Thursday, December 3, 2020
Home ಜಿಲ್ಲೆ ಕೋಲಾರ ಮಾಲೂರು ತಾಲ್ಲೂಕಿನ ಗಡಿನಾಡ ಕನ್ನಡಿಗರಿಗೆ ಸಮರ್ಪಕ ರಸ್ತೆಯಿಲ್ಲ!

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಮಾಲೂರು ತಾಲ್ಲೂಕಿನ ಗಡಿನಾಡ ಕನ್ನಡಿಗರಿಗೆ ಸಮರ್ಪಕ ರಸ್ತೆಯಿಲ್ಲ!

ಕೋಲಾರ : ಈ ಒಂದು ಕಾಲೋನಿಗೆ ತಲುಪಬೇಕು ಅಂದ್ರೆ ರಸ್ತೆ ಇಲ್ಲ. ಕೆಲವರು ಕಾಲೋನಿ’ಯ ಓಣಿಯ ದಾರಿಯನ್ನುGB ಎಂದು ತನ್ನನ್ನು ತಾನು ಕರೆದುಕೊಳ್ಳುವ ವ್ಯಕ್ತಿಯೊಬ್ಬ ಒತ್ತುವರಿ ಮಾಡಿಕೊಂಡು ಇದು ಸರ್ವೆ ನಂಬರ್ ಭೂಮಿ ಇದು ನಮ್ಮದು ಅಂತ ಕಾಲೋನಿಯ ನಿವಾಸಿಗಳಿಗೆ ಧಮ್ಕಿ ಹಾಕಿದ್ದಾರೆ. ನಮಗೆ ರಸ್ತೆ ಬೇಕು ಅಂತ ಅಧಿಕಾರಿಗಳನ್ನ ಅಂಗಲಾಚಿ ಬೇಡಿದರೂ ಪ್ರಯೋಜನವಾಗಿಲ್ಲ. ಏನಿದು ಅಂತೀರಾ? ಈ ಸ್ಟೋರಿ ನೋಡಿ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಅಣಿಕರಳ್ಳಿ ಕಾಲೋನಿಯ ನಿವಾಸಿಗಳ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ. ಕಾಲೋನಿಯಲ್ಲಿ ಸುಮಾರು 80 ವರ್ಷಗಳಿಂದ ಸುಮಾರು 18 ಕುಟುಂಬಗಳು ವಾಸ ಮಾಡುತ್ತಿದ್ದಾರೆ.

ಅವರು ದಿನ ನಿತ್ಯ ಓಡಾಡಬೇಕು ಅಂದ್ರೆ ಸರಿಯಾಗಿ ರಸ್ತೆ ಇಲ್ಲ. ತಮಿಳುನಾಡು ಕೂಗಳತೆ ದೂರದಲ್ಲಿ ಇರುವ ಅಣಿಕರಳ್ಳಿ ಕಾಲೋನಿಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿ ಇವರ ಸಮಸ್ಯೆ ಏನು? ಅಂತ ಕೇಳಿಲ್ಲ. ಇಷ್ಟು ದಿನ ತೋಟದ ದಾರಿ ಹಾಗೂ ಹೊಲಗಳಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಿದ್ದರು. ಈಗ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಉಳುಮೆಯಲ್ಲಿ ತೊಡಗಿ ಕಾಲೋನಿಗೆ ದಾರಿ ಇಲ್ಲದಂತಾಗಿದೆ. ಮುಖ್ಯರಸ್ತೆಯಿಂದ ಸ್ವಲ್ಪ ದೂರ ರಸ್ತೆ ಇದೆ ಮತ್ತೆ ಕಾಲೋನಿಗೆ ತಲುಪಬೇಕು ಅಂದ್ರೆ,ರಸ್ತೆ ಇಲ್ಲ ಕೆಲವರು ಕಾಲೋನಿಯ ಓಣಿಯನ್ನು ಒತ್ತುವರಿ ಮಾಡಿಕೊಂಡು ಇದು ಸರ್ವೆ ನಂಬರ್ ಭೂಮಿ ಇದು ನಮ್ಮದು ಅಂತ ಕಾಲೋನಿಯ ನಿವಾಸಿಗಳಿಗೆ ಧಮ್ಕಿ ಹಾಕಿದ್ದಾರೆ.

ಕಾಲೋನಿಯಲ್ಲಿ ಗರ್ಭಿಣಿ ಸ್ತ್ರೀಯರು ಹಾಗೂ ಮಕ್ಕಳು ಶಾಲೆಗೆ ಹೋಗಲು ರಸ್ತೆ ಇಲ್ಲದೆ ಕಲ್ಲು ಮುಳ್ಳಿನ ದಾರಿಯಲ್ಲಿ ಮುಖ್ಯರಸ್ತೆ ತಲುಪಬೇಕಾದ ದುಸ್ಥಿತಿ ಬಂದಿದೆ. ನಮಗೆ ನಮ್ಮ ಮಕ್ಕಳಿಗೆ ಓಡಾಡಲು ರಸ್ತೆ ಇಲ್ಲ ಅಂತ ಅಧಿಕಾರಿಗಳನ್ನು ಅಂಗಲಾಚಿ ಬೇಡಿದರೂ ಪ್ರಯೋಜನವಾಗಿಲ್ಲ. ಸರ್ವೆ ನಂಬರ್ ಭೂಮಿಯನ್ನ ಕಬಳಿಸಿದ್ದಲ್ಲದೆ ರಸ್ತೆ ಮಾಡಲು ಅವಕಾಶ ಕೊಡಿ ಅಂತ ಕೇಳಿದರೆ ಧಮ್ಕಿ ಹಾಕಿದ್ದಾರೆ. ನಾವು ಯಾರ ಹತ್ತಿರ ಸಮಸ್ಯೆ ಹೇಳಿಕೊಂಡರೂ ಇನ್ನೂ ಬಗೆಹರಿದಿಲ್ಲ. ಮತ್ತೆ ಕಾಲೋನಿಗೆ ರಸ್ತೆ,ಶೌಚಾಲಯ,ಚರಂಡಿ, ಮೂಲಭೂತ ಸೌಕರ್ಯಗಳು ನಮ್ಮ ಕಾಲೋನಿಗೆ ಸಿಗುತ್ತೆ ಅಂತ ಅಲ್ಲಿನ ನಿವಾಸಿಗಳು ಎದುರುನೋಡುತ್ತಿದ್ದಾರೆ.

ಒಟ್ಟಿನಲ್ಲಿ ತಮಿಳುನಾಡು ಗಡಿ ಕಾಲೋನಿ ಅಂತ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ವಿಪರ್ಯಾಸ. ಅವರು ನಮ್ಮ ಕನ್ನಡ ನಿವಾಸಿಗಳು ಅಂತ ಅಧಿಕಾರಿಗಳು ಇನ್ನಾದರೂ ಕಾಲೋನಿಗೆ ರಸ್ತೆ ಕಲ್ವಿಸಿಕೊಡುವವರೇ? ಕಾದು ನೋಡಬೇಕಾಗಿದೆ.

TRENDING