Sunday, January 17, 2021
Home ಜಿಲ್ಲೆ ಅಧಿಕಾರಿಗಳ ವಿರುದ್ಧ ಲಿಂಗಸೂಗೂರು ಶಾಸಕ ಹೂಲಗೇರಿ ಗರಂ

ಇದೀಗ ಬಂದ ಸುದ್ದಿ

ಅಧಿಕಾರಿಗಳ ವಿರುದ್ಧ ಲಿಂಗಸೂಗೂರು ಶಾಸಕ ಹೂಲಗೇರಿ ಗರಂ

ರಾಯಚೂರು : ಲಿಂಗಸೂಗೂರು ಶಾಸಕ ಡಿ.ಎಸ್.ಹೂಲಗೇರಿ ಅಧ್ಯಕ್ಷತೆಯಲ್ಲಿ ಮುದಗಲ್ ಪುರಸಭೆ ಸಭಾಭವನದಲ್ಲಿ ಸಭೆ ನಡೆಯಿತು.

ಕುಡಿಯುವ ನೀರಿನ ಯೋಜನೆ ಕುರಿತು ಅಧಿಕಾರಿಗಳ ಈ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ವಿವಿಧ ಕಾಮಗಾರಿಗಳ ವಿಳಂಬಕ್ಕೆ ಅಧಿಕಾರಿಗಳ ಮೇಲೆ ಶಾಸಕ ಹೂಲಗೇರಿ ಕೆಂಡಾಮಂಡಲರಾದರು.

ನಮ್ಮನ್ನು ಭೇಟಿಯಾಗೋದು ಬೇಕಿಲ್ಲ,ಮೊದಲು ಕೆಲಸ ಮಾಡೋದು ಕಲಿರಿ ಎಂದು ಅಧಿಕಾರಿಗಳಿಗೆ ಶಾಸಕರು ತರಾಟೆಗೆ ತೆಗೆದುಕೊಂಡರು. ನೀವು ಮಾಡೋ ನಿಧಾನದ ಕೆಲಸದಿಂದ ವಾರ್ಡ್ ನಲ್ಲಿ ನಾವು ಹೋದರೆ ಜನರು ಹೊಡಿತಾರೆ ಎಂದು ಲಿಂಗಸೂಗೂರು ಶಾಸಕ ಡಿ.ಎಸ್.ಹೂಲಗೇರಿ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.

TRENDING