
ರಾಯಚೂರು : ರಾಯಚೂರು ನಗರದ ಹತ್ತಿರವಿರುವ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಗಣಿ ಅವಘಡ ನಡೆದು ಓರ್ವನಿಗೆ ಗಂಭೀರ ಗಾಯವಾಗಿದೆ.
ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಟೆಕ್ನೋ ಮೈನ್ಸ್ ಕಂಪನಿಯ ಕಾರ್ಮಿಕ ನರಸಪ್ಪ ಗಿರಿಯಪ್ಪ(38) ಎಂಬ ಕಾರ್ಮಿಕ ಮಂಗಳವಾರ ಎರಡನೇ ಪಾಳೆಯ ಕರ್ತವ್ಯಕ್ಕೆ 3 ಘಂಟೆಗೆ ತೆರಳಿದ್ದರು.
ಅವರು ಕಾರ್ಯನಿರತರಾಗಿದ್ದ ವೇಳೆ ಸಂಜೆ ಐದರ ಸುಮಾರಿಗೆ ಡ್ರಿಲ್ಲಿಂಗ್ ಮಷೀನ್ ಗೆ ಬಲಗೈ ಸಿಕ್ಕ ಪರಿಣಾಮ ಹೆಬ್ಬೆರಳು ಕತ್ತರಿಸಿದೆ. ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಗುತ್ತಿಗೆ ಪಡೆದ ಟೆಕ್ನೋ ಮೈನ್ಸ್ ಕಂಪನಿಯ ಅಜಾಗರೂಕತೆಯೇ ಕಾರಣವೆಂದು ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.