Sunday, May 16, 2021
Homeಜಿಲ್ಲೆಹೊಸ ಮಾರುಕಟ್ಟೆಗೆ ಸ್ಥಳಾಂತರವಾಗದಿದ್ದರೆ ಆಗದಿದ್ದರೆ ಪರವಾನಗಿ ರದ್ದು

ಇದೀಗ ಬಂದ ಸುದ್ದಿ

ಹೊಸ ಮಾರುಕಟ್ಟೆಗೆ ಸ್ಥಳಾಂತರವಾಗದಿದ್ದರೆ ಆಗದಿದ್ದರೆ ಪರವಾನಗಿ ರದ್ದು

ಧಾರವಾಡ : ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಲೈಸನ್ಸ್ ಪಡೆದು ತರಕಾರಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದವರು ಹೊಸ ಮಾರುಕಟ್ಟೆ ಪ್ರಾಂಗಣಕ್ಕೆ ಜೂ.30 ರೊಳಗೆ ಸ್ಥಳಾಂತರ ಆಗದೇ ಹೋದರೆ ಅವರ ಲೈಸನ್ಸ್ ರದ್ದುಪಡಿಸುವುದರ ಜೊತೆಗೆ ಅವರಿಗೆ ನೀಡಲಾಗಿದ್ದ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಧಾರವಾಡದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಹಾವೀರ ಜೈನ್ ಹೇಳಿದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.31 ರೊಳಗೆ ನೆಹರೂ ಮಾರುಕಟ್ಟೆಯಿಂದ ಸ್ಥಳಾಂತರ ಆಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಈವರೆಗೂ ಯಾರೂ ಸ್ಥಳಾಂತರ ಆಗಿಲ್ಲ. ಹೀಗಾಗಿ ಸಮಿತಿ ಸಭೆ ಕೈಗೊಂಡು ಠರಾವು ಪಾಸ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ 91 ವ್ಯಾಪಾರಸ್ಥರಿಗೆ ನಿವೇಶನಗಳನ್ನು ನೀಡಿದ್ದು, ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನೂ ನೀಡಲಾಗಿದೆ. ಆದರೂ ಸಹ ಸ್ಥಳಾಂತರವಾಗದ ಕಾರಣ ಈಗ ಜೂ.30ರವರೆಗೆ ಅಂತಿಮ ಗಡುವು ನೀಡಲಾಗಿದೆ ಎಂದರು.

ಹೊಸ ಎಪಿಎಂಪಿ ಮಾರುಕಟ್ಟೆಗೆ ಸ್ಥಳಾಂತರವಾಗದಿದ್ದರೆ ಅವರ ಲೈಸನ್ಸ್ ಹಾಗೂ ಹಂಚಿಕೆಯಾದ ನಿವೇಶನಗಳನ್ನು ಕಟ್ಟಡ ಸಹಿತ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಮೊದಲ ಹಂತವಾಗಿ ಐವರ ಲೈಸನ್ಸ್ ರದ್ದು ಮಾಡಲಾಗಿದೆ. ಈಗ ನೀಡಿರುವ ಅವಧಿಯಲ್ಲಿ ಎಲ್ಲಾ ವ್ಯಾಪಾರಸ್ಥರು ಸ್ಥಳಾಂತರವಾಗಬಹುದು ಎಂಬ ನಂಬಿಕೆ ಇದೆ. ಒಂದು ವೇಳ ತಪ್ಪಿದರೆ ಈ ಸಲ ಕಠಿಣ ಕ್ರಮಕ್ಕೆ ಸಿದ್ಧರಾಗಬೇಕು ಎಂದರು.

ಎಪಿಎಂಸಿ ನಿಯಮದ ಪ್ರಕಾರ ಸದ್ಯ 91 ಜನರಿಗೆ ನಿವೇಶನ ನೀಡಿದೆ. ಇವರೆಲ್ಲರೂ ಸ್ಥಳಾಂತರವಾದ ಮೇಲೆ ಮಾತ್ರ ಉಳಿದವರಿಗೆ ನಿವೇಶನ ನೀಡಲು ಅವಕಾಶವಿದೆ. ಉಳಿದವರಿಗೆ ಸಹ ನಿವೇಶನ ನೀಡಲು ಸಿದ್ಧತೆ ನಡೆಸಲಾಗಿದೆ. ಆದರೆ ನಿವೇಶನ ಪಡೆದವರೆಲ್ಲರೂ ಸ್ಥಳಾಂತರವಾದ ಮೇಲೆಯೇ ಅವರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img