Saturday, July 31, 2021
Homeಜಿಲ್ಲೆಚಾಮರಾಜನಗರಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಾಯಕ ಜನಾಂಗದ ಬೃಹತ್ ಪ್ರತಿಭಟನೆ

ಇದೀಗ ಬಂದ ಸುದ್ದಿ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಾಯಕ ಜನಾಂಗದ ಬೃಹತ್ ಪ್ರತಿಭಟನೆ

ಕೊಳ್ಳೇಗಾಲ : ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕಿರುವ ಮೀಸಲಾತಿಯನ್ನು ಶೇಕಡಾ 3.5 ರಿಂದ ಶೇಕಡಾ 7.5ಕ್ಕೆ ಏರಿಸಬೇಕೆಂದು ಆಗ್ರಹಿಸಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರದಲ್ಲಿ ನಾಯಕ ಜನಾಂಗದಿಂದ ಬೃಹತ್ ಪ್ರತಿಭಟನೆ ನಡೆಯಿತು.

            ನಗರದ ಬಸ್ ನಿಲ್ದಾಣದ ಬಳಿಯ ಗಣೇಶ ದೇವಸ್ಥಾನದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಅಲ್ಲಿಂದ ಹೊರಟು ಪ್ರಮುಖ ರಸ್ತೆಗಳಲ್ಲಿ ಸಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಬಳಿಕ ಮಸೀದಿ ವೃತ್ತದಲ್ಲಿ ಸಮಾವೇಶಗೊಂಡು ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು. ತದನಂತರ  ಎಡಿಬಿ ವೃತ್ತದಲ್ಲಿ ಕುಳಿತು ಧರಣಿ ನಡೆಸಿ ಬಳಿಕ ತಾಲ್ಲೂಕು ಕಛೇರಿಗೆ ತಲುಪಿ ಕಛೇರಿಯ ಅವರಣದಲ್ಲಿ ಕೆಲಕಾಲ ಧರಣಿ ನಡೆಸಿದರು‌.

           ಈ ಸಂದರ್ಭದಲ್ಲಿ ನಾಯಕ ಜನಂಗದ ಮುಖಂಡ ಕಲ್ಲಂಬಳ್ಲಿ ಸೋಮನಾಯಕ ಮಾತನಾಡಿ ಬಹಳ ವರ್ಷಗಳಿಂದ ನಾವು ಮೀಸಲಾತಿ ಹೆಚ್ಚಳಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಸ್ಟಿ ಪಟ್ಟಿಗೆ ಈಗಾಗಲೇ ಸುಮಾರು ಉಪಜಾತಿಗಳನ್ನು ಸೇರಿಸಲಾಗಿದೆ. ಆದರೆ ಮೀಸಲಾತಿ ಪ್ರಮಾಣ ಅಷ್ಟೇ ಇದೆ. ಹೀಗಾಗಿ ಮೀಸಲಾತಿ ಬೇರೆಯವರಿಗೆ ಹಂಚಿಕೆಯಾಗಿ ನಮಗೆ ಕೆಲವು ಭಾಗವಷ್ಟೇ ಸಿಗುತ್ತಿದೆ. ಇದರಿಂದ ರಾಜ್ಯದ ಜನಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿರುವ ನಮ್ಮ ಜನಾಂಗಕ್ಕೆ ಮೋಸವಾಗುತ್ತಿದೆ ಎಂದು ಹೇಳಿದರು.

         ನಾವು ನಿಮ್ಮ ಆಸ್ತಿಯಲ್ಲಿ ಭಾಗ ಕೇಳುತ್ತಿಲ್ಲ. ಬಾಬಾಸಾಹೇಬ ಅಂಬೇಡ್ಕರರು ನಮಗೆ ನೀಡಿರುವ ಸಂವಿಧಾನಬದ್ಧ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೆ ಎಂದರು. ಹಾಗಾಗಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಶೇಕಡಾ 7.5ಕ್ಕೆ ಕೂಡಲೇ ಏರಿಸಬೇಕು ಎಂದು ಒತ್ತಾಯಿಸಿದರು.

ತದನಂತರ ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಕುನಾಲ್ ಅವರಿಗೆ ಪ್ರತಿಭಟನಾನಿರತರು ತಮ್ಮ ಮನವಿ ಪತ್ರ ನೀಡಿದರು.

ಈ ವೇಳೆ ಜಿ.ಪಂ ಮಾಜಿ ಅಧ್ಯಕ್ಷ ರಾಮಚಂದ್ರ,ತಾ.ಪಂ ಸದಸ್ಯ ಕೃಷ್ಣ,ನಾಯಕ ಜನಾಂಗದ ಮುಖಂಡರಾದ ವಿ.ಗೋವಿಂದರಾಜು, ಬಾಲರಾಜ್‌ನಾಯಕ,ಸರಗೂರು ಶಿವು,ಸಿದ್ದಪ್ಪಾಜಿ,ಗೋವಿಂದರಾಜು,ಬಿ.ರವಿ,ಜಗದೀಶ್‌ನಾಯಕ,ಚಂದ್ರು,ಶ್ರೀಧರ್,ರವಿಕುಮಾರ್ ಮುಂತಾದವರಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img