Monday, January 18, 2021
Home ಜಿಲ್ಲೆ ಈ ಶಾಲೆಯಲ್ಲಿ ಮೂವರು ಶಿಕ್ಷಕರಿಗೆ ಮೂರೇ ವಿದ್ಯಾರ್ಥಿಗಳು!

ಇದೀಗ ಬಂದ ಸುದ್ದಿ

ಈ ಶಾಲೆಯಲ್ಲಿ ಮೂವರು ಶಿಕ್ಷಕರಿಗೆ ಮೂರೇ ವಿದ್ಯಾರ್ಥಿಗಳು!

ಬೆಳಗಾವಿ : ನಗರದ ಮಾರುತಿ ಗಲ್ಲಿ ಸರಕಾರಿ ಮರಾಠಿ ನಂ.1 ಶಾಲೆಯಲ್ಲಿ ಮೂರು ಶಿಕ್ಷಕರಿದ್ದರೂ ಬರೀ ಮೂರು ಪುಟ್ಟ ವಿದ್ಯಾರ್ಥಿಗಳಿದ್ದಾರೆ.

ಪ್ರಸಕ್ತ ಸಾಲಿನಲ್ಲಿ 3ನೇ ತರಗತಿಗೆ ಇಬ್ಬರು ವಿದ್ಯಾರ್ಥಿಗಳು & 4ನೇ ತರಗತಿಗೆ ಒಬ್ಬಳೇ ವಿದ್ಯಾರ್ಥಿನಿ ಪ್ರವೇಶ ಪಡೆದಿದ್ದು ಹುಬ್ಬೇರುವಂತೆ ಮಾಡಿದೆ. ಖಾಸಗಿ ಶಾಲೆಯೆಡೆಗೆ ಪಾಲಕರ ಸೆಳೆತವೋ, ಸರಕಾರಿ ಶಾಲೆಗಳ ಗುಣಮಟ್ಟ ಕೊರತೆಯೊ ಅಂತೂ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಆಗುತ್ತಿಲ್ಲ. ಮೂವರಿಗೆ ಕಲಿಸಲು ಮೂವರು ಶಿಕ್ಷಕರು ನಿಯೋಜನೆ ಆಗುವಂತೆ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

TRENDING