Monday, November 30, 2020
Home ಜಿಲ್ಲೆ ಧಾರವಾಡ : ಪೊಲೀಸ್ ಮಕ್ಕಳ ವಸತಿ ಶಾಲೆ ರಕ್ಷಿಸಿ

ಇದೀಗ ಬಂದ ಸುದ್ದಿ

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು

 ಕಲಬುರಗಿ, ನ. 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.

ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು...

ಮುಂಬೈ: ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು...

ಭಾರತೀಯ ಪೋಸ್ಟ್ ಗಳ ಗುರಿಯಾಗಿಸಿಕೊಂಡು ಮತ್ತೆ ಪಾಕ್...

 ಶ್ರೀನಗರ: ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಗಡಿಯಲ್ಲಿನ ಭಾರತೀಯ ಸೇನೆಯ...

ಅಫ್ಘಾನಿಸ್ತಾನದಲ್ಲಿ ಪುಲ್ವಾಮ ಮಾದರಿಯ ದಾಳಿ : 30...

ಕಾಬೂಲ್: ಅಫ್ಘಾನಿಸ್ತಾನದ ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ...

SBI ನಲ್ಲಿ ಮಕ್ಕಳ ಖಾತೆ ತೆರೆಯುವುದು ಹೇಗೆ.?...

ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್‌ಬಿಐ ತಂದಿದೆ.

ಧಾರವಾಡ : ಪೊಲೀಸ್ ಮಕ್ಕಳ ವಸತಿ ಶಾಲೆ ರಕ್ಷಿಸಿ

ಧಾರವಾಡ : ಶಾಲೆ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯವರ ನಿರ್ಲಕ್ಷ್ಯದಿಂದ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆ ಅಧೋಗತಿಯತ್ತ ಸಾಗುತ್ತಿದ್ದು,ಅದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಶಿವಾನಂದ ಜೋಡಳ್ಳಿ ಆಗ್ರಹಿಸಿದರು .

ಧಾರವಾಡದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲಾ ಆಡಳಿತ ಮಂಡಳಿ ಏಕಾಏಕಿ ಶಿಕ್ಷಕರನ್ನು ಹೊರ ಹಾಕುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಏಕೈಕ ಪೊಲೀಸ್ ಮಕ್ಕಳ ವಸತಿ ಶಾಲೆ ಉಳಿಸಿ ಬೆಳಸುವಂತೆ ಮನವಿ ಮಾಡಿದರು . ಶಾಲೆಯ ಅಧೋಗತಿಗೆ ಕಾರಣಗಳೇನು ಎಂಬುದರ ಕುರಿತು ಮೊದಲು ತನಿಖೆ ಮಾಡಬೇಕು. ಜತೆಗೆ ಶಾಲೆಯ ಫಲಿತಾಂಶ ಕುಸಿಯಲು ಕಾರಣಗಳೇನು? ಪ್ರಸಕ್ತ ವರ್ಷದಲ್ಲಿ ಇಷ್ಟು ಕಡಿಮೆ ಫಲಿತಾಂಶ ಬರಲು ಕಾರಣಗಳು ಏನು? ಎಂಬುದರ ಬಗ್ಗೆ ಸೂಕ್ತವಾಗಿ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಶಾಲೆ ಆರಂಭವಾದಾಗಿನಿಂದ ಈವರೆಗೂ 20 ಬ್ಯಾಚ್‌ಗಳು ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಪೈಕಿ 8 ಬ್ಯಾಚ್ ಗಳು ಶೇ.100 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಉಳಿದ 10 ಬ್ಯಾಚ್‌ಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.90 ರಿಂದ ಶೇ.97 ರಷ್ಟು ಫಲಿತಾಂಶ ಪಡೆದಿವೆ. ಪ್ರಸಕ್ತ ವರ್ಷ ಶೇ.77 ರಷ್ಟು ಫಲಿತಾಂಶ ಬಂದಿದೆ ನಿಜಾ. ಇದಕ್ಕೆ ಕಾರಣ ಜಿಲ್ಲೆಯ ಫಲಿತಾಂಶ ಕಡಿಮೆ ಆಗಿರುವುದು ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸದ್ಯ ಶಾಲೆ ಉತ್ತಮ ಕಟ್ಟಡ ಹೊಂದಿದೆ ಎಂಬ ಕಾರಣಕ್ಕೆ ಕೆಲವರು ಖಾಸಗಿ ಶಾಲೆ ಮಾಡಲು ಹೊರಟಿದ್ದಾರೆ. ಅಲ್ಲದೆ ಆಡಳಿತ ಮಂಡಳಿಯವರೇ ಸ್ವತಃ ಪೋಷಕರಿಗೆ ಕರೆ ಮಾಡಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬೇರೆ ಶಾಲೆಗೆ ಸೇರಿಸಿ ಎಂದು ಹೇಳುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ . ಈ ಹಿನ್ನೆಲೆಯಲ್ಲಿ ಮೊದಲಿನಂತೆ ಶಾಲೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಕರಮಡಿ,ರಾಜೇಶ ಶಿಂಧೆ,ಪ್ರಶಾಂತ ಅಮೃತಯ್ಯನವರ, ಬಸವರಾಜ ಕೊರವರ ಸೇರಿದಂತೆ ಇತರರು ಹಾಜರಿದ್ದರು.

TRENDING