Friday, November 27, 2020
Home ಕ್ರೈಂ ನ್ಯೂಸ್ ಹಣ ದ್ವಿಗುಣದ ಆಸೆ ತೋರಿಸಿ ಮೋಸ-ದೂರು ನೀಡಿದರೂ ಸ್ಪಂದಿಸದ ಎಸ್ಪಿ!

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಹಣ ದ್ವಿಗುಣದ ಆಸೆ ತೋರಿಸಿ ಮೋಸ-ದೂರು ನೀಡಿದರೂ ಸ್ಪಂದಿಸದ ಎಸ್ಪಿ!

ಹುಬ್ಬಳ್ಳಿ : ತಮ್ಮನ್ನು ಹಣ ದ್ವಿಗುಣ ಮಾಡುವುದಾಗಿ ನಂಬಿಸಿ 80.78 ಲಕ್ಷ ರೂ. ಮೋಸ ಮಾಡಿದ ಪ್ರಕರಣದಲ್ಲಿ ನ್ಯಾಯ ಕೊಡಿಸುವಂತೆ ಧಾರವಾಡ SP ಅವರಿಗೆ ಅಲೆದು ಅಲೆದು ಮನವಿ ಮಾಡಿದರೂ ನೋ ಯೂಸ್!

ಸುರಭಿ ಟ್ರೇಡರ್ಸ್ ಮಾಲೀಕರಾದ ಫಹೀದ್ ನಚ್ಚಿಕದನ ಮತ್ತು ಇಲಿಯಾಸ್ ನಚ್ಚಿಕದನ ಎಂಬುವವರು ನನ್ನ ಪತಿಗೆ ಹಣ ದ್ವಿಗುಣಗೊಳಿಸುವ ಆಸೆ ತೋರಿಸಿ ಸುಮಾರು 80.78 ಲಕ್ಷ ರೂ.ಗಳನ್ನು ತೊಡಡಗಿಸಿಕೊಂಡು ಹಣ ವಾಪಸ್ ಕೊಡದೆ ಮೋಸ ಮಾಡಿರುತ್ತಾರೆ .

ಈ ಹಣವನ್ನು ನನ್ನ ಗಂಡ ತಮ್ಮ ಸ್ನೇಹಿತರ ಮತ್ತು ಸಂಬಂಧಿಗಳ ಜೊತೆಗೂಡಿ ಇಟ್ಟಿರುತ್ತಾರೆ. ಈ ವಿಷಯವಾಗಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದಿನಾಂಕ 27.08.2017 ರಂದು ದೂರು ದಾಖಲಿಸಿದ್ದು ಮುಂದೆ ಈ ಪ್ರಕರಣಕ್ಕೆ ಧಾರವಾಡ ಜಿಲ್ಲಾ ಆರ್ಥಿಕ ವಿಭಾಗಕ್ಕೆ ವರ್ಗಾವಣೆಗೊಂಡ ನಂತರ ಈ ವಿಷಯವಾಗಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸಾಕಷ್ಟು ಬಾರಿ ಎಸ್.ಪಿ . ಯವರಿಗೆ ಖುದ್ದು ಭೇಟಿ ನೀಡಿದರೂ ಪ್ರಕರಣ ಕುರಿತು ಎಳ್ಳಷ್ಟೂ ಕಾಳಜಿ ವಹಿಸಿರುವುದಿಲ್ಲ. ಇದರಿಂದಾಗಿ ನನ್ನ ಪತಿ ಹತಾಶೆಗೊಂಡಿರುತ್ತಾರೆ. ಇವರ ಪರಿಚಯದೊಂದಿಗೆ ಬಂಡವಾಳ ಹಾಕಿದವರು ಇವರ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದು ಈ ವಿಷಯವಾಗಿ ನನ್ನ ಪತಿಗೆ ಏನು ಮಾಡಬೇಕೆಂದು ತಿಳಿಯದೆ 30.03.2019ರಂದು ಡೆತ್ ನೋಟ್(ಸಾವಿನ ಪತ್ರ) ಬರೆದಿಟ್ಟು ಹೋಗಿರುತ್ತಾರೆ.

ಈ ಪ್ರಕರಣದಲ್ಲಿ ನನ್ನ ಗಂಡನ ವಿರುದ್ಧವಾಗಿ ಅನೇಕ ಘಟನೆಗಳು ನಡೆದವು . ಎನ್.ಬಿ. ಡಬ್ಬು ನೆಪ ಮಾಡಿಕೊಂಡು ಮಸ್ಸಿ ಪೊಲೀಸ್ ಠಾಣೆಯಲ್ಲಿ ಅವರಿಗೆ ದೈಹಿಕ ಮಾನಸಿಕ ಕಿರುಕುಳ ಕೊಟಿದ್ದಕ್ಕೆ ಬೇರೆ ದಾರಿ ಕಾಣದಂತಾಗಿ ಈ ರೀತಿ ಮನೆಬಿಟ್ಟು ಹೋಗಿರುತ್ತಾರೆ.

ಈ ಘಟನೆ ನಡೆದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾದ ಅವರು ಶಾಲೆಗೂ ಹೋಗದೆ ರಜೆ ಹಾಕಿ ಸುಮಾರು ಒಂದು ತಿಂಗಳು ಮನೆಯಲ್ಲಿಯೇ ಉಳಿದರು. ಮಾರ್ಚ್30ಕ್ಕೆ ಪತ್ರ ಬರೆದಿಟ್ಟು ಹೋದವರು ಇಲ್ಲಿಯವರೆಗೂ ಮನೆಗೆ ಬಂದಿಲ್ಲ . ಈ ಸಂಬಂಧವಾಗಿ ನಾನು ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ. ಮುಖ್ಯಮಂತ್ರಿಯವರಿಗೂ ಕೂಡ ಪತ್ರ ಹಾಕಿದ್ದೇನೆ. ಈ ಎಲ್ಲಾ ಘಟನೆಗೆ ಮೂಲಕಾರಣ ಫಹೀದ್ ನಚ್ಚಿಕದನ್ ಮತ್ತು ಅವನ ಸೋದರ ಇಲಿಯಾಸ್ ನಚ್ಚಿಕದನ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಅವರನ್ನು ಬಂಧಿಸಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಬೇಕು,ನಮಗೆ ಬರಬೇಕಾದ 80.78 ಲಕ್ಷ ರೂ.ಗಳನ್ನು ನಮಗೆ ಕೊಡಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆಯವರು ಸುರಕ್ಷಿತವಾಗಿ ಮನೆಗೆ ವಾಪಸ್ ಬರಬೇಕು.

ಇದರಿಂದಾಗಿ ನಮ್ಮ ಕುಟುಂಬ ಈಗ ಬೀದಿಗೆ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯವರು ಯಾವುದೇ ರೀತಿಯಿಂದಲೂ ನಮಗೆ ಸ್ಪಂದನೆ ನೀಡುತ್ತಿಲ್ಲ. ಇನ್ನು 10 ದಿನಗಳ ಮೇಲೆ ಆರೋಪಿಗಳನ್ನು ಬಂಧಿಸದೆ ಹೋದರೆ ನಮಗೆ ನಾವೇ ಏನಾದರೂ ಮಾಡಿಕೊಳ್ಳುತ್ತೇವೆ ಎಂದು ಸಂತ್ರಸ್ಥರು ತಮ್ಮ ನೋವನ್ನು ಹೇಳಿಕೊಂಡರು.

ಇನ್ನು ಮೇಲಾದರೂ ಧಾರವಾಡ SP ಅವರು ಸಂತ್ರಸ್ಥರ ಪರವಾಗಿ ನಿಂತು ಅವರ ನೋವಿಗೆ ಸ್ಪಂದಿಸುತ್ತಾರೋ? ಅಥವಾ ಆರೋಪಿಗಳ ಪರವಾಗಿ ನಿಲ್ಲುತ್ತಾರೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ.

TRENDING