Friday, November 27, 2020
Home ಜಿಲ್ಲೆ ಚಾಮರಾಜನಗರ ಬೀ ಕೇರ್ಫುಲ್,ಗೆಟ್ ರೆಡಿ : ಅಧಿಕಾರಿಗಳಿಗೆ ಶಾಸಕ ಮಹೇಶ್ ಖಡಕ್ ಸೂಚನೆ

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ಬೀ ಕೇರ್ಫುಲ್,ಗೆಟ್ ರೆಡಿ : ಅಧಿಕಾರಿಗಳಿಗೆ ಶಾಸಕ ಮಹೇಶ್ ಖಡಕ್ ಸೂಚನೆ

ಕೊಳ್ಳೇಗಾಲ : ಇದೇ ತಿಂಗಳ 21ರಿಂದ ಕೊಳ್ಳೇಗಾಲ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ಪ್ರಾರಂಭಿಸಲಾಗುತ್ತಿದ್ದು ಸಭೆಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿರಬೇಕು, ಬೀಕೇರ್ ಫುಲ್ ಗೆಟ್ ರೆಡಿ ಎಂದು ಶಾಸಕ ಎನ್.ಮಹೇಶ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

            ಕೊಳ್ಳೇಗಾಲ ನಗರದ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಶಾಸಕ ಮಹೇಶ್ ಮಾತನಾಡಿ ನನ್ನ ಒಂದು ವರ್ಷದ ಆಡಳಿತದ ಅವಧಿ ಮುಗಿದಿದೆ. ಸರ್ಕಾರದ ಯೋಜನೆಗಳು ಹಾಗೂ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯ್ತಿ ಹಂತದಲ್ಲಿ ಜನಸಂಪರ್ಕ ಸಭೆ ಮಾಡಲಾಗುತ್ತಿದೆ ಎಂದರು.

          ಸಭೆ ನಡೆಯುವ ಗ್ರಾ.ಪಂ.ನ ಎಲ್ಲಾ ಸಮುದಾಯಗಳಿಗೆ ಕರಪತ್ರವನ್ನು ತಲುಪಿಸುವ ವ್ಯವಸ್ಥೆ ಆಗಿದೆ. ನಮ್ಮ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಹಾಜರಿರುವಂತೆ ತಿಳಿಸಲಾಗಿದೆ. ಈ ಸಭೆಯಲ್ಲಿ ಕಡ್ಡಾಯವಾಗಿ ಇಲಾಖೆಯ ಎಚ್.ಓ.ಡಿ ಗಳೇ ಹಾಜರಾಗಬೇಕು. ಬದಲಿಗೆ ತಮ್ಮ ಅಧೀನದ ಕಿರಿಯ ಅಧಿಕಾರಿಗಳನ್ನು ಕಳುಹಿಸುವಂತಿಲ್ಲ ಎಂದು ಶಾಸಕ ಮಹೇಶ್ ಹೇಳಿದರು.

         ಜನಸಂಪರ್ಕ ಸಭೆಯಿಂದ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಬಹುದು. ಅಧಿಕಾರಿಗಳು ವಿವಿಧ ಸೌಲಭ್ಯಗಳ ಫಲಾನುಭವಿಗಳಿಗೆ ಸಭೆಯಲ್ಲೇ ಪತ್ರ ನೀಡಬೇಕು. ಯಾವುದನ್ನು ನೀಡಲು ಸಾಧ್ಯವಿಲ್ಲವೋ ಅದನ್ನು ಬಹಿರಂಗವಾಗಿ ಘೋಷಿಸಬೇಕು ಎಂದರು.

          ಜನರಿಂದ ಅನೇಕ ಅಹವಾಲುಗಳು ನೇರವಾಗಿ ನನ್ನ ಬಳಿ ಬರುತ್ತವೆ. ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಿದರೆ ನನ್ನ ಬಳಿ ಅಹವಾಲುಗಳು ಬರುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕೆ.ಸಿ.ಪಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

24 ಗಂಟೆ ಕುಡಿಯುವ ನೀರು ಯೋಜನೆ ಖಾಸಗಿಯಲ್ಲ

24×7 ಕುಡಿಯುವ ನೀರು ಯೋಜನೆ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆ ಕಂಪನಿಯವರು ಕೆಲಸ ಪ್ರಾರಂಭಿಸುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಈ ಯೋಜನೆ ಖಾಸಗೀಕರಣವಲ್ಲ. ಕಾಮಗಾರಿಯನ್ನು ಮಾಡುವುದು ಮಾತ್ರ ಖಾಸಗಿ ಕಂಪನಿ. ತದನಂತರ 5 ವರ್ಷ ಅದರ ನಿರ್ವಹಣೆ ಮಾಡುತ್ತಾರೆ. ಆದರೆ ದರ ನಿಗದಿ ಮತ್ತು ಬಿಲ್ ವಸೂಲಾತಿ ಎಲ್ಲವೂ ನಗರಸಭೆಯೇ ಮಾಡಲಿದೆ. ಇದೊಂದು ಉತ್ತಮ ಯೋಜನೆ ಎಂದು ಹೇಳಿದರು. ಹಾಗೇನಾದರೂ ಅಗತ್ಯ ಬಿದ್ದರೆ ಮತ್ತೊಮ್ಮೆ ಸಭೆ ಕರೆಯುತ್ತೇವೆ ಎಂದು ಶಾಸಕ ಮಹೇಶ್ ತಿಳಿಸಿದರು.

            ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಕ್ಷೇತ್ರ ಉಸ್ತುವಾರಿ ಕೆಂಪನಪಾಳ್ಯ ಸಿದ್ದರಾಜು, ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ‌ಉಪ್ಪಾರ್, ಪ್ರ.ಕಾರ್ಯದರ್ಶಿ ರಾಜೇಂದ್ರ, ನಗರಸಭಾ ಸದಸ್ಯರುಗಳಾದ ರಾಮಕೃಷ್ಣ, ನಾಸೀರ್‌ಷರೀಫ್, ಜಯಮರಿ ಮುಖಂಡರಾದ ಶಂಕನಪುರ ಜಗದೀಶ್ ಮುಂತಾದವರು ಹಾಜರಿದ್ದರು.

TRENDING