



ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ.
ಕುಡಿದ ಮತ್ತಿನಲ್ಲಿ ಗಂಡ ಕೊಡುತ್ತಿದ್ದ ಹಿಂಸೆಗೆ ಜೀವನ ನರಕವಾಗಿತ್ತು. ಗಂಡನ ಕಿರುಕುಳಕ್ಕೆ ಬೇಸತ್ತು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿ ಗೃಹಿಣಿಯೊಬ್ಬರು ತಾವು ಕೂಡ ಆತ್ಮಹತ್ಯೆ ಮಾಡಿಕೊಂಡ ಘನಘೋರ ಘಟನೆ ನಡೆದಿದೆ. ಮಕ್ಕಳಾದ ಅಕ್ಷತಾ(7),ಕಾವ್ಯ(4),ನಾಗರಾಜ್(2) ಮತ್ತು ಯಲ್ಲಮ್ಮ( 30 ) ಮೃತಪಟ್ಟ ದುರ್ದೈವಿಗಳು.
ರಾತ್ರಿ ಗಂಡ ಹೊರಗಡೆ ಮಲಗಿದ್ದ ವೇಳೆಯಲ್ಲಿ ಮನೆಯ ಒಳಗಡೆ ಮಲಗಿದ್ದ ನಾಲ್ಕು ಜನ ವಿಧಿವಶರಾಗಿದ್ದಾರೆ. ಮೊದಲು ಮಕ್ಕಳನ್ನು ಮನೆಯಲ್ಲಿರುವ ನೀರಿನ ಬಕೇಟ್ ನಲ್ಲಿ ಮುಳುಗಿಸಿ ಸಾಯಿಸಿದ ತಾಯಿ ಯಲ್ಲಮ್ಮ ತಾನೂ ಸಹ ಆತ್ಮಹತ್ಯೆಗ ಶರಣಾಗಿದ್ದಾಳೆ. ಈ ಮೂಲಕ ಗಂಡ ದಿನನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಗೃಹಿಣಿ ತನ್ನ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನು ಕಂಡ ಊರಿನ ಜನ ಮಮ್ಮಲ ಮರುಗುತ್ತಿದ್ದಾರೆ. ಎರೆಹಂಚಿನಾಳ ಗ್ರಾಮ ಅಕ್ಷರಶಃ ಕಣ್ಣೀರಿನಲ್ಲಿದೆ ಎಂದೇ ಹೇಳಬಹುದು. ಕುಕನೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡದಿದೆ.