Monday, January 18, 2021
Home ಆರೋಗ್ಯ ಬೆಳಗಾವಿಯಲ್ಲೂ ವೈದ್ಯರ ಮುಷ್ಕರ,ಪ್ರತಿಭಟನೆ

ಇದೀಗ ಬಂದ ಸುದ್ದಿ

ಬೆಳಗಾವಿಯಲ್ಲೂ ವೈದ್ಯರ ಮುಷ್ಕರ,ಪ್ರತಿಭಟನೆ

ಬೆಳಗಾವಿ : ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿ ಮಹಿಳಾ ವೈದ್ಯರ ಮೇಲೆ ಮಾರಣಾಂತಿಕ ನಡೆಸಿದ ಹಲ್ಲೆ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಖಾಸಗಿ ವೈದ್ಯರು ಕರೆ ನೀಡಿರುವ ವೈದ್ಯಕೀಯ ಸೇವೆ ಬಂದ್ ಗೆ ಬೆಳಗಾವಿಯಲ್ಲೂ ಉತ್ತಮ ಪ್ರತಿಕ್ರಿಕಯೆ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ವೈದ್ಯರು ಬೆಳಗಾವಿಯಲ್ಲಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ವೈದ್ಯರ ಮುಷ್ಕರಕ್ಕೆ ಬೆಳಗಾವಿಯಲ್ಲೂ ಬೆಂಬಲವಿದೆ ಎಂದು ತೋರ್ಪಡಿಸಿದರು. ತುರ್ತುಚಿಕಿತ್ಸೆ ಹೊರತುಪಡಿಸಿ ವೈದ್ಯರು ಬೆಳಗಾವಿಯಲ್ಲಿ ಉಳಿದ ಓಪಿಡಿ ಸೇವೆ ಬಂದ್ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಸೇವೆ ಬಂದ್ ನಿಂದ ಜಿಲ್ಲೆಯಲ್ಲಿರುವ ಎಲ್ಲಾ ನರ್ಸಿಂಗ್ ಹೋಂ,ಕ್ಲಿನಿಕ್,ಸ್ಕ್ಯಾನಿಂಗ್ ಸೆಂಟರ್ ಬಂದ್ ಆಗಿದ್ದವು. ಈ ಮೂಲಕ ಜಿಲ್ಲೆಯ ವೈದ್ಯರೂ ಸಹ ಇಂದು ಮುಷ್ಕರ ನಡೆಸಿ ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯರ ಮೇಲೆ ನಡೆಸಿದ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ‌.

TRENDING