Saturday, July 31, 2021
Homeಜಿಲ್ಲೆಧಾರವಾಡ : ಮೀಸಲಾತಿ ಹೆಚ್ಚಳಕ್ಕಾಗಿ ಜೂ.21 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

ಇದೀಗ ಬಂದ ಸುದ್ದಿ

ಧಾರವಾಡ : ಮೀಸಲಾತಿ ಹೆಚ್ಚಳಕ್ಕಾಗಿ ಜೂ.21 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

ಧಾರವಾಡ : ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ಶೇ.7.5 ಮೀಸಲಾತಿ ನೀಡಿದೆ. ಆದರೆ ರಾಜ್ಯ ಸರ್ಕಾರ ಎಸ್ ಟಿ ಜನಾಂಗದವರಿಗೆ ಕೇವಲ ಶೇ.3 ರಷ್ಟು ಮೀಸಲಾತಿ ಮಾತ್ರ ನೀಡುತ್ತಿದ್ದು,ಈ ಹಿನ್ನಲೆಯಲ್ಲಿ ರಾಜ್ಯಸರ್ಕಾರ ಪರಿಶಿಷ್ಟ ಪಂಗಡದವರಿಗೂ ಶೇ.7.5 ರಷ್ಟು ಹೆಚ್ಚಿಸಬೇಕೆಂದು ಶ್ರೀವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಸುರೇಶಬಾಬು ತಳವಾರ ಆಗ್ರಹಿಸಿದ್ದಾರೆ.

ಇಂದು ಧಾರವಾಡ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ವಾಪ್ತಿ ಹೋರಾಟ ಹಮ್ಮಿಕೊಂಡಿದ್ದು,ಅದಕ್ಕಾಗಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು  ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಅದರ ಅಂಗವಾಗಿ ಜಿಲ್ಲೆಯ ಎಲ್ಲಾ ವಾಲ್ಮೀಕಿ ನಾಯಕ ಸಮಾಜ ಭಾಂಧವರು ಜೂನ್ 21 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಂಡಿದ್ದು,ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬರುವ ಎಲ್ಲಾ ಜನಾಂಗದವರು ಹಾಗೂ ಸಮಾಜದ ನೌಕರರು ಸಾಮೂಹಿಕ ರಜೆ ಹಾಕಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ನಂತರ ಮಾತನಾಡಿದ ಸುರೇಶ್ ಬಾಬು ಜೂ.25 ರಂದು ಬೆಂಗಳೂರಿನಲ್ಲಿ ಹೋರಾಟ ಹಮ್ಮಿಕೊಂಡಿದ್ದು,ಈ ಹೋರಾಟದಲ್ಲಿ ಜಿಲ್ಲೆಯ  ಸುಮಾರು 10 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಜುಟ್ಟಲ, ಮಹಾದೇವ ದೊಡ್ಡಮನಿ ಬಸವಂತಪ್ಪ ಬೈದಾರಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img