ನಿ‌ಕ್ಷೇತ್ರದ ಮತದಾರರು ಗೆಲ್ಲಿಸಿದರೆ ಕುಂದಗೋಳ ಮತಕ್ಷೇತ್ರವನ್ನು ನನ್ನ ಕ್ಷೇತ್ರವಾಗಿ ದತ್ತು ಪಡೆದು ಧಾರವಾಡ ಜಿಲ್ಲೆಯಲ್ಲಿ ಮಾದರಿ ಕ್ಷೇತ್ರವಾಗಿಸಲು ನಾನು ಗೆಲುವಿನ ನಂತರ ಕುಸುಮಾ ಶಿವಳ್ಳಿಯನ್ನು ಒಬ್ಬಳನ್ನೇ ಬಿಟ್ಟು ಕ್ಷೇತ್ರ ಅಭಿವೃದ್ದಿ ಕ್ಷೀಣಿಸದ ಹಾಗೆ ನೋಡಿಕೊಳ್ಳುತ್ತೇನೆ ಎಂದಿದ್ದರು. ಆದರೆ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ ಅಭ್ಯಥಿ ಕುಸುಮಾ ಶಿವಳ್ಳಿ ಗೆದ್ದು ಮೂರು ತಿಂಗಳಾದರೂ ಇತ್ತ ಗಮನಹರಿಸದೇ ಇರೋದು ಕುಂದಗೋಳ ಮತದಾರ ಪಾಡು ದೇವರಿಗೆ ಪ್ರೀತಿಯಾಗಿದೆಯೇ?

ಮತ್ತೊಂದಡೆ ಕುಂದಗೋಳ ಪಟ್ಟಣದಲ್ಲಿ ಕೆ.ಪಿ.ಸಿ.ಸಿ ಕಚೇರಿ ಸಹ ಇಲ್ಲಿ ತೆರೆಯುವ ಭರವಸೆ ಕೇವಲ ರಾಜಕೀಯ ಗಿಮಿಕ್ ಆಯಿತೇ? ಎನ್ನುವುದು ಕುಂದಗೋಳ ಕ್ಷೇತ್ರದ ಮತದಾರರ ಪ್ರಶ್ನೆಯಾಗಿದೆ. ಇನ್ನು ಕುಂದಗೋಳ ಕ್ಷೇತ್ರದಲ್ಲಿ ವರುಣನ ಅಭಾವದಿಂದ ಜನ-ಜಾನುವಾರಗಳು ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಗುಳೆ ಹೋಗುತ್ತಿದ್ದಾರೆ.

 ಕ್ಷೇತ್ರದ 96 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಂತೂ ಮುಗಿಲುಮುಟ್ಟಿದೆ. ಕುಡಿಯುವ ನೀರಿನ ಶುದ್ಧ ನೀರಿನ ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲದೆ ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗಿ ಕುಡಿಯುವ‌ನೀರು ತರಬೇಕಾಗಿದೆ ವೀಕ್ಷಕರೇ.

ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಕರವೇ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ,ಸತ್ಯಾಗ್ರಹಗಳು ಸಹ ನಡೆಯುತ್ತಾ ಬಂದಿವೆ.

ಜಿಲ್ಲಾ ಹಾಗೂ ತಾಲೂಕು, ಗ್ರಾಮ ಪಂಚಾಯತಿಗಳಿಂದ ಗುಳೆಹೋಗುವರಿಗೆ ಕೆಲಸ ಕೊಡದೆ,ಸರಿಯಾಗಿ ಕುಡಿಯುವ ನಿರ್ವಹಣೆ ಮಾಡದೆ,ವಿದ್ಯುತ್‌ ಸಮಸ್ಯೆ ನೀಗಿಸದೆ ಅತ್ತ ಕ್ಷೇತ್ರದ ಅಭಿವೃದ್ಧಿ,ಸಮಸ್ಯೆಗಳ ಆಲಿಸಲು ನಿಜವಾದ ನಾಯಕರು ಇಲ್ಲದೆ ಕುಂದಗೋಳ ಮತದಾರರ ಗೋಳು ಕೇಳುವರಿಲ್ಲದಂತಾಗಿದೆ.

ಮತದಾರರು ಪರದಾಡುವ ಸ್ಥಿತಿ ಪ್ರಾರಂಭವಾಗಿರುವುದನ್ನು ಸಂಬಂಧಪಟ್ಟ ತಮ್ಮ ಮೈತ್ರಿ ಅಭ್ಯರ್ಥಿ ಗೆಲುವಿಗೆ ಕಾರಣರಾದ ಸಚಿವ ಡಿ.ಕೆ.ಶಿವಕುಮಾರ್ ಅವರು ಕೂಡಲೇ ಕುಂದಗೋಳ ಕ್ಷೇತ್ರಕ್ಕೆ ಆಗಮಿಸಿ ಕುಂದಗೋಳ ಕ್ಷೇತ್ರದ ಸಂಪೂರ್ಣ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಕ್ಕೆ ಮುಂದಾಗುತ್ತಾರೋ ಇಲ್ಲ ಕೇವಲ ರಾಜಕೀಯ ಸ್ವಾರ್ಥಕ್ಕೆ ಕುಂದಗೋಳ ಕ್ಷೇತ್ರದ ಮುಗ್ದ ಮನಸ್ಸುಗಳಿಗೆ  ಮೋಸ ಮಾಡುತ್ತಾರೊ? ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಕಾದುನೋಡಬೇಕು.

TRENDING