Saturday, July 31, 2021
Homeಜಿಲ್ಲೆಜಮಖಂಡಿ ಕಾರಹುಣ್ಣಿಮೆ : ಗಾಣದೇವಿಗೆ ಉಡಿ ತುಂಬಿ ಜೋಡಿ ಎತ್ತುಗಳಿಂದ ಕರಿ ಹರಿಯುವಿಕೆ

ಇದೀಗ ಬಂದ ಸುದ್ದಿ

ಜಮಖಂಡಿ ಕಾರಹುಣ್ಣಿಮೆ : ಗಾಣದೇವಿಗೆ ಉಡಿ ತುಂಬಿ ಜೋಡಿ ಎತ್ತುಗಳಿಂದ ಕರಿ ಹರಿಯುವಿಕೆ

ಬಾಗಲಕೋಟೆ : ಜಿಲ್ಲೆಯ ಜಮಖಂಡಿ ನಗರದಲ್ಲಿ ಇಂದು ಕಾರಹುಣ್ಣಿಮೆಯ ನಿಮಿತ್ತವಾಗಿ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಗಾಣದೇವಿ ಇರುವುದರಿಂದ ಶ್ರೀ ಗಾಣದೇವಿಗೆ ಮುಂಜಾನೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು. ಫಲಪುಷ್ಪಗಳಿಂದ ಶೃಂಗಾರ ಮಾಡಿ ನಂತರ ಶ್ರೀ ಗಾಣದೇವಿಗೆ ಭಕ್ತಿಪೂರ್ವಕವಾಗಿ ಉಡಿ ತುಂಬಿ ಜಮಖಂಡಿ ನಗರದ ಗಾಣಿಗ ಸಮಾಜದ ಸ್ತ್ರೀಯರಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

 ಸಾಯಂಕಾಲ ಜೋಡಿ ಎತ್ತುಗಳಿಂದ ಕರಿ ಹರಿಯುವ ಸ್ಪರ್ಧೆಯಲ್ಲಿ ಕೆಂಪು ಎತ್ತು ಕರಿ ಹರಿದಿದ್ದರಿಂದ ಈ ಬಾರಿ ಗೋಧಿ,ಕಡಲೆ ಮುಂತಾದ ಬೆಳೆಗಳು ಚೆನ್ನಾಗಿ ಬರುತ್ತವೆಂದು ಹೇಳಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಅವರ ಧರ್ಮ ಪತ್ನಿ ಅಶ್ವಿನಿ ಆನಂದ ನ್ಯಾಮಗೌಡ ಮತ್ತು ಬಸವರಾಜ ಸಿದ್ದು ನ್ಯಾಮಗೌಡ ಅವರ ಧರ್ಮಪತ್ನಿ ಕಾವ್ಯಾ ಬಸವರಾಜ ನ್ಯಾಮಗೌಡ,ಜಮಖಂಡಿ ತಾಲ್ಲೂಕಾ ಗಾಣಿಗ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯಾ ಜಂಬಗಿ, ರಾಜಶ್ರೀ ಈಶ್ವರ ನ್ಯಾಮಗೌಡ ಮುಂತಾದ ಮಹಿಳೆಯರು, ಮಕ್ಕಳು,ಪುರುಷರು ಭಾಗವಹಿಸಿದ್ದರು. ನಂತರ ಮಧ್ಯಾಹ್ನ ಬಂದ ಮುತ್ತೈದೆಯರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img